ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಪೊಲೀಸರು, ಶಿಕ್ಷಕರು ಮತ್ತು ಆರೋಗ್ಯ ಕಾರ್ಯಕರ್ತರು ಮುಸ್ಲಿಮರಾಗಿರಬೇಕು !

 ಕೇಂದ್ರ ಸರಕಾರಕ್ಕೆ ಅಲ್ಪಸಂಖ್ಯಾತ ಸಚಿವಾಲಯದ ಶಿಫಾರಸು

ಕಾಂಗ್ರೆಸ್ ರಾಜ್ಯದ ಸಮಯದಲ್ಲಿ ಸಚ್ಚರ್ ಆಯೋಗವು ಇದೇ ರೀತಿಯ ಶಿಫಾರಸ್ಸು ಮಾಡಿತ್ತು, ಅದನ್ನೇ ಈಗ ಅಲ್ಪಸಂಖ್ಯಾತ ಸಚಿವಾಲಯ ಮಾಡುತ್ತಿದೆ. ಆದುದರಿಂದ ಈ ಸಚಿವಾಲಯದಲ್ಲಿ ಕಾಂಗ್ರೆಸ್‌ನ ಮಾನಸಿಕತೆಯ ಅಧಿಕಾರಿಗಳು ಇದ್ದಾರೆಯೇ ? ಎಂಬ ಪ್ರಶ್ನೆ ಉದ್ಭವಿಸುತ್ತದೆ !

ನವ ದೆಹಲಿ – ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಮುಸ್ಲಿಂ ಪೊಲೀಸರು, ಶಿಕ್ಷಕರು ಮತ್ತು ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಲು ಕೇಂದ್ರದ ಅಲ್ಪಸಂಖ್ಯಾತ ಸಚಿವಾಲಯ ಸರಕಾರಕ್ಕೆ ಶಿಫಾರಸು ಮಾಡಿರುವ ಬಗ್ಗೆ ವಾರ್ತೆ ಪ್ರಸಾರವಾಗಿದೆ.