‘ಮುಸ್ಲಿಮರಿಗೆ ರಾಜಕೀಯದಲ್ಲಿ ಭಾಗವಹಿಸುವ ಹಕ್ಕು ಇರಬಾರದು’, ಎಂಬ ಸುಳ್ಳಿನ ಮೇಲೆ ಹಿಂದುತ್ವ ನಿಂತಿದೆ ! – ಅಸದುದ್ದೀನ್ ಒವೈಸಿ

‘ಹಿಂದುತ್ವ’ವನ್ನು ತಮಗೆ ಬೇಕಾದಂತೆ ವ್ಯಾಖ್ಯಾನಿಸಲು ಅಥವಾ ಟೀಕಿಸಲು ನೈಪುಣ್ಯವಿರುವ ಓವೈಸಿ !

ನವ ದೆಹಲಿ – ರಾಜಕೀಯ ಅಧಿಕಾರವನ್ನು ಒಂದು ಸಮುದಾಯದಲ್ಲಿ ಮಾತ್ರ ಕೇಂದ್ರೀಕರಿಸಬೇಕು ಮತ್ತು ಮುಸ್ಲಿಮರಿಗೆ ರಾಜಕೀಯದಲ್ಲಿ ಭಾಗವಹಿಸುವ ಯಾವುದೇ ಹಕ್ಕು ಇರಬಾರದು. ಈ ಸುಳ್ಳಿನ ಮೇಲೆ ರಾ. ಸ್ವಂ. ಸೇವಕ ಸಂಘದ ಹಿಂದುತ್ವ ಆಧಾರಿತವಾಗಿದೆ.

ಸಂಸತ್ತು ಮತ್ತು ವಿಧಾನಸಭೆಯಲ್ಲಿ ಮುಸ್ಲಿಂ ಸಮುದಾಯದ ಪ್ರತಿನಿಧಿಗಳ ಹೆಚ್ಚೆಚ್ಚು ಉಪಸ್ಥಿತಿಯಿಂದ ಸುಳ್ಳು ಹಿಂದುತ್ವನಿಷ್ಠ ಸಂಘದ ವಿರುದ್ಧ ಕರೆ ನೀಡುವ ಕೆಲಸ ಆಗುವುದು ಎಂದು ಎಂ.ಐ.ಎಂ.ನ ಅಧ್ಯಕ್ಷ ಮತ್ತು ಸಂಸದ ಅಸದುದ್ದೀನ್ ಒವೈಸಿ ಟ್ವೀಟ್ ಮಾಡಿದ್ದಾರೆ. ಬಿಹಾರ್ ಚುನಾವಣೆಯಲ್ಲಿ ಒವೈಸಿ ಪಕ್ಷ ೫ ಸ್ಥಾನಗಳನ್ನು ಗೆದ್ದಿದೆ. ಈ ಹಿನ್ನೆಲೆಯಲ್ಲಿಯೇ ಅವರು ಈ ಟ್ವೀಟ್ ಅನ್ನು ಮಾಡಿದ್ದಾರೆ.