ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಮಾಜಿ ಮಹಿಳಾ ನ್ಯಾಯಮೂರ್ತಿಗಳು ರಾಜ್ಯಪಾಲ ಪದವಿಯನ್ನು ಪಡೆಯಲು ೮ ಕೋಟಿ ೮೦ ಲಕ್ಷ ರೂಪಾಯಿಗಳ ಲಂಚ ನೀಡಿದ್ದರು!

ನಿವೃತ್ತ ನ್ಯಾಯಾಧೀಶರು ೮ ಕೋಟಿ ೮೦ ಲಕ್ಷ ರೂಪಾಯಿಗಳ ಲಂಚವನ್ನು ರಾಜ್ಯಪಾಲ ಪದವಿ ಪಡೆಯಲು ನೀಡಿದ್ದೇನೆಂದು ತಮ್ಮದೇ ದೂರಿನಲ್ಲಿ ಹೇಳುತ್ತಿದ್ದಲ್ಲಿ ಈ ನ್ಯಾಯಾಧೀಶರು ತಮ್ಮ ಆಡಳಿತಾವಧಿಯಲ್ಲಿ ಯಾವ ರೀತಿ ತೀರ್ಪನ್ನು ನೀಡಿರಬಹುದು ಎಂಬ ಪ್ರಶ್ನೆಯು ಜನರ ಮನಸ್ಸಿನಲ್ಲಿ ಮೂಡಿದರೆ ಆಶ್ವರ್ಯ ಪಡುವಂತಹದ್ದೇನಿದೆ? ಜನತೆಗೆ ನ್ಯಾಯಾಲಯದ ಮೇಲಿರುವ ವಿಶ್ವಾಸಾರ್ಹತೆಯು ಶಾಶ್ವತವಾಗಿ ಉಳಿಸಿಕೊಳ್ಳುವ ದೃಷ್ಟಿಯಿಂದ, ಇಂತಹ ನ್ಯಾಯಧೀಶರು ಭ್ರಷ್ಟಾಚಾರ ಮಾಡಿ ನ್ಯಾಯ ತೀರ್ಪನ್ನು ನೀಡಿಲ್ಲವಲ್ಲ? ಇದನ್ನು ಗಂಭೀರವಾಗಿ ತಪಾಸಣೆ ಮಾಡಬೇಕು ಮತ್ತು ತಪಾಸಣೆ ಪೂರ್ಣಗೊಂಡು ಸತ್ಯ ಹೊರಬರುವ ತನಕ ಅವರಿಗೆ ಸಿಗುವ ನಿವೃತ್ತಿ ವೇತನವನ್ನು ಸಹ ತಡೆ ಹಿಡಿಯಬೇಕು ಎಂದು ಜನರಿಗೆ ಅನಿಸುವುದು ಸ್ವಾಭಾವಿಕವಲ್ಲವೇ?

ಬೆಂಗಳೂರು – ಲಂಚಗುಳಿತನದ ಪ್ರಕರಣದಲ್ಲಿ ಸದ್ಯ ನಡೆಯುತ್ತಿರುವ ವಿಚಾರಣೆಯ ಸಂದರ್ಭದಲ್ಲಿ ಹಿಂದೂ ವಿಧಿಜ್ಞ ಪರಿಷತ್ತಿನ ನ್ಯಾಯವಾದಿ ಅಮೃತೇಶ ಎಮ್.ಪಿ ಇವರು ೧೯ ಜನವರಿಯಂದು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ಮಹಿಳಾ ನ್ಯಾಯಾಧೀಶರ ವಿರುದ್ಧ ಕೇಂದ್ರೀಯ ಅಪರಾಧ ತನಿಖಾ ದಳಕ್ಕೆ ದೂರನ್ನು ದಾಖಲಿಸಿದ್ದಾರೆ. ನಿವೃತ್ತ ಮಹಿಳಾ ನ್ಯಾಯಾಧೀಶರು ತಾನು ರಾಜ್ಯಪಾಲ ಪದವಿ ಸಿಗಬೇಕೆಂದು ಯುವರಾಜ ಊರ್ಫ್ ಸ್ವಾಮಿ ಇವರಿಗೆ ಲಂಚ ಎಂದು ೮ ಕೋಟಿ ೮೦ ಲಕ್ಷ ರೂಪಾಯಿಗಳನ್ನು ನೀಡಿದ್ದೆ ಎಂದು ಪೊಲೀಸರಿಗೆ ಮಾಹಿತಿಯನ್ನು ನೀಡುವಾಗ ತಿಳಿಸಿದ್ದರು. ಯುವರಾಜನಿಗೆ ಲಂಚವನ್ನು ನೀಡಿ ನ್ಯಾಯಮೂರ್ತಿಗಳು ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡಿದ್ದಾರೆ ಎಂದು ನ್ಯಾಯವಾದಿ ಅಮೃತೇಶ ಎನ್.ಪಿ. ಇವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ. ಹಾಗಾಗಿ ಈ ಪ್ರಕರಣದಲ್ಲಿ ನ್ಯಾಯಾಧೀಶರನ್ನು ಅಪರಾಧಿ ಎಂದು ಪರಿಗಣಿಸಿ ಅವರ ವಿಚಾರಣೆಯನ್ನು ನಡೆಸಬೇಕು ಎಂದು ಆಗ್ರಹಿಸಲಾಗಿದೆ.

ನ್ಯಾಯವಾದಿ ಅಮೃತೇಶ ಎನ್.ಪಿ. ಇವರು ಹೇಳಿದ ಅಂಶಗಳು

೧. ರಾಜ್ಯಪಾಲರ ನೇಮಕಾತಿಯ ಪದ್ಧತಿ ಹೇಗಿರುತ್ತದೆ ಎಂಬುದರ ಸಂವಿಧಾನಾತ್ಮಕ ಪ್ರಕ್ರಿಯೆಯ ಮಾಹಿತಿಯಿದ್ದರೂ ನ್ಯಾಯಾಧೀಶರು ಈ ಪದವಿಯನ್ನು ಪಡೆಯಲು ಯುವರಾಜ ಇವರಿಗೆ ಲಂಚ ನೀಡಿದ್ದಾರೆ ಎಂಬುದು ನ್ಯಾಯಾಧೀಶರ ಹೇಳಿಕೆಯಿಂದ ಸ್ಪಷ್ಟವಾಗಿದೆ.

೨. ಯುವರಾಜನನ್ನು ಬಂಧಿಸಿದ ನಂತರವೇ ಅವರಿಗೆ ಲಂಚ ನೀಡಿದ ವಿಷಯ ಹೊರಬರಬಹುದು ಎಂಬ ಭೀತಿಯಿಂದ ಸೇವಾನಿವೃತ್ತ ನ್ಯಾಯಾಧೀಶರು ತಮ್ಮ ಹೇಳಿಕೆಯನ್ನು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ಕಳಿಸಿದರು. ಕೇವಲ ಅವರ ಈ ಹೇಳಿಕೆಯ ಆಧಾರದಲ್ಲಿ ಪೊಲೀಸರು ಯುವರಾಜರ ವಿರುದ್ಧ ಎಫ್.ಐ.ಆರ್ ನೊಂದಾಯಿಸಿದ್ದಾರೆ ಎಂಬುದು ಆಶ್ಚರ್ಯಕರವಾಗಿದೆ.

೩. ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು ಎಂದು ಸಂಬಂಧಿತ ಮಹಿಳಾ ನ್ಯಾಯಾಧೀಶರು ಈ ನ್ಯಾಯಾಂಗ ವ್ಯವಸ್ಥೆಯ ಗೌರವವನ್ನು ಕಾಪಾಡಲು ಬಾಧ್ಯರಾಗಿದ್ದಾರೆ. ಅವರು ಸೇವಾ ನಿವೃತ್ತರಾಗಿದ್ದರೂ ಇಂತಹ ಘಟನೆಗಳ ವಿಷಯದಲ್ಲಿ ನ್ಯಾಯಾಲಯದಲ್ಲಿ ಮಾಹಿತಿಯನ್ನು ನೀಡಲು ಸಹ ಅವರು ಬಾಧ್ಯರಾಗಿದ್ದಾರೆ. ಆದರೆ ಅವರು ಹಾಗೆ ಮಾಡಲು ವಿಫಲರಾಗಿದ್ದಾರೆ. ಹಾಗಾಗಿ ಈ ಪ್ರಕರಣದಲ್ಲಿ ಅವರನ್ನು ಸಹ ಯುವರಾಜರೊಂದಿಗೆ ಆರೋಪಿ ಎಂದು ಪರಿಗಣಿಸಬೇಕು ಮತ್ತು ಕಾನೂನುರೀತ್ಯಾ ಕಾರ್ಯಾಚರಣೆ ಮಾಡಬೇಕು.