ಒಡಿಶಾದ ಪ್ರಾಚೀನ ದಕ್ಷೇಶ್ವರ ದೇವಸ್ಥಾನದ ೨೨ ಅಮೂಲ್ಯ ವಿಗ್ರಹಗಳ ಕಳ್ಳತನ

ಪುರಾತತ್ವ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಸ್ಥಾನದಿಂದ ವಿಗ್ರಹಗಳ ಕಳ್ಳತನವಾಗುತ್ತದೆ, ಇದರಿಂದ ಪುರಾತತ್ವ ಇಲಾಖೆಯ ‘ನಿರ್ವಹಣೆ’ ಗಮನಕ್ಕೆ ಬರುತ್ತದೆ! ಅಂತಹ ಇಲಾಖೆ ಏಕೆ ಬೇಕು ?

ಭುವನೇಶ್ವರ (ಒಡಿಶಾ) – ಒಡಿಶಾದ ಖುರಧಾ ಜಿಲ್ಲೆಯ ಬಾನಪುರದಲ್ಲಿರುವ ಪ್ರಾಚೀನ ಮತ್ತು ಐತಿಹಾಸಿಕ ದಕ್ಷೇಶ್ವರ ದೇವಸ್ಥಾನದಲ್ಲಿ ಆದ ಕಳ್ಳತನದಲ್ಲಿ ಕಳ್ಳರು ೨೨ ಪ್ರಾಚೀನ ವಿಗ್ರಹಗಳನ್ನು ಕದ್ದೊಯ್ದಿದ್ದಾರೆ. ಕನಕ ದುರ್ಗಾ, ಗೋಪಿನಾಥ ದೇವ, ಕಲಿಯುಗೇಶ್ವರ ದೇವ, ಚಂದ್ರಶೇಖರ ದೇವ ಇತ್ಯಾದಿ ದೇವತೆಗಳು ಸೇರಿರುವ ಅಷ್ಟಧಾತುವಿನ ಈ ಎಲ್ಲಾ ವಿಗ್ರಹಗಳು ಕೋಟ್ಯಂತರ ರೂಪಾಯಿ ಮೌಲ್ಯದ ವಿಗ್ರಹಗಳಾಗಿವೆ. ಈ ಬಗ್ಗೆ ಪೊಲೀಸರಲ್ಲಿ ದೂರು ದಾಖಲಿಸಲಾಗಿದೆ. ಈ ದೇವಾಲಯವು ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಬರುತ್ತದೆ.

ರಾತ್ರಿ ಕಳ್ಳರು ದೇವಾಲಯದ ಮುಖ್ಯ ದ್ವಾರವನ್ನು ಭೇದಿಸಿ ಒಳಗೆ ಪ್ರವೇಶಿಸಿದ್ದಾರೆ. ಅರ್ಚಕರು ಬೆಳಿಗ್ಗೆ ದೇವಸ್ಥಾನಕ್ಕೆ ಬಂದಾಗ ಅವರ ಗಮನಕ್ಕೆ ಇದು ಬಂದಿತು. ಈ ದೇವಾಲಯದಲ್ಲಿ ಒಟ್ಟು ೩೧ ವಿಗ್ರಹಗಳಿದ್ದು, ಅವುಗಳಲ್ಲಿ ೨೨ ವಿಗ್ರಹಗಳನ್ನು ಕಳವು ಮಾಡಲಾಗಿದೆ.