ತೀವ್ರ ವಿರೋಧದ ನಂತರ ಕರ್ನಾಟಕದ ಭಾಜಪ ಸರಕಾರದಿಂದ ‘ರಾಮಮಂದಿರ ಏಕೆ ಬೇಡ ?’ ಎಂಬ ಪುಸ್ತಕಗಳ ಖರೀದಿ ರದ್ದು

ರಾಜ್ಯದ ಗ್ರಂಥಾಲಯಗಳಿಗಾಗಿ ಕೆ.ಎಸ್. ಭಗವಾನ್ ಇವರ ‘ರಾಮಮಂದಿರ ಏಕೆ ಬೇಡ’ ? ಈ ಪುಸ್ತಕವನ್ನು ಖರೀದಿಸಲು ಪ್ರಯತ್ನಿಸುವ ಆಡಳಿತಕ್ಕೆ ವ್ಯಾಪಕ ಸ್ತರದಲ್ಲಿ ವಿರೋಧವಾದ ಕಾರಣ ಪುಸ್ತಕ ಖರೀದಿಸುವ ನಿರ್ಣಯವನ್ನು ರದ್ದು ಪಡಿಸಲಾಗಿದೆ.

ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಮಾಜಿ ಮಹಿಳಾ ನ್ಯಾಯಮೂರ್ತಿಗಳು ರಾಜ್ಯಪಾಲ ಪದವಿಯನ್ನು ಪಡೆಯಲು ೮ ಕೋಟಿ ೮೦ ಲಕ್ಷ ರೂಪಾಯಿಗಳ ಲಂಚ ನೀಡಿದ್ದರು!

ಲಂಚಗುಳಿತನದ ಪ್ರಕರಣದಲ್ಲಿ ಸದ್ಯ ನಡೆಯುತ್ತಿರುವ ವಿಚಾರಣೆಯ ಸಂದರ್ಭದಲ್ಲಿ ಹಿಂದೂ ವಿಧಿಜ್ಞ ಪರಿಷತ್ತಿನ ನ್ಯಾಯವಾದಿ ಅಮೃತೇಶ ಎಮ್.ಪಿ ಇವರು ೧೯ ಜನವರಿಯಂದು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ಮಹಿಳಾ ನ್ಯಾಯಾಧೀಶರ ವಿರುದ್ಧ ಕೇಂದ್ರೀಯ ಅಪರಾಧ ತನಿಖಾ ದಳಕ್ಕೆ ದೂರನ್ನು ದಾಖಲಿಸಿದ್ದಾರೆ.

೫ ಲಕ್ಷ ೬೨ ಸಾವಿರ ಭಾರತೀಯರ ಫೇಸ್‌ಬುಕ್ ಖಾತೆಯ ಮಾಹಿತಿಯನ್ನು ಕದ್ದಿರುವ ಬ್ರಿಟನ್ ನ ಕಂಪನಿಯ ವಿರುದ್ಧ ಅಪರಾಧ ದಾಖಲು

೫ ಲಕ್ಷ ೬೨ ಸಾವಿರ ಭಾರತೀಯರ ಫೇಸ್‌ಬುಕ್ ಖಾತೆಯಿಂದ ಮಾಹಿತಿಯನ್ನು ಕಳ್ಳತನ ಮಾಡಿದ ಪ್ರಕರಣದಲ್ಲಿ ಬ್ರಿಟನ್‌ನ ‘ಕೆಂಬ್ರಿಜ್ ಅನಾಲಿಟಿಕಾ’ ಎಂಬ ಕಂಪನಿಯ ವಿರುದ್ಧ ಕೇಂದ್ರಿಯ ತನಿಖಾ ದಳವು (ಸಿಬಿಐ) ಅಪರಾಧವನ್ನು ದಾಖಲಿಸಿದೆ.

ಕೇರಳದಲ್ಲಿ ದೇವಸ್ಥಾನಗಳ ಧ್ವನಿವರ್ಧಕಗಳ ಧ್ವನಿಯನ್ನು ೫೫ ಡೆಸಿಬಲ್ ಗಿಂತಹ ಹೆಚ್ಚು ಇಡಬಾರದು ಎಂದು ಸರಕಾರದಿಂದ ಆದೇಶ

ರಾಜ್ಯದ ಕಮ್ಯೂನಿಸ್ಟ್ ಸರಕಾರವು ದೇವಸ್ಥಾನಗಳ ಧ್ವನಿವರ್ಧಕಗಳ ಧ್ವನಿಯ ಮೇಲೆ ನಿಯಂತ್ರಣವನ್ನು ತರುವ ಆದೇಶವನ್ನು ನೀಡಿದೆ. ಸರಕಾರವು ‘ಕೇರಳ ದೇವಸ್ವಮ್ ಬೋರ್ಡ್’ಗೆ ನೀಡಿದ ಆದೇಶದಲ್ಲಿ ‘ದೇವಸ್ಥಾನಗಳ ಧ್ವನಿವರ್ಧಕಗಳ ಧ್ವನಿಯು ೫೫ ಡೆಸಿಬಲ್‌ಗಿಂತ ಹೆಚ್ಚು ಇಡಬಾರದು’ ಎಂದು ಹೇಳಲಾಗಿದೆ.

ಸರಕಾರಿ ಸಂಘಸಂಸ್ಥೆಗಳ ಖಾಸಗೀಕರಣವಾಗುತ್ತಿರುವಾಗ ದೇವಸ್ಥಾನಗಳ ಸರಕಾರೀಕರಣ ಏಕೆ ? ಸದ್ಗುರು ಜಗ್ಗಿ ವಾಸುದೇವ

ಸಂಪೂರ್ಣ ಭಾರತದಲ್ಲಿ ಪ್ರಜಾಪ್ರಭುತ್ವವು ಹಿಂದೂ ಸಂಸ್ಕೃತಿಯನ್ನು ನಾಶಗೊಳಿಸಲು ಪ್ರಯತ್ನಿಸುತ್ತಿದೆ. ತೆಲಂಗಾಣ, ಆಂಧ್ರಪ್ರದೇಶ, ಉತ್ತರ ಕರ್ನಾಟಕ ಮತ್ತು ತಮಿಳುನಾಡು ಇಲ್ಲಿ ಕ್ರೈಸ್ತ ಮಿಶನರಿಗಳ ಕಾರ್ಯಾಚರಣೆಗಳು ಹೆಚ್ಚಾಗಿವೆ. ಎಲ್ಲಿ ಒಬ್ಬನೇ ಒಬ್ಬ ಕ್ರೈಸ್ತನಿಲ್ಲವೋ ಅಲ್ಲಿ ಚರ್ಚಗಳನ್ನು ನಿರ್ಮಿಸಲಾಗುತ್ತಿದೆ. ಇದು ಎಲ್ಲ ಸರಕಾರಗಳ ಸಮರ್ಥನೆಯಿಂದಾಗುತ್ತಿದೆ.

ಪಾಕಿಸ್ತಾನವು ನಡೆಸಿದ ‘ಶಾಹೀನ್ -೩’ ಎಂಬ ಕ್ಷಿಪಣಿ ಪರೀಕ್ಷಣೆಯಲ್ಲಿ ಪಾಕಿಸ್ತಾನದ ನಾಗರಿಕರಿಗೆ ಗಾಯ !

ಪಾಕಿಸ್ತಾನವು ತನ್ನ ಬ್ಯಾಲೆಸ್ಟಿಕ್ ಕ್ಷಿಪಣಿ ‘ಶಾಹೀನ – ೩’ ಇದನ್ನು ಜನವರಿ ೨೦ ರಂದು ಪರೀಕ್ಷಣೆ ಮಾಡಿತು. ಆದರೆ ಇದರಲ್ಲಿ ಪಾಕಿಸ್ತಾನದ ನಾಗರಿಕರು ಗಾಯಗೊಂಡಿದ್ದಾರೆ. ಈ ಪರೀಕ್ಷಣೆಯನ್ನು ಬಲುಚಿಸ್ತಾನದ ಡೆರಾ ಗಾಝಿ ಖಾನ್‌ನಲ್ಲಿ ನಡೆಸಲಾಗಿತ್ತು. ಆಗ ಡೆರಾ ಬುಗ್ತಿ ಎಂಬಲ್ಲಿನ ವಸತಿ ಪ್ರದೇಶದಲ್ಲಿ ಈ ಕ್ಷಿಪಣಿಯು ಬಿದ್ದ ಕಾರಣ ಮನೆಗಳಿಗೆ ಹಾನಿಯುಂಟಾಯಿತು ಮತ್ತು ಅನೇಕ ನಾಗರಿಕರು ಗಾಯಗೊಂಡರು.

ರಾಜ್ಯ ಸರಕಾರವು ಅನ್ವಯಿಸಿದ ಗೋಹತ್ಯೆ ನಿಷೇಧಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿದ ಉಚ್ಚ ನ್ಯಾಯಾಲಯ

ಕರ್ನಾಟಕ ಉಚ್ಚ ನ್ಯಾಯಾಲಯವು ಕರ್ನಾಟಕ ಸರಕಾರವು ಅನ್ವಯಗೊಳಿಸಿದ ಗೋಹತ್ಯಾ ನಿಷೇಧಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿದೆ ಎಂದು ನಿರ್ಧರಿಸಿದೆ. ನ್ಯಾಯಾಲಯದ ಈ ನಿರ್ಣಯದಿಂದ ನಿಷೇಧದ ಕಾರ್ಯಾಚರಣೆಯನ್ನು ಮಾಡಿಕೊಳ್ಳಲು ಸರಕಾರಕ್ಕೆ ಉಂಟಾಗಿದ್ದ ಅಡಚಣೆಯು ಸಹ ದೂರವಾಗಿದೆ.

ಮತಾಂಧರು ಸ್ವಾಧೀನ ಪಡಿಸಿಕೊಂಡಿದ್ದ ವಿದಿಶಾ (ಮಧ್ಯಪ್ರದೇಶ) ಇಲ್ಲಿನ ಪರಮಾರ ವಂಶದ ಪ್ರಾಚೀನ ರಾಜಮಹಲನ್ನು ತೆರವುಗೊಳಿಸಿದ ಆಡಳಿತ!

ಇಲ್ಲಿಂದ ೭೦ ಕಿ.ಮೀ. ದೂರದಲ್ಲಿರುವ ಉದಯಪುರ ನಗರದಲ್ಲಿ ೧ ಸಾವಿರ ವರ್ಷ ಪುರಾತನವಾಗಿರುವ ಪರಮಾರ ವಂಶದ ರಾಜಮಹಲ (ಅರಮನೆ) ಇದರ ಮೇಲೆ ಕಾಝಿ ಸಯ್ಯದ ಇರಫಾನ ಅಲಿ ಇವರು ಇದು ಖಾಸಗಿ ಆಸ್ತಿ ಎಂದು ಫಲಕವನ್ನು ಹಾಕಿದ್ದರು. ತಹಶೀಲ್ದಾರರ ಆದೇಶದ ನಂತರ ಆಡಳಿತವು ಅದನ್ನು ತೆರವುಗೊಳಿಸಿದೆ ಹಾಗೂ ೫ ಸಾವಿರ ರೂ. ದಂಡವನ್ನು ಸಹ ವಸೂಲಿ ಮಾಡಲಾಯಿತು. ಈ ಸ್ಥಳದಲ್ಲಿ ಅಲಿ ಇವರಿಂದ ಮದರಸಾವನ್ನು ನಡೆಸಲಾಗುತ್ತಿತ್ತು.

ಕುತುಬ ಮಿನಾರ್ ಅನ್ನು ಕುತುಬುದ್ದೀನ್ ಐಬಕ್ ನು ಕಟ್ಟಿದ್ದನೆಂದು ಪಠ್ಯಪುಸ್ತಕಗಳಿಂದ ಕಲಿಸುವ ಎನ್.ಸಿ.ಈ.ಆರ್.ಟಿ.ಯ ಬಳಿ ಅದರ ವಿಷಯದಲ್ಲಿ ಯಾವುದೇ ಪುರಾವೆಗಳಿಲ್ಲ !

ಎನ್.ಸಿ.ಈ.ಆರ್.ಟಿ ಯ ಇತಿಹಾಸದ ಪುಸ್ತಕದಲ್ಲಿ ಮೊಗಲರು ಯುದ್ಧದಲ್ಲಿ ಭಗ್ನಗೊಳಿಸಿದ ಹಿಂದೂಗಳ ದೇವಸ್ಥಾನಗಳನ್ನು ನಂತರ ಬಾದಶಾಹ ಶಹಾಜಹಾನ ಮತ್ತು ಔರಂಗಜೇಬ ಇವರು ದುರುಸ್ತಿಗೊಳಿಸಿದರು ಎಂಬ ಯಾವುದೇ ಪುರಾವೆಗಳಿಲ್ಲದ ಇತಿಹಾಸವನ್ನು ಕಲಿಸಲಾಗುತ್ತಿದೆ ಎಂದು ಬೆಳಕಿಗೆ ಬಂದಿದೆ. ಈಗ ಎನ್.ಸಿ.ಈ. ಆರ್. ಟಿ ಯ ಇನ್ನೂ ಒಂದು ಸುಳ್ಳುಕೋರತನವು ಮಾಹಿತಿ ಹಕ್ಕು ಅಧಿಕಾರದಿಂದ ಬೆಳಕಿಗೆ ಬಂದಿದೆ.

ಲಕ್ಷ್ಮಣಪುರಿ (ಉತ್ತರಪ್ರದೇಶ)ದಲ್ಲಿ ದೇವಸ್ಥಾನದ ಅರ್ಚಕರನ್ನು ಹತ್ಯೆಗೈದು ಲೂಟಿ !

ಇಲ್ಲಿನ ಶಿವಪುರಿ ಊರಿನಲ್ಲಿರುವ ಐತಿಹಾಸಿಕ ರಣಬಾಬಾ ಮಹಾದೇವ ದೇವಸ್ಥಾನದಲ್ಲಿ ೧೯ ಜನವರಿಯ ರಾತ್ರಿ ಅಪರಿಚಿತರು ಲೂಟಿ ಮಾಡಿ ಅಲ್ಲಿನ ೮೦ ವರ್ಷದ ಬಾಬಾ ಫಕೀರೆ ದಾಸ ಇವರನ್ನು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ಇಲ್ಲಿನ ಅರ್ಪಣೆ ಪೆಟ್ಟಿಗೆಯಲ್ಲಿರುವ ಹಣವನ್ನು ಕದ್ದು ಪಲಾಯನ ಮಾಡಿದ್ದಾರೆ ಹಾಗೂ ೩ ಘಂಟೆಗಳು ಹಾಗೂ ದೇವಸ್ಥಾನದಲ್ಲಿರುವ ಧಾನ್ಯವನ್ನೂ ಸಹ ಕಳ್ಳರೂ ಕದ್ದೊಯ್ದಿದ್ದಾರೆ.