|
ಶಾಹಜುಹಾನಪುರ (ಉತ್ತರ ಪ್ರದೇಶ) – ಸ್ಥಳೀಯ ಜಲಾಲಾಬಾದ ಪೊಲೀಸ್ ಠಾಣೆಯಲ್ಲಿ ಸಾಮೂಹಿಕ ಅತ್ಯಾಚಾರದ ದೂರು ನೀಡಲು ತೆರಳಿದ್ದ ಮದನಪುರ ಪ್ರದೇಶದ ೩೫ ವರ್ಷದ ಮಹಿಳೆಯ ಮೇಲೆ ಪೊಲೀಸ್ ಅಧಿಕಾರಿಯು ಮತ್ತೆ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.
(ಚಿತ್ರ ಸೌಜನ್ಯ : TIMES NOW)
ಪೀಡಿತ ಮಹಿಳೆಯು ಸುದ್ಧಿಗಾರರೊಂದಿಗೆ ಮಾತನಾಡುತ್ತಾ, ನವೆಂಬರ್ ೩೦ ರಂದು ತನ್ನ ಮನೆಗೆ ತೆರಳುತ್ತಿದ್ದ ಸಮಯದಲ್ಲಿ ರಸ್ತೆಯಲ್ಲಿ ಕಾರೊಂದು ಅವಳ ಬಳಿ ನಿಂತಿತು. ಅದರಲ್ಲಿದ್ದ ೫ ಮಂದಿ ಅವಳನ್ನು ಬಲವಂತವಾಗಿ ಅದರಲ್ಲಿ ಕೂರಿಸಿ ಹತ್ತಿರದ ಹೊಲಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದರು. ನಂತರ ಸಂತ್ರಸ್ತೆ ಜಲಾಲಾಬಾದ್ ಪೊಲೀಸ್ ಠಾಣೆಗೆ ಹೋದಾಗ ಅಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಉಪಸ್ಥಿತರಿದ್ದರು. ಅವನು ಅವಳನ್ನು ತನ್ನ ಕೋಣೆಗೆ ಕರೆದೊಯ್ದು ಅತ್ಯಾಚಾರ ಮಾಡಿದನು. ಎರಡೂ ಪ್ರಕರಣಗಳಲ್ಲಿ ಯಾವುದೇ ದೂರು ದಾಖಲಾಗದ ಕಾರಣ, ಆಕೆ ಬರೇಲಿಯ ಸಹಾಯಕ ಪೊಲೀಸ್ ಮಹಾನಿರ್ದೇಶಕ ಅವಿನಾಶ ಚಂದ್ರ ಅವರನ್ನು ಭೇಟಿಯಾದಳು. ಅವರು ತನಿಖೆಗೆ ಆದೇಶಿಸಿದ್ದಾರೆ.