ಮತಾಂಧರು ಸ್ವಾಧೀನ ಪಡಿಸಿಕೊಂಡಿದ್ದ ವಿದಿಶಾ (ಮಧ್ಯಪ್ರದೇಶ) ಇಲ್ಲಿನ ಪರಮಾರ ವಂಶದ ಪ್ರಾಚೀನ ರಾಜಮಹಲನ್ನು ತೆರವುಗೊಳಿಸಿದ ಆಡಳಿತ!

ರಾಜಮಹಲ ಧರ್ಮಾಂಧರ ನಿಯಂತ್ರಣಕ್ಕೆ ಹೋಗುವ ತನಕ ಆಡಳಿತವು ಏನು ಮಾಡುತ್ತಿತ್ತು?

ವಿದಿಶಾ (ಮಧ್ಯಪ್ರದೇಶ) – ಇಲ್ಲಿಂದ ೭೦ ಕಿ.ಮೀ. ದೂರದಲ್ಲಿರುವ ಉದಯಪುರ ನಗರದಲ್ಲಿ ೧ ಸಾವಿರ ವರ್ಷ ಪುರಾತನವಾಗಿರುವ ಪರಮಾರ ವಂಶದ ರಾಜಮಹಲ (ಅರಮನೆ) ಇದರ ಮೇಲೆ ಕಾಝಿ ಸಯ್ಯದ ಇರಫಾನ ಅಲಿ ಇವರು ಇದು ಖಾಸಗಿ ಆಸ್ತಿ ಎಂದು ಫಲಕವನ್ನು ಹಾಕಿದ್ದರು. ತಹಶೀಲ್ದಾರರ ಆದೇಶದ ನಂತರ ಆಡಳಿತವು ಅದನ್ನು ತೆರವುಗೊಳಿಸಿದೆ ಹಾಗೂ ೫ ಸಾವಿರ ರೂ. ದಂಡವನ್ನು ಸಹ ವಸೂಲಿ ಮಾಡಲಾಯಿತು. ಈ ಸ್ಥಳದಲ್ಲಿ ಅಲಿ ಇವರಿಂದ ಮದರಸಾವನ್ನು ನಡೆಸಲಾಗುತ್ತಿತ್ತು. (ಪುರಾತತ್ವ ಇಲಾಖೆಯು ಇಷ್ಟು ವರ್ಷ ಏನು ಮಾಡುತ್ತಿತ್ತು ? ಹಿಂದೂಗಳು ಏನಾದರೂ ಈ ರೀತಿ ಮಾಡಿದ್ದಿದ್ದರೆ ತಕ್ಷಣವೇ ಈ ಇಲಾಖೆಯು ಹಿಂದೂಗಳನ್ನು ಅಲ್ಲಿಂದ ಹೊರದಬ್ಬುತ್ತಿತ್ತು ! – ಸಂಪಾದಕರು) ಇರಫಾನ ಅಲಿಯ ವಾದವೆಂದರೆ ಈ ಅರಮನೆ ೧ ಸಾವಿರ ವರ್ಷದಷ್ಟು ಪುರಾತನವಲ್ಲ ಕೇವಲ ೪೦೦ ವರ್ಷದಷ್ಟೇ ಪ್ರಾಚೀನವಾಗಿದ್ದು ಅದರ ಕಟ್ಟಡಕಾಮಗಾರಿಯನ್ನು ತಮ್ಮ ಪೂರ್ವಜರು ಮಾಡಿದ್ದಾರೆ.

ಬಾದಶಾಜ ಜಹಾಂಗೀರ ಮತ್ತು ಶಹಾಜಹಾನ ಇವರು ತಮ್ಮ ಕುಟುಂಬದವರ ಹೆಸರಿನಲ್ಲಿ ಈ ಅರಮನೆಯನ್ನು ನೀಡಿದ್ದರು ಎಂದೂ ಅಲಿ ವಾದಿಸಿದ್ದನು. ಈ ವಿಷಯದ ಮಾಹಿತಿಯು ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರವಾದ ನಂತರ ಆಡಳಿತವು ಇದನ್ನು ದಾಖಲಿಸಿಕೊಂಡು ಕಾರ್ಯಾಚರಣೆಯನ್ನು ನಡೆಸಿತು. (ಸಾಮಾಜಿಕ ಮಾಧ್ಯಮಗಳಿಂದ ಮಾಹಿತಿ ದೊರಕಿದ ನಂತರ ಎಚ್ಚರಗೊಳ್ಳುವ ಆಡಳಿತವು ಇಷ್ಟು ವರ್ಷ ಮಲಗಿತ್ತೇ ? ಈ ಮಾಹಿತಿಯು ಬಹಿರಂಗಗೊಳ್ಳದೇ ಇದ್ದಿದ್ದಲ್ಲಿ ಆಡಳಿತವು ಇನ್ನೂ ಮಲಗಿರುತ್ತಿತ್ತು! -ಸಂಪಾದಕರು)