ಐಎಎಸ್ ಅಧಿಕಾರಿ ದಂಪತಿ ಟೀನಾ ಡಾಬಿ ಮತ್ತು ಅಥರ್ ಖಾನ್ ವಿವಾಹ ವಿಚ್ಛೇದನೆಗಾಗಿ ಅರ್ಜಿ

ಜೋಧಪುರ (ರಾಜಸ್ಥಾನ) – ಹಿಂದೂ ಮಹಾಸಭೆಯು ‘ಲವ್ ಜಿಹಾದ್’ ಎಂದು ಆರೋಪಿಸಿದ ಐ.ಎ.ಎಸ್. ಅಧಿಕಾರಿ ಟೀನಾ ದಾಬಿ ಮತ್ತು ಅಥರ್ ಖಾನ್ ಮದುವೆಯಾದ ಎರಡು ವರ್ಷಗಳ ನಂತರ ಇಲ್ಲಿನ ಕುಟುಂಬ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನೆಗಾಗಿ ಅರ್ಜಿ ಸಲ್ಲಿಸಿದ್ದಾರೆ.

ವಿವಾಹ ವಿಚ್ಛೇದನೆಯ ಹಿಂದಿನ ಕಾರಣ ತಿಳಿದುಬಂದಿಲ್ಲ. ೨೦೧೫ ರಲ್ಲಿ ಟೀನಾ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಪ್ರಥಮ ಸ್ಥಾನದಲ್ಲಿ ಮತ್ತು ಅಥರ್ ಎರಡನೇ ಸ್ಥಾನದಲ್ಲಿ ಉತ್ತೀರ್ಣರಾಗಿದ್ದರು. ತರಬೇತಿಯ ಸಮಯದಲ್ಲಿ ಅವರು ಒಟ್ಟಿಗೆ ಇದ್ದಾಗ ಅವರಲ್ಲಿ ಪ್ರೀತಿ ನಿರ್ಮಾಣವಾಗಿ ಅವರು ಮದುವೆಯಾಗಿದ್ದರು.