ಉಜ್ಜೈನಿನ ನಾಥ ಸಂಪ್ರದಾಯದ ಪಂಚ ಪೀರ ಸಮಾಧಿಗೆ ಹಸಿರು ಬಣ್ಣ ಬಳಿದು ಅದನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಮತಾಂಧರನ್ನು ಸಾಧುಗಳು ಓಡಿಸಿದರು !

ಮೊಘಲರ ಕಾಲಾವಧಿಯಲ್ಲಿ ಹಿಂದೂಗಳ ಧಾರ್ಮಿಕ ಸ್ಥಳಗಳ ಮೇಲೆ ನೇರವಾಗಿ ಆಕ್ರಮಣ ಮಾಡಿ ಇಸ್ಲಾಮಿಕ್ ಸ್ಥಳಗಳಾಗಿ ಪರಿವರ್ತಿಸಲಾಗುತ್ತಿತ್ತು. ಈಗಿನ ಕಾಲದಲ್ಲಿ ಕದ್ದುಮುಚ್ಚಿ ವಶಪಡಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ, ಇದರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು !

ಭರ್ತೃಹರಿ ಗುಹೆ

ಉಜ್ಜೈನ (ಮಧ್ಯಪ್ರದೇಶ) – ಸ್ಥಳೀಯ ಭರ್ತೃಹರಿ ಗುಹೆಯ ಬಳಿಯಿರುವ ನಾಥ ಸಂಪ್ರಯದ ಖಾಸಗಿ ಜಮೀನಿನಲ್ಲಿರುವ ಪಂಚ ಪೀರರ ಸಮಾಧಿಯ ಮೇಲೆ ಮತಾಂಧರು ಹಸಿರು ಬಣ್ಣವನ್ನು ಬಳಿಯಲು ಪ್ರಯತ್ನಿಸುತ್ತಿರುವಾಗ, ಭರ್ತೃಹರಿ ಗುಹೆಯ ಮಹಾಂತ ಪೀರ್ ಯೋಗಿ ಶ್ರೀ ರಾಮನಾಥ ಮಹಾರಾಜರು ಸಾಧು-ಸಂತರ ಮಾಧ್ಯಮದಿಂದ ಅವರನ್ನು ವಿರೋಧಿಸುತ್ತಾ ಅವರನ್ನು ಅಲ್ಲಿಂದ ಓಡಿಸಿದ್ದಾರೆ. ಈ ಸ್ಥಳವು ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಬಣ್ಣ ಬಳಿಯುವುದನ್ನು ನಿಷೇಧಿಸಲಾಗಿದೆ.

ಪೀರ ಯೋಗಿ ಶ್ರೀ ರಾಮನಾಥ ಮಹಾರಾಜ ಅವರು, ಪ್ರಾಚೀನ ಕಾಲದಿಂದಲೂ ಇಲ್ಲಿ ಪಂಚ ಪೀರ್‌ನ ಸಮಾಧಿ ಇದೆ. ಈ ಭೂಮಿಯು ನಾಥ ಪಂಥದ ಒಡೆತನದಲ್ಲಿದೆ. ಕೆಲವು ಮತಾಂಧರು ಇಲ್ಲಿಗೆ ಬಂದು ಹಸಿರು ಬಣ್ಣವನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸರು ಮತ್ತು ಆಡಳಿತ ಮಂಡಳಿಗೆ ದೂರು ನೀಡಿದ್ದು, ಪೊಲೀಸರು ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಒಂದೆರಡು ವರ್ಷಗಳ ಹಿಂದೆ ಇದೇ ರೀತಿಯಲ್ಲಿ ಪ್ರಯತ್ನ ಮಾಡಲಾಗಿತ್ತು. ಆ ಸಮಯದಲ್ಲಿ ದೂರು ಕೂಡ ಸಲ್ಲಿಸಲಾಗಿತ್ತು. ನಂತರ ಪೊಲೀಸರು ಕೂಡ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಂಡಿದ್ದರು. ಎಲ್ಲಿ ಸಮಾಧಿ ಇದೆಯೋ ಅದರ ಪಕ್ಕದ ಕೃಷಿಭೂಮಿಯು ನಾಥ ಸಂಪ್ರದಾಯಕ್ಕೆ ಸೇರಿದೆ. ಇದರ ಸರಕಾರಿ ದಾಖಲೆಗಳೂ ಲಭ್ಯವಿದೆ ಎಂದು ಹೇಳಿದ್ದಾರೆ.