ಪಂಜಾಬ್‌ನಲ್ಲಿ ಸಂಘದ ಸ್ವಯಂಸೇವಕನನ್ನು ಹತ್ಯೆ ಮಾಡಿದ ಖಲಿಸ್ತಾನಿಗಳ ಬ್ರಿಟನ್‌ನಲ್ಲಿ ಬಂಧನ ಮತ್ತು ಜಾಮೀನಿನ ಮೇಲೆ ಬಿಡುಗಡೆ

ಯಾರಾದರೂ ಭಾರತಕ್ಕೆ ಬಂದು ಭಾರತೀಯ ಪ್ರಜೆಯ ಹತ್ಯೆ ಮಾಡಿ ಪುನಃ ಪರಾರಿಯಾಗುತ್ತಾರೆ, ಇದು ಭಾರತಕ್ಕೆ ನಾಚಿಕೆಗೇಡಿನ ಸಂಗತಿ !

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂಸೇವಕ ರುಲ್ದಾ ಸಿಂಗ್(ಮಧ್ಯಭಾಗದಲ್ಲಿ)

ಲಂಡನ್ – ಬ್ರಿಟನ್‌ನ ವೆಸ್ಟ್ ಮಿಡ್‌ಲ್ಯಾಂಡ್ಸ್‌ನ ಪೊಲೀಸರು ಖಲಿಸ್ತಾನ್ ಬೆಂಬಲಿಗರನ್ನು ಬಂಧಿಸಿದ್ದಾರೆ. ಅವರ ಮೇಲೆ ೨೦೦೯ ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂಸೇವಕ ರುಲ್ದಾ ಸಿಂಗ್ ಅವರನ್ನು ಕೊಲೆ ಮಾಡಿದ ಆರೋಪವಿದೆ. ಬಂಧಿತರಾದ ಗುರಶರಣಬೀರ್ ಸಿಂಗ್ ವಹಿವಾಲಾ, ಅಮೃತಬೀರ್ ಸಿಂಗ್ ವಹಿವಾಲಾ ಮತ್ತು ಪ್ಯಾರಾ ಸಿಂಗ್ ಗಿಲ್ ಎಲ್ಲರೂ ಬ್ರಿಟನ್ ಪ್ರಜೆಗಳಾಗಿದ್ದಾರೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

೧. ರುಲ್ದಾ ಸಿಂಗ್ ಅವರನ್ನು ಪಂಜಾಬ್‌ನ ಪಟಿಯಾಲದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಅವರು ಸಂಘದ ‘ರಾಷ್ಟ್ರೀಯ ಸಿಖ್ ಸಂಗತ್’ ನೊಂದಿಗೆ ಸಂಬಂಧ ಹೊಂದಿದ್ದರು. ಅವರು ವಿದೇಶದಲ್ಲಿ ವಾಸಿಸುವ ಸಿಖ್ಖರಿಗೆ ಭಾರತಕ್ಕೆ ಮರಳುವಂತೆ ಮನವಿ ಮಾಡುತ್ತಿದ್ದರು. ಅವರ ಹತ್ಯೆ ಮಾಡಲು ಗುರಶರಣಬೀರ ಸಿಂಗ್ ವಹಿವಾಲಾ ಮತ್ತು ಪ್ಯಾರಾ ಸಿಂಗ್ ಗಿಲ್ ಭಾರತಕ್ಕೆ ಬಂದಿದ್ದರು. ಗುರಶರಣಬೀರ ತನ್ನ ಸಹೋದರ ಅಮೃತಬೀರ್ ಸಿಂಗ್ ವಹಿವಾಲಾ ಅವರ ಪಾಸ್‌ಪೋರ್ಟ್‌ನಿಂದ ಭಾರತಕ್ಕೆ ಬಂದಿದ್ದರು.

೨. ಸಂಘದ ಮತ್ತೊಬ್ಬ ನಾಯಕ ಬ್ರಿಗೇಡಿಯರ್ ಜಗದೀಶ್ ಗಗನೆಜಾ ಅವರ ಹತ್ಯೆಯ ಪ್ರಕರಣದಲ್ಲಿ ಗುರಶರಣಬೀರ ಸಿಂಗ್ ಮೇಲೆ ಆರೋಪವಿದೆ. ಗಗನೆಜಾ ಅವರನ್ನು ೨೦೧೬ ರಲ್ಲಿ ಜಲಂಧರ್‌ನಲ್ಲಿ ಹತ್ಯೆ ಮಾಡಲಾಗಿತ್ತು. (ಪಂಜಾಬ್‌ನಲ್ಲಿ ಖಲಿಸ್ತಾನಿಗಳು ಹಿಂದೂಗಳನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡುತ್ತಿದ್ದಾರೆ ಇದನ್ನು ನೋಡಿದರೆ ಸರರ್ಕಾರವು ಈಗ ಹಿಂದೂಗಳ ರಕ್ಷಣೆಗಾಗಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕು ! – ಸಂಪಾದಕ)