ತೀವ್ರ ವಿರೋಧದ ನಂತರ ಕರ್ನಾಟಕದ ಭಾಜಪ ಸರಕಾರದಿಂದ ‘ರಾಮಮಂದಿರ ಏಕೆ ಬೇಡ ?’ ಎಂಬ ಪುಸ್ತಕಗಳ ಖರೀದಿ ರದ್ದು

‘ಸರಕಾರೀ ಗ್ರಂಥಾಲಯಗಳಲ್ಲಿ ಮಾರಾಟವಾಗುವುದರಲ್ಲಿತ್ತು’

ಇಂತಹ ಒಂದು ಪುಸ್ತಕವನ್ನು ಖರೀದಿಸುವ ನಿರ್ಣಯವನ್ನು ತೆಗೆದುಕೊಂಡಿದ್ದಾದರೂ ಹೇಗೆ ? ಇದುವೇ ಮೂಲ ಪ್ರಶ್ನೆಯಾಗಿದೆ.

ಬೆಂಗಳೂರು – ರಾಜ್ಯದ ಗ್ರಂಥಾಲಯಗಳಿಗಾಗಿ ಕೆ.ಎಸ್. ಭಗವಾನ್ ಇವರ ‘ರಾಮಮಂದಿರ ಏಕೆ ಬೇಡ’ ? ಈ ಪುಸ್ತಕವನ್ನು ಖರೀದಿಸಲು ಪ್ರಯತ್ನಿಸುವ ಆಡಳಿತಕ್ಕೆ ವ್ಯಾಪಕ ಸ್ತರದಲ್ಲಿ ವಿರೋಧವಾದ ಕಾರಣ ಪುಸ್ತಕ ಖರೀದಿಸುವ ನಿರ್ಣಯವನ್ನು ರದ್ದು ಪಡಿಸಲಾಗಿದೆ.

ಶಿಕ್ಷಣ ಸಚಿವ ಸುರೇಶ ಕುಮಾರ

ಈ ವಿಷಯದಲ್ಲಿ ರಾಜ್ಯದ ಶಿಕ್ಷಣ ಸಚಿವ ಸುರೇಶ ಕುಮಾರ ಇವರು, ಯಾವುದೇ ಪದ್ಧತಿಯಿಂದ ಜನರ ಧಾರ್ಮಿಕ ಭಾವನೆಗಳಿಗೆ ನೋವು ಉಂಟು ಮಾಡುವಂತಹ ಪುಸ್ತಕಗಳನ್ನು ಶಿಕ್ಷಣ ಇಲಾಖೆಯು ಖರೀದಿ ಮಾಡಲಾರದು. ಇಂತಹ ಯಾವುದೇ ಉಪಕ್ರಮಗಳಿಗೆ ನಾನು ಪ್ರೋತ್ಸಾಹ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಒಂದೆಡೆ ಆಡಳಿತಾರೂಢ ಪಕ್ಷವು ಶ್ರೀರಾಮ ಮಂದಿರಕ್ಕಾಗಿ ದೇಶದಾದ್ಯಂತ ನಿಧಿ ಸಂಗ್ರಹಿಸುವ ಅಭಿಯಾನವನ್ನು ಹಮ್ಮಿಕೊಂಡಿರುವಾಗ ಇನ್ನೊಂದೆಡೆ ಶ್ರೀರಾಮನ ಸಂದರ್ಭದಲ್ಲಿ ವಿವಾದಾಸ್ಪದ ಅಂಶಗಳಿರುವ ಪುಸ್ತಕವನ್ನು ಸರಕಾರವೇ ಖರೀದಿಸಿ ಅದರ ಪ್ರತಿಯನ್ನು ಪ್ರತಿಯೊಂದು ಗ್ರಂಥಾಲಯದಲ್ಲಿ ಇಡುವ ಪ್ರಕ್ರಿಯೆಯಿಂದ ಕೊನೆಯ ಹಂತವನ್ನು ತಲುಪಿತ್ತು. ಇದರಿಂದ ಭಾಜಪದಲ್ಲಿ ಅಸಮಾಧಾನವುಂಟಾಗಿತ್ತು. ಈ ಪುಸ್ತಕದಲ್ಲಿ ಮನುಷ್ಯನಿಗೆ ದೇವಸ್ಥಾನ ಯಾಕೆ ಬೇಕು ಎಂಬ ಆಶಯದ ವಿಷಯಗಳಿವೆ.