ಕೇರಳದಲ್ಲಿ ದೇವಸ್ಥಾನಗಳ ಧ್ವನಿವರ್ಧಕಗಳ ಧ್ವನಿಯನ್ನು ೫೫ ಡೆಸಿಬಲ್ ಗಿಂತಹ ಹೆಚ್ಚು ಇಡಬಾರದು ಎಂದು ಸರಕಾರದಿಂದ ಆದೇಶ

ದೇವಸ್ಥಾನಗಳ ಧ್ವನಿವರ್ಧಕಗಳ ಧ್ವನಿಯ ಬಗ್ಗೆ ಇಂತಹ ಆದೇಶವನ್ನು ನೀಡುವ ಕೇರಳದ ಕಮ್ಯೂನಿಸ್ಟ್ ಸರಕಾರವು ಮಸೀದಿಗಳ ಬಗ್ಗೆಯೂ ಇದೇ ರೀತಿಯ ಆದೇಶವನ್ನು ನೀಡುವ ಧೈರ್ಯವನ್ನು ಏಕೆ ತೋರಿಸುವುದಿಲ್ಲ?

ತಿರುವನಂತಪುರಮ್ (ಕೇರಳ) : ರಾಜ್ಯದ ಕಮ್ಯೂನಿಸ್ಟ್ ಸರಕಾರವು ದೇವಸ್ಥಾನಗಳ ಧ್ವನಿವರ್ಧಕಗಳ ಧ್ವನಿಯ ಮೇಲೆ ನಿಯಂತ್ರಣವನ್ನು ತರುವ ಆದೇಶವನ್ನು ನೀಡಿದೆ. ಸರಕಾರವು ‘ಕೇರಳ ದೇವಸ್ವಮ್ ಬೋರ್ಡ್’ಗೆ ನೀಡಿದ ಆದೇಶದಲ್ಲಿ ‘ದೇವಸ್ಥಾನಗಳ ಧ್ವನಿವರ್ಧಕಗಳ ಧ್ವನಿಯು ೫೫ ಡೆಸಿಬಲ್‌ಗಿಂತ ಹೆಚ್ಚು ಇಡಬಾರದು’ ಎಂದು ಹೇಳಲಾಗಿದೆ. ಈ ಆದೇಶವನ್ನು ಸಾಮಾಜಿಕ ಮಾಧ್ಯಮಗಳಿಂದ ವಿರೋಧಿಸಲಾಗುತ್ತಿದೆ.