ಬಿಜೆಪಿ ಶಾಸಕರು ಪೂಜಾ ಸ್ಥಳದಲ್ಲಿದ್ದ ಆಸನಗಳನ್ನು ಒದ್ದರು !

‌ಹುತಾತ್ಮರ ಸ್ಮಾರಕದ ಭೂಮಿಪೂಜೆಗಾಗಿ ಆಮಂತ್ರಣ ಸಿಗದೇ ಇದ್ದರಿಂದ ಶಾಸಕರ ಅಸಂತೋಷ !

ಬಿಜೆಪಿಯ ಶಾಸಕರಿಂದ ಈ ರೀತಿಯ ವರ್ತನೆ ಅಪೇಕ್ಷಿತವಿಲ್ಲ, ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ, ಎಂಬುದು ಖಚಿತ !

ಬಿಜೆಪಿ ಶಾಸಕ ರಮೇಶಚಂದ್ರ ಮಿಶ್ರಾ

ಜೌನ್‌ಪುರ (ಉತ್ತರ ಪ್ರದೇಶ) – ಹುತಾತ್ಮರ ಸ್ಮಾರಕದ ಭೂಮಿ ಪೂಜೆಯ ಸಮಾರಂಭಕ್ಕೆ ಬದಲಾಪುರ ಮತದಾನ ಕ್ಷೇತ್ರದ ಬಿಜೆಪಿ ಶಾಸಕ ರಮೇಶಚಂದ್ರ ಮಿಶ್ರಾ ಅವರನ್ನು ಆಹ್ವಾನಿಸಿರಲಿಲ್ಲ ಮತ್ತು ಕಾರ್ಯಕ್ರಮದ ಸ್ಥಳದಲ್ಲಿ ಫಲಕದಲ್ಲಿಯೂ ಅವರ ಹೆಸರಿಲ್ಲದ ಕಾರಣ ಅವರು ಕಾರ್ಯಕ್ರಮದ ಸ್ಥಳಕ್ಕೆ ಹೋಗಿ ಪೂಜೆಗಾಗಿ ಇಡಲಾಗಿದ್ದ ಆಸನಗಳನ್ನು ಕಾಲಿನಿಂದ ಒದ್ದರು. ಇದರ ವೀಡಿಯೋ ಪ್ರಸಾರವಾಗಿದೆ.
ರಮೇಶಚಂದ್ರ ಮಿಶ್ರಾ ಕಾರ್ಯಕ್ರಮದ ಸ್ಥಳಕ್ಕೆ ಬಂದು ಜನರನ್ನು ‘ಇಲ್ಲಿ ಏನು ನಡೆಯುತ್ತಿದೆ ?’ ಎಂದು ವಿಚಾರಿಸುತ್ತಿರುವ ಬಗ್ಗೆ ವಿಡಿಯೋದಲ್ಲಿ ಕಾಣಿಸುತ್ತಿದೆ. ಸ್ಥಳಿಯರು ‘ಇಲ್ಲಿ ಹುತಾತ್ಮರ ಸ್ಮಾರಕದ ಭೂಮಿಪೂಜೆ ಇದೆ’ ಎಂದು ಹೇಳಿದಾಗ ಮಿಶ್ರಾ ಕೋಪಗೊಂಡರು. ‘ಸ್ಥಳೀಯ ಶಾಸಕನಾಗಿದ್ದರೂ ನೀವು ನನ್ನನ್ನು ಏಕೆ ಕರೆಯಲಿಲ್ಲ ?’ ಎಂದು ಕೇಳಿದ್ದಾರೆ. ‘ಮತದಾರ ಕ್ಷೇತ್ರದಲ್ಲಿ ಭೂಮಿ ಪೂಜೆಯ ಸಮಾರಂಭ ನಡೆದಾಗ ಸ್ಥಳೀಯ ಜನಪ್ರತಿನಿಧಿಯ ಹೆಸರು ಭೂಮಿಪೂಜೆಯ ಫಲಕದಲ್ಲಿರಬೇಕು. ನಾನು ಇದರ ಬಗ್ಗೆ ಮುಖ್ಯಮಂತ್ರಿಯವರಲ್ಲಿ ದೂರು ನೀಡುತ್ತೇನೆ ’ಎಂದು ಮಿಶ್ರಾ ಹೇಳಿ ಹೋದರು.