* ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಹಿಂದೂಗಳ ಸಂತರು ದೇವಸ್ಥಾನಗಳ ಮೇಲಿನ ಸರಕಾರಿ ನಿಯಂತ್ರಣವನ್ನು ತೆಗೆಯಲು ಹಸ್ತಕ್ಷೇಪ ಮಾಡಬೇಕಾಗುತ್ತದೆ ಎಂಬುದು ಹಿಂದೂಗಳಿಗೆ ಲಜ್ಜಾಸ್ಪವಾಗಿದೆ * ದೇಶದಲ್ಲಿ ಸರಕಾರಿಕರಣವಾಗಿರುವ ದೇವಸ್ಥಾನಗಳನ್ನು ಭಕ್ತರ ನಿಯಂತ್ರಣಕ್ಕೊಪ್ಪಿಸಲು ಈಗ ಎಲ್ಲ ಸಂಪ್ರದಾಯಗಳಲ್ಲಿರುವ ಹಿಂದೂ ಸಂಘಟನೆಗಳು ಒಟ್ಟಾಗುವ ಆವಶ್ಯಕತೆಯು ಉದ್ಭವಿಸಿದೆ. ದೆಹಲಿಯಲ್ಲಿ ಕೆಲವು ಸಾವಿರ ರೈತರು ಒಟ್ಟಾಗಿ ಸರಕಾರದ ಮೇಲೆ ಒತ್ತಡವನ್ನು ಹಾಕಬಹುದು. ಹೀಗಿರುವಾಗ ದೇಶದಲ್ಲಿರುವ ಕೋಟಿಗಟ್ಟಲೆ ಹಿಂದೂಗಳು ದೇವಸ್ಥಾನಕ್ಕಾಗಿ ಹೀಗೆ ಮಾಡಲಾಗುವುದಿಲ್ಲವೇ ? |
ನವ ದೆಹಲಿ – ಇತ್ತೀಚಿನ ಕಾಲದಲ್ಲಿ ಸರಕಾರವು ವಿಮಾನ ಸಾರಿಗೆ ಸಂಸ್ಥೆಗಳನ್ನು, ವಿಮಾನ ನಿಲ್ದಾಣಗಳನ್ನು, ಕಾರ್ಖಾನೆಗಳನ್ನು ಗಣಿಗಳನ್ನು, ಉದ್ಯಮ ಮುಂತಾದವುಗಳ ಮೇಲಿದ್ದ ತನ್ನ ನಿಯಂತ್ರಣವನ್ನು ತೆಗೆಯಲು ಇಚ್ಛಿಸುತ್ತಿದೆ. ಆದರೆ ಹಿಂದೂಗಳ ಪವಿತ್ರವಾದ ದೇವಸ್ಥಾನಗಳ ನಿಯಂತ್ರಣವನ್ನು ಸರಕಾರವು ತನ್ನ ಸುಪರ್ದಿಯಲ್ಲಿಟ್ಟುಕೊಳ್ಳುವುದು ಮಾತ್ರ ಅರ್ಥವಾಗುವುದಿಲ್ಲ. ಇದರ ಹಿಂದಿನ ಕಾರಣವೇನಿರಬಹುದು ? ಎಂಬ ಪ್ರಶ್ನೆಯನ್ನು ಸದ್ಗುರು ಜಗ್ಗಿ ವಾಸುದೇವರು ಸಿ.ಎನ್.ಎನ್ ಈ ವಾರ್ತಾವಾಹಿನಿಯ ಪತ್ರಕರ್ತ ಆನಂದ ನರಸಿಂಹನ್ ಇವರಿಗೆ ನೀಡಿದ ಒಂದು ಸಂದರ್ಶನದಲ್ಲಿ ಮಂಡಿಸಿದರು. ಈ ಸಂದರ್ಶನವು ಯು-ಟ್ಯೂಬ್ ನಲ್ಲಿ ಲಭ್ಯವಿದೆ.
(ಸೌಜನ್ಯ : ಸದ್ಗುರು)
ಸದ್ಗುರು ಜಗ್ಗಿ ವಾಸುದೇವರು ಸಂದರ್ಶನದಲ್ಲಿ ಮಂಡಿಸಿದ ಅಂಶಗಳು
೧. ೧೮೧೭ರಲ್ಲಿ ಈಸ್ಟ್ ಇಂಡಿಯಾ ಕಂಪನಿಯು ‘ಮದ್ರಾಸ್ ರೆಗ್ಯುಲೇಶನ್ ೧೧೧’ ಎಂಬ ಕಾನೂನನ್ನು ದೇವಸ್ಥಾನಗಳ ಮೇಲೆ ನಿಯಂತ್ರಣವನ್ನು ಪಡೆಯಲು ಅನ್ವಯಿಸಿತ್ತು. ಆದರೆ ೧೮೪೦ರಲ್ಲಿ ಅದನ್ನು ಹಿಂದೆ ಪಡೆಯಲಾಯಿತು. ಅನಂತರ ೧೮೬೩ ರಲ್ಲಿ ‘ರಿಲಿಜಿಯಸ್ ಎಂಡೊಮೆಂಟ್ ಆಕ್ಟ್’ ಅನ್ನು ತರಲಾಯಿತು. ಅದರ ಮೂಲಕ ದೇವಸ್ಥಾನಗಳನ್ನು ಬ್ರಿಟಿಷ ವಿಶ್ವಸ್ಥರ ಕೈಗೆ ಒಪ್ಪಿಸಲಾಯಿತು. ಈ ವಿಶ್ವಸ್ಥರೇ ದೇವಸ್ಥಾನಗಳನ್ನು ನಡೆಸುತ್ತಿದ್ದರು; ಆದರೆ ಸರಕಾರದ ಹಸ್ತಕ್ಷೇಪವು ಅತ್ಯಂತ ಅಲ್ಪವಾಗಿತ್ತು. ದೇವಸ್ಥಾನಗಳ ಹಣವನ್ನು ದೇವಸ್ಥಾನಗಳ ಕಾರ್ಯಕ್ಕಾಗಿಯೇ ಉಪಯೋಗಿಸಲಾಗುತ್ತಿತ್ತು. ನೂರಾರು ದೇವಸ್ಥಾನಗಳು ಈ ಕಾನೂನಿಗನುಸಾರ ನಡೆಯುತ್ತಿದ್ದವು
೨. ಅನಂತರ ಬ್ರಿಟಿಷ್ ಸರಕಾರದಿಂದ ‘ದ ಮದ್ರಾಸ್ ರಿಲಿಜಿಯಸನ್ ಆಂಡ್ ಚಾರಿಟೇಬಲ್ ಎಂಡೊಮೆಂಟ್ ಆಕ್ಟ್ ೧೯೨೫’ ಈ ಕಾನೂನು ಅಸ್ತಿತ್ವಕ್ಕೆ ತರಲಾಯಿತು. ಇದರಲ್ಲಿ ಹಿಂದೂ ಸಹಿತ ಮುಸಲ್ಮಾನ ಮತ್ತು ಕ್ರೈಸ್ತರ ಧಾರ್ಮಿಕ ಸ್ಥಳಗಳು ಸಹ ನಿಯಂತ್ರಣಕ್ಕೊಳಗಾದವು. ಇದರಲ್ಲಿ ಕ್ರೈಸ್ತರು ಮತ್ತು ಮುಸಲ್ಮಾನರು ವಿರೋಧಿಸಿದ ನಂತರ ಸರಕಾರವು ಅವುಗಳನ್ನು ಕಾನೂನಿನಿಂದ ಹೊರಗಿರಿಸಿತು ಮತ್ತು ಹೊಸ ಕಾನೂನನ್ನು ತರಲಾಯಿತು ಇದರ ಹೆಸರು, ‘ಮದ್ರಾಸ್ ಹಿಂದೂ ರಿಲಿಜಿಯಸ್ ಆಂಡ್ ಎಂಡೊಮೆಂಟ್ ಆಕ್ಟ್ ೧೯೨೭’ (ಕ್ರೈಸ್ತ ಮತ್ತು ಮುಸಲ್ಮಾನರ ವಿರೋಧದ ನಂತರ ಆಂಗ್ಲರು ಹಿಮ್ಮೆಟ್ಟಿದ್ದರು. ಆದರೆ ಹಿಂದೂಗಳು ವಿರೋಧವನ್ನು ಸಹ ಮಾಡಲಿಲ್ಲ. ಈಗಲೂ ಹಿಂದೂಗಳು ಎಷ್ಟು ಅವಶ್ಯಕವಿದೆ ಅಷ್ಟು ವಿರೋಧವನ್ನು ಮಾಡುತ್ತಿಲ್ಲ. ಹಾಗಾಗಿ ದೇಶದಲ್ಲಿ ಹಿಂದೂ ರಾಜಕಾರಣಿಗಳು ಹಿಂದೂಗಳಿಗೆ ಸೊಪ್ಪು ಹಾಕುತ್ತಿಲ್ಲ ಎಂಬುದು ವಸ್ತುಸ್ಥಿತಿಯಾಗಿದೆ – ಸಂಪಾದಕರು) ಅನಂತರ ೧೯೩೫ ರಲ್ಲಿ ಇದರಲ್ಲಿ ದೊಡ್ಡ ಬದಲಾವಣೆ ಮಾಡಲಾಯಿತು.
೩. ಸ್ವಾತಂತ್ರ್ಯಾ ನಂತರ ತಮಿಳುನಾಡು ಸರಕಾರವು ೧೯೫೧ ರಲ್ಲಿ ‘ಹಿಂದೂ ರಿಲಿಜಿಯಸ್ ಆಂಡ್ ಎಂಡೊಮೆಂಟ್ ಆಕ್ಟ್’ ಎಂಬ ಹೊಸ ಕಾನೂನನ್ನು ಮಾಡಿತು. ಈ ಕಾನೂನಿಗೆ ಮಠ ಮತ್ತು ದೇವಸ್ಥಾನಗಳು ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಅನಂತರ ಸರ್ವೋಚ್ಚ ನ್ಯಾಯಾಯಲದಲ್ಲಿ ಆಹ್ವಾನ ನೀಡಿದವು. ಹಾಗಾಗಿ ಇದರಿಂದ ಅನೇಕ ಕಲಂಗಳನ್ನು ಸರಕಾರವು ತೆಗೆಯಬೇಕಾಯಿತು. ಅನಂತರ ೧೯೫೯ ರಲ್ಲಿ ಅಂದಿನ ಕಾಂಗ್ರೆಸ್ ರಾಜ್ಯ ಸರಕಾರವು ‘ಹಿಂದೂ ರಿಲಿಜಿಯಸ್ ಆಂಡ್ ಎಂಡೊಮೆಂಟ್ ಆಕ್ಟ್’ಗೆ ಸಮ್ಮತಿ ನೀಡಿದವು. ಇದರ ಪ್ರಮುಖ ಆಯುಕ್ತರಾಗಿದ್ದರು. ದೇವಸ್ಥಾನದ ಅರ್ಪಣೆಯ ಶೇ. ೬೫ ರಿಂದ ೭೦ ರಷ್ಟು ಹಣವನ್ನು ಮಾತ್ರ ಆಡಳಿತದ ಕಾರ್ಯಕ್ಕಾಗಿ ಖರ್ಚು ಮಾಡಲಾಗಿತ್ತು.
೪. ಇಂದು ದೇಶದಲ್ಲಿರುವ ೩೭ ಸಾವಿರ ದೇವಸ್ಥಾನಗಳ ಮೇಲೆ ಸರಕಾರದ ನಿಯಂತ್ರಣವಿದೆ. ಕೇವಲ ಒಂದು ಧರ್ಮದ ಮೇಲೆ ಸರಕಾರದ ನಿಯಂತ್ರಣವಿದೆ. ಇದನ್ನು ನೀವು ಇತರ ಯಾವುದೇ ದೇಶದಲ್ಲಿ ಆಗಿರುವುದನ್ನು ಕೇಳಿರಲಿಕ್ಕಿಲ್ಲ. ಹಿಂದೂಗಳ ದೇವಸ್ಥಾನಗಳ ಮೇಲಿನ ಸರಕಾರಿ ನಿಯಂತ್ರಣದಿಂದ ಯಾವಾಗಲೂ ಇದನ್ನೆ ಹೇಳಲಾಗುತ್ತದೆ. ‘ಚರ್ಚ್, ಗುರುದ್ವಾರಗಳು ಮತ್ತು ಮಸೀದಿಗಳನ್ನು ಸಹ ಸರಕಾರದ ನಿಯಂತ್ರಣಕ್ಕೊಳಪಡಿಸಬೇಕು’. ಆದರೆ ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಹಸ್ತಕ್ಷೇಪ ಮಾಡುವುದರಿಂದ ಸರಕಾರವು ಬಹಳ ದೂರವಿರಬೇಕು ಎಂದು ನಾನು ಹೇಳುತ್ತೇನೆ.
೫. ಎಲ್ಲಿ ಜನರು ತಮ್ಮ ಶ್ರದ್ಧೆಯಿಂದ ನಿಯಮಿತವಾಗಿ ಹೋಗುತ್ತಾರೆಯೋ ಆ ಸ್ಥಳಗಳು ಸ್ವತಂತ್ರವಾಗಿರಬೇಕು. ಅವರ ಮಾನವಾಧಿಕಾರಕ್ಕಾಗಿ ಹೀಗಿರಬೇಕು. ಕೆಲವು ಜನರ ಯುಕ್ತಿವಾದ ಹೇಗಿದೆ ಎಂದರೆ, ಮೊದಲು ದೇವಸ್ಥಾನಗಳು ರಾಜರ ನಿಯಂತ್ರಣದಲ್ಲಿದ್ದವು. ಈಗ ಸರಕಾರದ ನಿಯಂತ್ರಣದಲ್ಲಿವೆ. ಇದು ಸತ್ಯವಾದ ವಿಷಯವಲ್ಲ. ರಾಜರೆಲ್ಲರೂ ಶ್ರದ್ಧಾವಂತರಾಗಿದ್ದರು. ಅನೇಕ ಸಾಮ್ರಾಜ್ಯಗಳಲ್ಲಿ ದೇವತೆಗಳನ್ನೇ ರಾಜರೆಂದು ಪರಿಗಣಿಸಲಾಗುತ್ತಿತ್ತು. ರಾಜನು ದೇವತೆಯ ಒಬ್ಬ ಮಂತ್ರಿಯಂತೆ ಕೆಲಸ ಮಾಡುತ್ತಿದ್ದನು. ಇಲ್ಲಿ ಮಾತ್ರ ನಮ್ಮ ಮಂತ್ರಿಗಳು ತಾವು ದೇವತೆಗಳ ಪ್ರತಿನಿಧಿಗಳೆಂಬಂತೆ ರಾಜ್ಯ ಮಾಡುತ್ತಾರೆ.
೬. ಸರಕಾರಿ ನಿಯಂತ್ರಣದಲ್ಲಿರುವ ದೇವಸ್ಥಾನಗಳ ದುರವಸ್ಥೆಯಾಗುತ್ತಿದೆ. ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಹೀಗಾಗಿದೆ. ತಮಿಳುನಾಡಿನ ದೇವಸ್ಥಾನಗಳು ಬಹಳ ಸುಂದರವಾಗಿದ್ದವು. ಈಗ ದೇವಸ್ಥಾನದಲ್ಲಿರುವ ಕೆಲವು ವಸ್ತುಗಳ ಕಳ್ಳತನವಾಗಿದೆ. ದೇವಸ್ಥಾನಗಳ ಪ್ರಾಚೀನ ಕಲ್ಲುಗಳ ಮೇಲೆ ಸುಂದರವಾದ ಶಿಲ್ಪಕಲೆಗಳಿದ್ದವು. ಅವುಗಳ ಮೇಲೆ ಬಣ್ಣ ಹೊಡೆಯಲಾಗಿದೆ. ಎಲ್ಲವೂ ನಾಶವಾಗಿ ಬಿಟ್ಟಿದೆ. ಏಕೆಂದರೆ ಜನರ ಭಾವನೆಗಳು ಅಷ್ಟು ಪ್ರಬಲವಾಗಿಲ್ಲ. ಇದರಿಂದ ತಮಿಳುನಾಡಿನ ದೇವಸ್ಥಾನಗಳನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸಬೇಕು.
೭. ತಮಿಳುನಾಡಿನಲ್ಲಿ ನೀವು ಯಾವುದಾದರೊಂದು ದೇವಸ್ಥಾನವನ್ನು ಕಟ್ಟಲು ಪ್ರಯತ್ನಿಸಿ ಅದು ನಂತರ ಪ್ರಸಿದ್ಧವಾದರೆ ಸರಕಾರವು ಕೂಡಲೇ ಅದನ್ನು ತನ್ನ ನಿಯಂತ್ರಣಕ್ಕೆ ಒಪ್ಪಿಸುವಂತೆ ನೋಟಿಸು ಕಳಿಸುತ್ತದೆ. ಇದು ಜಾತ್ಯತೀತ ದೇಶದಲ್ಲಿ ಹೇಗೆ ಆಗಲು ಸಾಧ್ಯ?
೮. ದೇವಸ್ಥಾನ ನಿರ್ಮಿತಿಯ ವಿಜ್ಞಾನವನ್ನು ನಾಶ ಮಾಡಲಾಗಿದೆ. ಇದು ಮೂಲಭೂತ ಅಧಿಕಾರವನ್ನು ಕಸಿದುಕೊಂಡಂತೆ ಅಲ್ಲವೇ? ಈಗ ದೇವಸ್ಥಾನಗಳನ್ನು ಸ್ವತಂತ್ರಗೊಳಿಸುವ ಸಮಯವು ಬಂದಿದೆ. ‘ಇದರಿಂದ ಭ್ರಷ್ಟಾಚಾರವಾಗಬಹುದು’ ಎಂದು ಜನರು ಹೇಳುತ್ತಾರೆ. ಇದು ನನಗೆ ಅಪಮಾನಕಾರಿ ಅನಿಸುತ್ತದೆ. ನಾವು ಬಹುಸಂಖ್ಯಾತರು ನಮ್ಮ ದೇವಸ್ಥಾನಗಳನ್ನು ಯೋಗ್ಯ ರೀತಿಯಲ್ಲಿ ನಮ್ಮ ನಿಯಂತ್ರಣದಲ್ಲಿರಿಸಲು ಸಾಧ್ಯವಿಲ್ಲವೇ?
ಗಣ್ಯರಿಂದ ಸಮರ್ಥನೆ
೧. ಲೇಖಕ ಮತ್ತು ಶಾಸ್ತ್ರಜ್ಞ ಸುಭಾಷ ಕಾಕ ಇವರು ಸದ್ಗುರು ಜಗ್ಗಿ ವಾಸುದೇವರ ಬೇಡಿಕೆಯನ್ನು ಸಮರ್ಥಿಸಿದ್ದಾರೆ. ಅವರು ಸದ್ಗುರುಗಳು ಯೋಗ್ಯ ಪ್ರಶ್ನೆಯನ್ನು ಮಂಡಿಸಿದ್ದಾರೆ. ದೇವಸ್ಥಾನಗಳ ಮೇಲೆ ಸರಕಾರಿ ನಿಯಂತ್ರಣದ ಹಿಂದೆ ಯಾವುದೇ ತರ್ಕವಿಲ್ಲ. ಈ ಅಂಶವು ದೇಶದ ರಾಜಕಾರಣಕ್ಕೆ ಹಾನಿ ಉಂಟು ಮಾಡುತ್ತದೆ ಮತ್ತು ಆಡಳಿತದ ಸೇವೆಗಳನ್ನು ಭ್ರಷ್ಟಗೊಳಿಸುತ್ತಿದೆ.
೨. ನಟಿ ಕಂಗನಾ ರಾಣಾವತ ಇವರೂ ಇದನ್ನು ಸಮರ್ಥಿಸಿದ್ದಾರೆ. ಅವರು, ನಿಮಗೆ ಸಮಯವಿದ್ದಲ್ಲಿ ನೀವು ಈ ಸಂದರ್ಶನವನ್ನು ಅವಶ್ಯವಾಗಿ ವೀಕ್ಷಿಸಿರಿ. ಇದು ಬಹಳ ಮಹತ್ವಪೂರ್ಣವಾಗಿದೆ ಎಂದಿದ್ದಾರೆ.
ಸಾಮಾಜಿಕ ಮಾಧ್ಯಮಗಳಿಂದ ಕೆಲವು ಜನರು ಮಾಡಿದಂತಹ ಟ್ವೀಟ್‌ಗಳು
ಸದ್ಗುರು ಜಗ್ಗಿ ವಾಸುದೇವ ಇವರು ದೇವಸ್ಥಾನದ ವಿಷಯದ ಅಂಶಗಳನ್ನು ಸಾಮಾಜಿಕ ಮಾಧ್ಯಮಗಳಿಂದಲೂ ಸಮರ್ಥನೆ ಮಾಡಲಾಗುತ್ತಿದೆ. ಟ್ವೀಟ್‌ನಲ್ಲಿರುವ ಕೆಲವು ಪ್ರತಿಕ್ರಿಯೆಗಳನ್ನು ಇಲ್ಲಿ ನೀಡುತ್ತಿದ್ದೇವೆ.
೧. ಒಬ್ಬ ಟ್ವೀಟರ್ ಬಳಕೆದಾರರು, ಪ್ರಧಾನಮಂತ್ರಿಗಳ ಕಚೇರಿ, ಕೇಂದ್ರೀಯ ಗೃಹಸಚಿವಾಲಯ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಟ್ಯಾಗ್ ಮಾಡಿ, ಕೃಪೆ ತೋರಿ ಸದ್ಗುರು ಜಗ್ಗಿ ವಾಸುದೇವರ ಮಾತನ್ನು ಕೇಳಿರಿ. ಸಂಪೂರ್ಣ ದೇಶದಲ್ಲಿರುವ ದೇವಸ್ಥಾನಗಳನ್ನು ಮುಕ್ತಗೊಳಿಸಲು ಗುರುದ್ವಾರಾ ಪ್ರಬಂಧಕ ಕಮಿಟಿ ಆಕ್ಟ್ ೧೯೩೫ ರಂತೆ ಕಾನೂನು ತನ್ನಿರಿ. ಪ್ರಧಾನಮಂತ್ರಿ ಮೋದಿ ಇವರು ಶ್ರೀರಾಮ ಮಂದಿರದ ಶಿಲಾನ್ಯಾಸ ಮಾಡಿದರೆ ಸಾಲದು, ದೇವಸ್ಥಾನಗಳನ್ನು ಸಹ ಮುಕ್ತಗೊಳಿಸುವ ಅವಶ್ಯಕತೆ ಇದೆ ಎಂದು ಬರೆದಿದ್ದಾರೆ.
#Temples in Tamilnadu are in the clutches of Government Administration. Impinging on the sanctity of these powerfully Consecrated places of worship. Time Temples are managed by #Devotees, not by bureaucratic and Political forces. -Sg @PMOIndia @CMOTamilNadu @rajinikanth
— Sadhguru (@SadhguruJV) January 7, 2021
೨. ಯಾವ ರಾಜ್ಯಗಳಲ್ಲಿ ಜಾತ್ಯತೀತರ ರಾಜಕೀಯ ಪಕ್ಷಗಳ ಸರಕಾರವಿದೆಯೋ ಅಲ್ಲಿ ದೇವಸ್ಥಾನಗಳ ಹಣವನ್ನು ದುರುಪಯೋಗಿಸುವ ಅವಕಾಶ ನೀಡಲಾಗುತ್ತದೆ. ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕೇರಳದಲ್ಲಿರುವ ಸರಕಾರಗಳು ಇದರ ಉದಾಹರಣೆಯಾಗಿವೆ. ನ್ಯಾಯಾಲಯವೂ ಈ ಪ್ರಕರಣದಲ್ಲಿ ನಿರ್ದಿಷ್ಟ ಸಹಾಯವನ್ನು ಮಾಡಲಾರರು.
೩. ಸಂಪೂರ್ಣ ಭಾರತದಲ್ಲಿ ಪ್ರಜಾಪ್ರಭುತ್ವವು ಹಿಂದೂ ಸಂಸ್ಕೃತಿಯನ್ನು ನಾಶಗೊಳಿಸಲು ಪ್ರಯತ್ನಿಸುತ್ತಿದೆ. ತೆಲಂಗಾಣ, ಆಂಧ್ರಪ್ರದೇಶ, ಉತ್ತರ ಕರ್ನಾಟಕ ಮತ್ತು ತಮಿಳುನಾಡು ಇಲ್ಲಿ ಕ್ರೈಸ್ತ ಮಿಶನರಿಗಳ ಕಾರ್ಯಾಚರಣೆಗಳು ಹೆಚ್ಚಾಗಿವೆ. ಎಲ್ಲಿ ಒಬ್ಬನೇ ಒಬ್ಬ ಕ್ರೈಸ್ತನಿಲ್ಲವೋ ಅಲ್ಲಿ ಚರ್ಚಗಳನ್ನು ನಿರ್ಮಿಸಲಾಗುತ್ತಿದೆ. ಇದು ಎಲ್ಲ ಸರಕಾರಗಳ ಸಮರ್ಥನೆಯಿಂದಾಗುತ್ತಿದೆ.
೪. ಸರಕಾರವು ಒಂದೋ ದೇವಸ್ಥಾನಗಳನ್ನು ಮುಕ್ತಗೊಳಿಸಬೇಕು ಅಥವಾ ಎಲ್ಲ ಧರ್ಮೀಯರ ಧಾರ್ಮಿಕ ಸ್ಥಳಗಳನ್ನು ತನ್ನ ನಿಯಂತ್ರಣಕ್ಕೆ ತರಬೇಕು. ಕೇವಲ ಒಂದೇ ಧರ್ಮದ ವಿಷಯದಲ್ಲಾಗುವ ಭೇದಭಾವನ್ನು ಸ್ವೀಕರಿಸಲಾಗದು.
೫. ಇಂತಹ ಕಾಲದಲ್ಲಿ ನಾವು ವಾಸಿಸುತ್ತಿರುವ ಧರ್ಮದಿಂದ ದೂರ ಹೋಗಿರುವ ಹಿಂದೂಗಳಿಗೆ, ಅವರು ದೇಶ ಮತ್ತು ದೊಡ್ಡ ದೊಡ್ಡ ಉದ್ಯಮಗಳನ್ನು ನಡೆಸಬಲ್ಲರು. ಆದರೆ ಸ್ವಂತದ ದೇವಸ್ಥಾನಗಳನ್ನು ನಡೆಸಲು ಆಗುವುದಿಲ್ಲ ಎಂದು ಅನಿಸುತ್ತದೆ.