ಕುತುಬ ಮಿನಾರ್ ಅನ್ನು ಕುತುಬುದ್ದೀನ್ ಐಬಕ್ ನು ಕಟ್ಟಿದ್ದನೆಂದು ಪಠ್ಯಪುಸ್ತಕಗಳಿಂದ ಕಲಿಸುವ ಎನ್.ಸಿ.ಈ.ಆರ್.ಟಿ.ಯ ಬಳಿ ಅದರ ವಿಷಯದಲ್ಲಿ ಯಾವುದೇ ಪುರಾವೆಗಳಿಲ್ಲ !

೨೦೧೨ ರಲ್ಲಿಯೇ ಇತಿಹಾಸ ಸಂಶೋಧಕ ಮತ್ತು ಲೇಖಕ ನೀರಜ ಅತ್ರಿ ಇವರ ಮಾಹಿತಿ ಹಕ್ಕು ಅಧಿಕಾರದ ಅರ್ಜಿಯಿಂದ ಇದು ಬೆಳಕಿಗೆ ಬಂದಿತ್ತು!

  • ೨೦೧೨ ರಲ್ಲಿಯೇ ಇದು ಸ್ಪಷ್ಟವಾಗಿರುವಾಗ ಇನ್ನೂ ವಿದ್ಯಾರ್ಥಿಗಳಿಗೆ ಅದನ್ನು ಯಾಕೆ ಕಲಿಸಲಾಗುತ್ತಿದೆ ? ಕೇಂದ್ರದಲ್ಲಿ ಕಳೆದ ೬ ವರ್ಷಗಳಿಂದ ಭಾಜಪ ಸರಕಾರವಿರುವಾಗ ಈ ಸುಳ್ಳು ಇತಿಹಾಸವನ್ನು ಬದಲಾಯಿಸಿ ಸತ್ಯ ಇತಿಹಾಸವನ್ನು ಯಾಕೆ ಕಲಿಸಲಾಗಲಿಲ್ಲ, ಇದನ್ನು ಸರಕಾರವು ಹೇಳಬೇಕು ಎಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ.
  • ಕುತುಬ್ ಮಿನಾರ್ ಈ ವಾಸ್ತುವು ಹಿಂದೂಗಳದ್ದಾಗಿದೆ ಇದರ ಹೆಸರು `ವಿಷ್ಣುಸ್ತಂಭ’ ಎಂದು ಅನೇಕ ಇತಿಹಾಸಕಾರರು ಪುರಾವೆಗಳ ಸಹಿತ ಮುಂದಿಟ್ಟಿದ್ದಾರೆ. ಈ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿಯೂ ಯಾಚಿಕೆಯನ್ನು ದಾಖಲಿಸಿರುವುದರಿಂದ ಈಗ ಕೇಂದ್ರ ಸರಕಾರವು ಯೋಗ್ಯ ನಿರ್ಣಯ ತೆಗೆದುಕೊಳ್ಳುವುದು ಅವಶ್ಯವಾಗಿದೆ!
ಕುತುಬ ಮಿನಾರ್

ನವ ದೆಹಲಿ – ಎನ್.ಸಿ.ಈ.ಆರ್.ಟಿ ಯ ಇತಿಹಾಸದ ಪುಸ್ತಕದಲ್ಲಿ ಮೊಗಲರು ಯುದ್ಧದಲ್ಲಿ ಭಗ್ನಗೊಳಿಸಿದ ಹಿಂದೂಗಳ ದೇವಸ್ಥಾನಗಳನ್ನು ನಂತರ ಬಾದಶಾಹ ಶಹಾಜಹಾನ ಮತ್ತು ಔರಂಗಜೇಬ ಇವರು ದುರುಸ್ತಿಗೊಳಿಸಿದರು ಎಂಬ ಯಾವುದೇ ಪುರಾವೆಗಳಿಲ್ಲದ ಇತಿಹಾಸವನ್ನು ಕಲಿಸಲಾಗುತ್ತಿದೆ ಎಂದು ಬೆಳಕಿಗೆ ಬಂದಿದೆ. ಈಗ ಎನ್.ಸಿ.ಈ.ಆರ್.ಟಿ ಯ ಇನ್ನೂ ಒಂದು ಸುಳ್ಳುಕೋರತನವು ಮಾಹಿತಿ ಹಕ್ಕು ಅಧಿಕಾರದಿಂದ ಬೆಳಕಿಗೆ ಬಂದಿದೆ. ಎನ್.ಸಿ.ಈ. ಆರ್.ಟಿ ಯ ೭ ನೆ ತರಗತಿಯ `ಅವರ್ ಪಾಸ್ಟ್’ ಪುಸ್ತಕದಲ್ಲಿ ದೆಹಲಿಯಲ್ಲಿರುವ ಕುತುಬ್ ಮಿನಾರ್ ನ  ವಾಸ್ತುವನ್ನು ಕುತುಬ್ಬುದ್ದೀನ್ ಐಬಕ್ ನು ಕಟ್ಟಿಸಿದ್ದನು ಎಂದು ಕಲಿಸಲಾಗುತ್ತಿದೆ. ಆದರೆ ಇತಿಹಾಸ ಸಂಶೋಧಕ ಹಾಗೂ ಲೇಖಕ ನೀರಜ ಅತ್ರಿ ಇವರು ೨೧ ನವೆಂಬರ್ ೨೦೧೨ ರಲ್ಲಿಯೇ ಮಾಹಿತಿ ಹಕ್ಕು ಅಧಿಕಾರದಡಿಯಲ್ಲಿ ವಿಚಾರಿಸಿದ ಪ್ರಶ್ನೆಗಳ ಉತ್ತರಗಳಿಂದ ಈ ವಿಷಯದಲ್ಲಿ ಎನ್.ಸಿ.ಈ.ಆರ್.ಟಿ ಯ ಬಳಿ ಯಾವುದೇ ಪುರಾವೆಗಳಿಲ್ಲ ಎಂಬುದು ತಿಳಿದುಬಂದಿದೆ.

೧.ಈ ಪುಸ್ತಕದಲ್ಲಿ ಕುತುಬ್ ಮಿನಾರ್ ನ ಛಾಯಾಚಿತ್ರವನ್ನು ಮುದ್ರಿಸಲಾಗಿದೆ. ಇದರಲ್ಲಿ, ಕುವ್ವತುಲ ಇಸ್ಲಾಮ್ ಮಶೀದ ಮತ್ತು ಮಿನಾರ್ ಅನ್ನು ೧೨ ನೆಯ ಶತಮಾನದ ಅಂತ್ಯದಲ್ಲಿ ಕಟ್ಟಲಾಗಿತ್ತು. ದೆಹಲಿಯ ಬಾದಶಾಹರು ಹೊಸ ನಗರವನ್ನು ಕಟ್ಟಿದ ಆನಂದವನ್ನು ಆಚರಿಸಲು ಈ ಕಟ್ಟಡವನ್ನು ಕಟ್ಟಿದರು. ಈ ನಗರಕ್ಕೆ ಇತಿಹಾಸದಲ್ಲಿ ದಿಲ್ಲಿ-ಎ-ಕುಹನಾ’ ಎಂದು ಹೇಳಲಾಗುತ್ತಿತ್ತು. ಅದಕ್ಕೆ ಇಂದು ಹಳೆ ದೆಹಲಿ ಎನ್ನಲಾಗುತ್ತದೆ.

೨. ಕುತುಬುದ್ದೀನ್ ಐಬಕನು ಇಲ್ಲಿ ಮಸೀದಿಯನ್ನು ಕಟ್ಟಲು ಪ್ರಾರಂಭಿಸಿದನು ಆದರೆ ಅದನ್ನು ಮಾಮಲುಕ ಸಾಮ್ರಾಜ್ಯದ ಮೂರನೆಯ ಸುಲ್ತಾನ ಇಲ್ತುತಮಿಶನು ಪೂರ್ಣಗೊಳಿಸಿದನು. ಅವನು ಐಬಕನ ಅಳಿಯನಾಗಿದ್ದನು.

೩. ಈ ಪುಸ್ತಕದಲ್ಲಿ ಮಸೀದಿ ಎಂದರೇನು ಮತ್ತು ಅದಕ್ಕೆ ಅರಬೀ ಭಾಷೆಯಲ್ಲಿನ ಅರ್ಥ ಏನು ಇದನ್ನೆಲ್ಲ ವಿವರಿಸಲಾಗಿದೆ. ಹಾಗೂ ನಮಾಜು ಪಠಣದ ವಿಷಯದ ಮಾಹಿತಿಯನ್ನು ಸಹ ನೀಡಲಾಗಿದೆ.

ಇತಿಹಾಸ ಸಂಶೋಧಕ ಮತ್ತು ಲೇಖಕ ನೀರಜ ಅತ್ರಿ ಇವರು ಎನ್.ಸಿ.ಈ.ಆರ್.ಟಿ ಗೆ ವಿಚಾರಿಸಿದ ೫ ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳು

೧. ನೀರಜ ಅತ್ರಿ ಇವರು ಮಾಹಿತಿ ಹಕ್ಕುಗಳ ಅಡಿಯಲ್ಲಿ ೫ ಪ್ರಶ್ನೆಗಳನ್ನು ವಿಚಾರಿಸಿದ್ದರು. ಅದರಿಂದಾಗಿ ಈ ಮಾಹಿತಿಯು ಬೆಳಕಿಗೆ ಬಂತು. ಅತ್ರಿಯವರು, ಯಾವ ಆಧಾರದಲ್ಲಿ ಈ ಇವರಿಬ್ಬರೂ ಕುತುಬ್ ಮಿನಾರ್ ಮತ್ತು ಅಲ್ಲಿರುವ ಮಸೀದಿಯನ್ನು ಕಟ್ಟಿದ್ದರು ಅದರ ಕಾಗದಪತ್ರಗಳು ಇವೆಯೇ ? ಒಂದುವೇಳೆ ಇದ್ದಲ್ಲಿ ಅವು ಯಾವುವು? ಎಂಬ ಪ್ರಶ್ನೆಯನ್ನು ಕೇಳಿದ್ದರು. ಇದಕ್ಕೆ ಎನ್.ಸಿ.ಈ. ಆರ್.ಟಿ.ಯು ಇಂತಹ ಯಾವುದೇ ಕಾಗದಪತ್ರಗಳು ಲಭ್ಯವಿಲ್ಲ ಎಂದು ಉತ್ತರ ನೀಡಿದೆ.

೨. ಈ ಬಗ್ಗೆ ಯಾವುದಾದರೂ ಶಿಲಾಶಾಸನಗಳ ಪುರಾವೆ ಇದೆಯೇ ? ಅದಕ್ಕೆ ಸಹ ಇಲ್ಲ ಎಂದೇ ಉತ್ತರ ಸಿಕ್ಕಿದೆ.

೩. ಮೂರನೆಯ ಪ್ರಶ್ನೆ ಹೀಗಿತ್ತು, ಯಾರ ಶಿಫಾರಸಿನಿಂದ ಈ ವಿಷಯವನ್ನು ಪುಸ್ತಕದಲ್ಲಿ ಮುದ್ರಿಸಲಾಗಿದೆ ? ಅವರ ಹೆಸರುಗಳನ್ನು ತಿಳಿಸಬೇಕು. ಇದಕ್ಕೆ ಉತ್ತರವನ್ನು ನೀಡುವಾಗ, `ಪುಸ್ತಕ ಮಂಡಲಿಯ ಸದಸ್ಯರು, ಮುಖ್ಯ ಸಲಹಾಗಾರರು, ಅಧ್ಯಕ್ಷರು ಇವರದ್ದೆಲ್ಲ ಹೆಸರುಗಳನ್ನು ಪುಸ್ತಕದಲ್ಲಿ ನೀಡಲಾಗಿದೆ’ ಎಂದು ಹೇಳಲಾಗಿದೆ.

೪. ಈ ವಿಷಯದ ಪುರಾವೆಗಳ ನಿರೀಕ್ಷಣೆಯನ್ನು ಯಾರು ಮಾಡಿದರು ಮತ್ತು ಅದಕ್ಕೆ ಮಾನ್ಯತೆಯನ್ನು ನೀಡಿದವರು ಯಾರು? ಇದಕ್ಕೆ ಉತ್ತರಿಸುವಾಗ, ಪ್ರಾ.ಮೃಣಾಲ ಮಿರಿ ಇವರ ಅಧ್ಯಕ್ಷತೆಯಲ್ಲಿ `ನ್ಯಾಶನಲ್ ಮಾನಿಟರಿಂಗ ಕಮಿಟಿ’ಯು ಇದಕ್ಕೆ ಅನುಮತಿ ನೀಡಿದೆ ಮತ್ತು ಇದನ್ನು ಪುಸ್ತಕದಲ್ಲಿಯೂ ಉಲ್ಲೇಖಿಸಲಾಗಿದೆ’ ಎಂದು ಹೇಳಲಾಗಿದೆ.

೫. ಕೊನೆಯ ಪ್ರಶ್ನೆ ಹೀಗಿತ್ತು, ಈ ಪುರಾವೆಗಳ ವಿಷಯದಲ್ಲಿ ಏನಾದರೂ ಟಿಪ್ಪಣಿಗಳಿವೆಯೇನು? ಇದಕ್ಕೆ `ಇಂತಹ ಯಾವುದೇ ಟಿಪ್ಪಣಿಗಳಿಲ್ಲ’ ಎಂದು ಉತ್ತರಿಸಲಾಗಿದೆ.