ರಾಜ್ಯ ಸರಕಾರವು ಅನ್ವಯಿಸಿದ ಗೋಹತ್ಯೆ ನಿಷೇಧಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿದ ಉಚ್ಚ ನ್ಯಾಯಾಲಯ

ಗೋಹತ್ಯಾ ನಿಷೇಧವನ್ನು ವಿರೋಧಿಸುವ ಕಾಂಗ್ರೆಸ್ ಮತ್ತು ಪ್ರಗತಿ (ಅಧೋಗತಿ) ಪರರಿಗೆ ಕಪಾಳಮೋಕ್ಷ!

ಬೆಂಗಳೂರು – ಕರ್ನಾಟಕ ಉಚ್ಚ ನ್ಯಾಯಾಲಯವು ಕರ್ನಾಟಕ ಸರಕಾರವು ಅನ್ವಯಗೊಳಿಸಿದ ಗೋಹತ್ಯಾ ನಿಷೇಧಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿದೆ ಎಂದು ನಿರ್ಧರಿಸಿದೆ. ನ್ಯಾಯಾಲಯದ ಈ ನಿರ್ಣಯದಿಂದ ನಿಷೇಧದ ಕಾರ್ಯಾಚರಣೆಯನ್ನು ಮಾಡಿಕೊಳ್ಳಲು ಸರಕಾರಕ್ಕೆ ಉಂಟಾಗಿದ್ದ ಅಡಚಣೆಯು ಸಹ ದೂರವಾಗಿದೆ. ಸರಕಾರದ ಗೋಹತ್ಯೆ ನಿಷೇಧ ಕಾನೂನಿಗನುಸಾರ ಗೋಹತ್ಯೆ ಮಾಡುವವರಿಗೆ ೫೦ ಸಾವಿರದಿಂದ ೧ ಲಕ್ಷ ರೂಪಾಯಿಗಳ ದಂಡ, ೩ ರಿಂದ ೭ ವರ್ಷದ ಜೈಲುಶಿಕ್ಷೆ ಮುಂತಾದ ಶಿಕ್ಷೆಯ ಏರ್ಪಾಡನ್ನು ಸಹ ಕಾನೂನಿನಲ್ಲಿ ಮಾಡಲಾಗಿದೆ.