ಮಹಾರಾಷ್ಟ್ರದ ಶಿಕ್ಷಕರೊಬ್ಬರು ಕಳುಹಿಸಿದ ಪತ್ರದ ಮೇರೆಗೆ ಪ್ರಧಾನಿ ಕಚೇರಿಯಿಂದ ಸೂಚನೆ
|
ನವ ದೆಹಲಿ – ಉತ್ತರ ಪ್ರದೇಶದಲ್ಲಿ ವಾಹನ ಸಂಖ್ಯೆ ಫಲಕಗಳಲ್ಲಿ ಜಾತಿಯನ್ನು ಬರೆಯುವ ಪದ್ದತಿಯಿದೆ. ಇದರಲ್ಲಿ ಯಾದವ್, ಜಾಟ್, ಗುರ್ಜರ್, ಬ್ರಾಹ್ಮಣ, ಪಂಡಿತ್, ಕ್ಷತ್ರಿಯ, ಲೋಧಿ, ಮೌರ್ಯ ಮುಂತಾದ ವಿವಿಧ ಜಾತಿಗಳ ಹೆಸರಿನ ಸ್ಟಿಕ್ಕರ್‌ಗಳನ್ನು ಅಂಟಿಸಲಾಗುತ್ತಿದೆ. ಇದು ಜಾತಿಯ ಮಹತ್ವವನ್ನು ತೋರಿಸುವ ಪ್ರಯತ್ನವಾಗಿದೆ; ಆದರೆ ಈಗ ಉತ್ತರ ಪ್ರದೇಶದ ಸಾರಿಗೆ ಇಲಾಖೆಯು ಇಂತಹ ಜಾತಿಯ ಗುರುತನ್ನು ತೋರಿಸುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲು ಪ್ರಾರಂಭಿಸಿದೆ. ಪ್ರಧಾನಿ ಕಚೇರಿಯಿಂದ ಸೂಚನೆ ಸಿಕ್ಕಿದ ನಂತರ ಸಾರಿಗೆ ಇಲಾಖೆ ಈ ಕ್ರಮ ಕೈಗೊಂಡಿದೆ. ಅಂತಹ ಸ್ಟಿಕ್ಕರ್‌ಗಳನ್ನು ಹೊಂದಿರುವ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.
Vehicles with caste stickers to be seized in Uttar Pradesh: Reporthttps://t.co/d8xbh4Rqkc pic.twitter.com/bDAT1ZfjUC
— Hindustan Times (@htTweets) December 27, 2020
ಮಹಾರಾಷ್ಟ್ರದ ಶಿಕ್ಷಕ ಹರ್ಷಲ ಪ್ರಭು ಅವರು ಪತ್ರವನ್ನು ಕಳುಹಿಸಿದ ನಂತರ, ಪ್ರಧಾನಿ ಕಚೇರಿ ಈ ವಿಷಯದ ಬಗ್ಗೆ ಗಮನ ಹರಿಸಿತು. ಅಂತಹ ಸ್ಟಿಕ್ಕರ್‌ಗಳು ನಮ್ಮ ಸಾಮಾಜಿಕ ಸಾಮರಸ್ಯಕ್ಕೆ ಒಂದು ರೀತಿಯ ಅಪಾಯ ನಿರ್ಮಾಣ ಮಾಡುತ್ತವೆ ಎಂದು ಹರ್ಷಲ ಪ್ರಭು ಹೇಳಿದ್ದಾರೆ.