ಬಂಗಾಲದಲ್ಲಿ ಬಿಜೆಪಿ ಸರಕಾರ ಬಂದರೆ, ‘ಲವ್ ಜಿಹಾದ್’ ವಿರುದ್ಧ ಕಾನೂನು ರೂಪಿಸುತ್ತೇವೆ ! – ಬಂಗಾಲದ ಬಿಜೆಪಿಯ ಸಂಸದೆ, ಲಾಕೆಟ್ ಚಟರ್ಜಿ

ಒಂದೊಂದು ರಾಜ್ಯದಲ್ಲಿ ಬಿಜೆಪಿ ಇಂತಹ ಕಾನೂನನ್ನು ಮಾಡುವ ಬದಲು, ಕೇಂದ್ರದಲ್ಲಿ ತನ್ನದೇ ಸರಕಾರವನ್ನು ಹೊಂದಿರುವುದರಿಂದ ಇಡೀ ದೇಶಕ್ಕಾಗಿ ‘ಲವ್ ಜಿಹಾದ್’ ವಿರುದ್ಧ ಕಾನೂನು ರೂಪಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ. ಇದರೊಂದಿಗೆ ಮತಾಂತರ ವಿರೋಧಿ ಕಾನೂನು, ಜನಸಂಖ್ಯಾ ನಿಯಂತ್ರಣ ಕಾನೂನು ಮತ್ತು ಸಮಾನ ನಾಗರಿಕ ಸಂಹಿತೆ ತರುವಂತಹ ಹಳೆಯ ಬೇಡಿಕೆಗಳನ್ನು ತಕ್ಷಣವೇ ಪೂರೈಸಬೇಕು !

ಕೋಲಕಾತಾ (ಬಂಗಾಲ) – ರಾಜ್ಯದಲ್ಲಿ ೨೦೨೧ ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ‘ಲವ್ ಜಿಹಾದ್’ ವಿರುದ್ಧ ಕಾನೂನು ಜಾರಿಗೊಳಿಸುತ್ತೇವೆ ಮತ್ತು ‘ಲವ್ ಜಿಹಾದ್’ ಅನ್ನು ನಿಷೇಧಿಸುತ್ತೇವೆ, ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಬಂಗಾಲದ ಸಂಸದೆ ಲಾಕೆಟ್ ಚಟರ್ಜಿ ಹೇಳಿದರು. ‘ಲವ್ ಜಿಹಾದ್’ ಪ್ರಕರಣಗಳಲ್ಲಿ ಬಂಗಾಲ ಮುಂಚೂಣಿಯಲ್ಲಿದೆ’ ಎಂದು ಈ ಹಿಂದೆ ವಿಶ್ವ ಹಿಂದೂ ಪರಿಷತ್ತು ಹೇಳಿತ್ತು.

ಬಂಗಾಲದಲ್ಲಿ ಮುಸ್ಲಿಂ ಪುರುಷನನ್ನು ಮದುವೆಯಾದ ಹಿಂದೂ ಹುಡುಗಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ. ಈ ಸಂದರ್ಭದಲ್ಲಿ ಸಂಸದೆ ಲಾಕೆಟ್ ಚಟರ್ಜಿ ಯುವತಿಯ ಕುಟುಂಬವನ್ನು ಭೇಟಿಯಾದರು. ಅದೇರೀತಿ ಸಂತ್ರಸ್ತೆಯ ಸಾವಿಗೆ ಕಾರಣರಾದವರಿಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.


(ಸೌಜನ್ಯ : KolkataToday)

ಈ ಘಟನೆಯಲ್ಲಿ, ಬೆಹಲಾ ಪ್ರದೇಶದ ಮುಸ್ಲಿಂ ಯುವಕನೊಬ್ಬ ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಅವಳನ್ನು ಮದುವೆಯಾದನು ಮತ್ತು ನಂತರ ಅವಳು ಗರ್ಭಿಣಿಯಾಗಿದ್ದಾಗ ಅವಳ ಹತ್ಯೆ ಮಾಡಿದನು.