ಬಿಜೆಪಿ ಶಾಸಕರು ಪೂಜಾ ಸ್ಥಳದಲ್ಲಿದ್ದ ಆಸನಗಳನ್ನು ಒದ್ದರು !

ಹುತಾತ್ಮರ ಸ್ಮಾರಕದ ಭೂಮಿ ಪೂಜೆಯ ಸಮಾರಂಭಕ್ಕೆ ಬದಲಾಪುರ ಮತದಾನ ಕ್ಷೇತ್ರದ ಬಿಜೆಪಿ ಶಾಸಕ ರಮೇಶಚಂದ್ರ ಮಿಶ್ರಾ ಅವರನ್ನು ಆಹ್ವಾನಿಸಿರಲಿಲ್ಲ ಮತ್ತು ಕಾರ್ಯಕ್ರಮದ ಸ್ಥಳದಲ್ಲಿ ಫಲಕದಲ್ಲಿಯೂ ಅವರ ಹೆಸರಿಲ್ಲದ ಕಾರಣ ಅವರು ಕಾರ್ಯಕ್ರಮದ ಸ್ಥಳಕ್ಕೆ ಹೋಗಿ ಪೂಜೆಗಾಗಿ ಇಡಲಾಗಿದ್ದ ಆಸನಗಳನ್ನು ಕಾಲಿನಿಂದ ಒದ್ದರು.

ಉತ್ತರಪ್ರದೇಶದಲ್ಲಿ ಜಾತಿಯ ಸ್ಟಿಕ್ಕರ್‌ಗಳನ್ನು ಹೊಂದಿರುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು

ಉತ್ತರ ಪ್ರದೇಶದಲ್ಲಿ ವಾಹನ ಸಂಖ್ಯೆ ಫಲಕಗಳಲ್ಲಿ ಜಾತಿಯನ್ನು ಬರೆಯುವ ಪದ್ದತಿಯಿದೆ. ಇದರಲ್ಲಿ ಯಾದವ್, ಜಾಟ್, ಗುರ್ಜರ್, ಬ್ರಾಹ್ಮಣ, ಪಂಡಿತ್, ಕ್ಷತ್ರಿಯ, ಲೋಧಿ, ಮೌರ್ಯ ಮುಂತಾದ ವಿವಿಧ ಜಾತಿಗಳ ಹೆಸರಿನ ಸ್ಟಿಕ್ಕರ್‌ಗಳನ್ನು ಅಂಟಿಸಲಾಗುತ್ತಿದೆ. ಇದು ಜಾತಿಯ ಮಹತ್ವವನ್ನು ತೋರಿಸುವ ಪ್ರಯತ್ನವಾಗಿದೆ

ಉತ್ತರ ಪ್ರದೇಶದಲ್ಲಿ ಒಂದು ತಿಂಗಳಲ್ಲಿ ‘ಲವ್ ಜಿಹಾದ್’ ವಿರುದ್ಧ ಕಾನೂನಿನಡಿಯಲ್ಲಿ ೩೫ ಜನರ ಬಂಧನ !

ನವೆಂಬರ್ ೨೭ ರಂದು ರಾಜ್ಯದಲ್ಲಿ ಲವ್ ಜಿಹಾದ್ ವಿರೋಧಿ ಕಾನೂನು ಜಾರಿಗೆ ಬಂದಾಗಿನಿಂದ, ಇಲ್ಲಿಯವರೆಗೆ ಪೊಲೀಸರು ಒಂದು ತಿಂಗಳಲ್ಲಿಯೇ ೧೨ ಪ್ರಕರಣಗಳನ್ನು ದಾಖಲಿಸಿದ್ದು, ೩೫ ಜನರನ್ನು ಬಂಧಿಸಿದ್ದಾರೆ. ಸೀತಾಪುರ, ಗ್ರೇಟರ್ ನೋಯ್ಡಾ, ಶಾಹಜಹಾನಪುರ್, ಅಜಮ್‌ಗಡ, ಮುರಾದಾಬಾದ್, ಮುಜಫ್ಫರನಗರ, ಬಿಜನೌರ್, ಕನ್ನೌಜ್, ಬರೇಲಿ ಮತ್ತು ಹರದೊಯಿ ಈ ಸ್ಥಳಗಳಲ್ಲಿ ಅಪರಾಧಗಳನ್ನು ದಾಖಲಿಸಲಾಗಿದೆ.

ಉಜ್ಜೈನಿನಲ್ಲಿ ಹಿಂದುತ್ವನಿಷ್ಠರ ಮೇಲೆ ಕಲ್ಲೆಸೆದ ಮತಾಂಧರ ಅಕ್ರಮ ಮನೆಗಳು ನಗರ ಪಾಲಿಕೆಯಿಂದ ನೆಲಸಮ !

ಸ್ಥಳಿಯ ಹಿಂದುತ್ವನಿಷ್ಠ ಸಂಘಟನೆಗಳು ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ಅರ್ಪಣೆ ಸಂಗ್ರಹಿಸಲು ಒಂದು ಮೆರವಣಿಗೆಯನ್ನು ನಡೆಸಿದ್ದರು. ಮೆರವಣಿಕೆ ಮುಸ್ಲಿಂ ಬಹುಸಂಖ್ಯಾತ ಬೇಗುಂಬಾಗ್ ಪ್ರದೇಶದಲ್ಲಿ ಸಾಗುತ್ತಿದ್ದಾಗ ಇವರ ಮೇಲೆ ಕಲ್ಲು ತೂರಾಟ ಮಾಡಲಾಯಿತು ಮತ್ತು ಕೆಲವು ವಾಹನಗಳನ್ನು ಧ್ವಂಸಗೊಳಿಸಲಾಯಿತು.

ಉಜ್ಜೈನಿನ ನಾಥ ಸಂಪ್ರದಾಯದ ಪಂಚ ಪೀರ ಸಮಾಧಿಗೆ ಹಸಿರು ಬಣ್ಣ ಬಳಿದು ಅದನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಮತಾಂಧರನ್ನು ಸಾಧುಗಳು ಓಡಿಸಿದರು !

ಸ್ಥಳೀಯ ಭರ್ತೃಹರಿ ಗುಹೆಯ ಬಳಿಯಿರುವ ನಾಥ ಸಂಪ್ರಯದ ಖಾಸಗಿ ಜಮೀನಿನಲ್ಲಿರುವ ಪಂಚ ಪೀರರ ಸಮಾಧಿಯ ಮೇಲೆ ಮತಾಂಧರು ಹಸಿರು ಬಣ್ಣವನ್ನು ಬಳಿಯಲು ಪ್ರಯತ್ನಿಸುತ್ತಿರುವಾಗ, ಭರ್ತೃಹರಿ ಗುಹೆಯ ಮಹಾಂತ ಪೀರ್ ಯೋಗಿ ಶ್ರೀ ರಾಮನಾಥ ಮಹಾರಾಜರು ಸಾಧು-ಸಂತರ ಮಾಧ್ಯಮದಿಂದ ಅವರನ್ನು ವಿರೋಧಿಸುತ್ತಾ ಅವರನ್ನು ಅಲ್ಲಿಂದ ಓಡಿಸಿದ್ದಾರೆ.

ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಪೊಲೀಸರು, ಶಿಕ್ಷಕರು ಮತ್ತು ಆರೋಗ್ಯ ಕಾರ್ಯಕರ್ತರು ಮುಸ್ಲಿಮರಾಗಿರಬೇಕು !

ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಮುಸ್ಲಿಂ ಪೊಲೀಸರು, ಶಿಕ್ಷಕರು ಮತ್ತು ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಲು ಕೇಂದ್ರದ ಅಲ್ಪಸಂಖ್ಯಾತ ಸಚಿವಾಲಯ ಸರಕಾರಕ್ಕೆ ಶಿಫಾರಸು ಮಾಡಿರುವ ಬಗ್ಗೆ ವಾರ್ತೆ ಪ್ರಸಾರವಾಗಿದೆ.

ಪಂಜಾಬ್‌ನಲ್ಲಿ ಸಂಘದ ಸ್ವಯಂಸೇವಕನನ್ನು ಹತ್ಯೆ ಮಾಡಿದ ಖಲಿಸ್ತಾನಿಗಳ ಬ್ರಿಟನ್‌ನಲ್ಲಿ ಬಂಧನ ಮತ್ತು ಜಾಮೀನಿನ ಮೇಲೆ ಬಿಡುಗಡೆ

ಬ್ರಿಟನ್‌ನ ವೆಸ್ಟ್ ಮಿಡ್‌ಲ್ಯಾಂಡ್ಸ್‌ನ ಪೊಲೀಸರು ಖಲಿಸ್ತಾನ್ ಬೆಂಬಲಿಗರನ್ನು ಬಂಧಿಸಿದ್ದಾರೆ. ಅವರ ಮೇಲೆ ೨೦೦೯ ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂಸೇವಕ ರುಲ್ದಾ ಸಿಂಗ್ ಅವರನ್ನು ಕೊಲೆ ಮಾಡಿದ ಆರೋಪವಿದೆ. ಬಂಧಿತರಾದ ಗುರಶರಣಬೀರ್ ಸಿಂಗ್ ವಹಿವಾಲಾ, ಅಮೃತಬೀರ್ ಸಿಂಗ್ ವಹಿವಾಲಾ ಮತ್ತು ಪ್ಯಾರಾ ಸಿಂಗ್ ಗಿಲ್ ಎಲ್ಲರೂ ಬ್ರಿಟನ್ ಪ್ರಜೆಗಳಾಗಿದ್ದಾರೆ.

ಸಾಮೂಹಿಕ ಅತ್ಯಾಚಾರದ ದೂರು ನೀಡಲು ಹೋದ ಸಂತ್ರಸ್ತೆಯ ಮೇಲೆ ಮತ್ತೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ !

ಸ್ಥಳೀಯ ಜಲಾಲಾಬಾದ ಪೊಲೀಸ್ ಠಾಣೆಯಲ್ಲಿ ಸಾಮೂಹಿಕ ಅತ್ಯಾಚಾರದ ದೂರು ನೀಡಲು ತೆರಳಿದ್ದ ಮದನಪುರ ಪ್ರದೇಶದ ೩೫ ವರ್ಷದ ಮಹಿಳೆಯ ಮೇಲೆ ಪೊಲೀಸ್ ಅಧಿಕಾರಿಯು ಮತ್ತೆ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.

ಹಂದಿಯ ಅಂಶವಿರುವ ಕೊರೋನಾದ ಲಸಿಕೆಗೆ ‘ಸಂಯುಕ್ತ ಅರಬ ಅಮಿರಾತ ಫತವಾ ಪರಿಷತ್ತ್’ನ ಒಪ್ಪಿಗೆ

ಪರಿಷತ್ತಿನ ಅಧ್ಯಕ್ಷ ಶೇಖ ಅಬ್ದುಲ್ಲಾ ಬಿನ್ ಬಯ್ಯಾ ಅವರು, ಯಾವುದೇ ಪರ್ಯಾಯ ಲಭ್ಯವಿಲ್ಲದಿರುವಾಗ ಹಾಗೂ ಈ ಸಮಯದಲ್ಲಿ ಮನುಷ್ಯನ ಶರೀರದ ರಕ್ಷಣೆ ಮಾಡುವುದು ಹೆಚ್ಚು ಮಹತ್ವದ್ದಾಗಿರುವಾಗ, ಕೊರೋನಾದ ವಿಷಯದಲ್ಲಿ ‘ಪೋರ್ಕ್ ಜಿಲೆಟಿನ್’ ನನ್ನು ‘ಆಹಾರ’ ಎಂದು ತಿಳಿಯದೇ, ಅದು ಔಷಧಿ ಎಂದು ನೋಡಲಾಗುತ್ತದೆ ಎಂದು ಹೇಳಿದರು.

ಒಡಿಶಾದ ಪ್ರಾಚೀನ ದಕ್ಷೇಶ್ವರ ದೇವಸ್ಥಾನದ ೨೨ ಅಮೂಲ್ಯ ವಿಗ್ರಹಗಳ ಕಳ್ಳತನ

ಒಡಿಶಾದ ಖುರಧಾ ಜಿಲ್ಲೆಯ ಬಾನಪುರದಲ್ಲಿರುವ ಪ್ರಾಚೀನ ಮತ್ತು ಐತಿಹಾಸಿಕ ದಕ್ಷೇಶ್ವರ ದೇವಸ್ಥಾನದಲ್ಲಿ ಆದ ಕಳ್ಳತನದಲ್ಲಿ ಕಳ್ಳರು ೨೨ ಪ್ರಾಚೀನ ವಿಗ್ರಹಗಳನ್ನು ಕದ್ದೊಯ್ದಿದ್ದಾರೆ. ಕನಕ ದುರ್ಗಾ, ಗೋಪಿನಾಥ ದೇವ, ಕಲಿಯುಗೇಶ್ವರ ದೇವ, ಚಂದ್ರಶೇಖರ ದೇವ ಇತ್ಯಾದಿ ದೇವತೆಗಳು ಸೇರಿರುವ ಅಷ್ಟಧಾತುವಿನ ಈ ಎಲ್ಲಾ ವಿಗ್ರಹಗಳು ಕೋಟ್ಯಂತರ ರೂಪಾಯಿ ಮೌಲ್ಯದ ವಿಗ್ರಹಗಳಾಗಿವೆ.