೫, ೧೦ ಮತ್ತು ೧೦೦ ರೂ.ಗಳ ಹಳೆಯ ನೋಟುಗಳು ಚಲಾವಣೆಯಿಂದ ಹಿಂಪಡೆಯುವ ವಿಚಾರವಿಲ್ಲ ! – ರಿಸರ್ವ್ ಬ್ಯಾಂಕ್‌ನ ಸ್ಪಷ್ಟನೆ

ಕೆಲವು ದಿನಗಳಿಂದ ೫, ೧೦ ಮತ್ತು ೧೦೦ ರೂ.ಗಳ ಹಳೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲಾಗುವುದು ಎಂಬ ವಾರ್ತೆ ಪ್ರಸಾರಮಾಧ್ಯಮಗಳಲ್ಲಿ ಬಿತ್ತರಿಸಲಾಗುತ್ತಿದೆ. ಆದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ೫, ೧೦ ಮತ್ತು ೧೦೦ ಎಲ್ಲ ರೀತಿಯ ಹಳೆಯ ನೋಟುಗಳು ಮಾನ್ಯವಿದ್ದು ಅವು ಶಾಶ್ವತವಾಗಿ ಚಲಾವಣೆಯಲ್ಲಿರಲಿವೆ, ಅವುಗಳನ್ನು ಚಲಾವಣೆಯಿಂದ ತೆಗೆಯುವಂತಹ ಯಾವುದೇ ವಿಚಾರ ಸದ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ.

೮ ವರ್ಷಗಳಿಗಿಂತ ಹಳೆಯ ವಾಹನಗಳ ಮೇಲೆ ‘ಹಸಿರು ತೆರಿಗೆ’

೮ ವರ್ಷಗಳಿಗಿಂತ ಹಳೆಯದಾಗಿರುವ ವಾಹನಗಳಿಗೆ ಶೀಘ್ರದಲ್ಲಿಯೇ ಈಗ ಹಸಿರು ತೆರಿಗೆಯನ್ನು (ಗ್ರೀನ್ ಟ್ಯಾಕ್ಸ್) ಹೇರಲಾಗುವ ಸಾಧ್ಯತೆಯಿದೆ. ಕೇಂದ್ರಿಯ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು ಗ್ರೀನ್ ಟ್ಯಾಕ್ಸ್ ಹೇರುವ ಪ್ರಸ್ತಾಪಕ್ಕೆ ಒಪ್ಪಿಗೆಯನ್ನುನೀಡಿದೆ.

ಮೊದಲ ಬಾರಿಗೆ ಪಶುಪತಿನಾಥ ಮಂದಿರಕ್ಕೆ ಹೋಗಿ ಪೂಜೆ ಸಲ್ಲಿಸಿದ ನೇಪಾಳದ ಕಮ್ಯುನಿಸ್ಟ ಪ್ರಧಾನ ಮಂತ್ರಿ ಕೆ.ಪಿ. ಶರ್ಮಾ ಒಲಿ!

ನೇಪಾಳ ಕಮ್ಯುನಿಸ್ಟ ಪಕ್ಷದಿಂದ ಹೊರದಬ್ಬಲಾಗಿರುವ ನೇಪಾಳದ ಪ್ರಧಾನಮಂತ್ರಿ ಕೆ.ಪಿ. ಶರ್ಮಾ ಒಲಿ ಇವರು ಮೊದಲ ಬಾರಿಗೆ ಪಶುಪತಿನಾಥ ಮಂದಿರಕ್ಕೆ ಹೋಗಿ ದರ್ಶನ ಪಡೆದು ಪೂಜೆಯನ್ನು ಸಲ್ಲಿಸಿದರು. ಅಲ್ಲಿ ಅವರು ಒಂದೂಕಾಲು ಲಕ್ಷ ದೀಪಗಳನ್ನು ಸಹ ಹಚ್ಚಿದರು.

ದೇಶದಾದ್ಯಂತ ಎಲ್ಲೆಡೆ ೭೨ ನೆಯ ಗಣರಾಜ್ಯೋತ್ಸವದ ಆಚರಣೆ

ಕೊರೊನಾದ ಹಿನ್ನೆಲೆಯಲ್ಲಿಯೂ ದೇಶದಲ್ಲಿ ೭೨ನೆಯ ಗಣರಾಜ್ಯೋತ್ಸವವನ್ನು ಉತ್ಸಾಹದಿಂದ ಆಚರಿಸಲಾಯಿತು. ರಾಜಧಾನಿ ದೆಹಲಿಯ ರಾಜಪಥದಲ್ಲಿ ಸೈನಿಕರ ಪಥಸಂಚಲನ ಸಹಿತ ವಿವಿಧ ರಾಜ್ಯಗಳು ಮತ್ತು ವಿಭಾಗಗಳ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಸಲಾಯಿತು. ಈ ಸಂಚಲನದಲ್ಲಿ ಮೊದಲ ಬಾರಿಗೆ ಬಂಗ್ಲಾದೇಶದ ಸೈನಿಕರ ಒಂದು ತುಕಡಿಯು ಪಾಲ್ಗೊಂಡಿತ್ತು.

‘ನಾಗಪುರದ ಹಾಫ್ ಚೆಡ್ಡಿಗಳು’ ತಮಿಳುನಾಡಿನ ಭವಿಷ್ಯವನ್ನು ಯಾವತ್ತೂ ಸುಧಾರಿಸಲಾರರು! (ಅಂತೆ)

ನಾವು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಭಾರತದ ಅಡಿಪಾಯವನ್ನು ನಾಶ ಮಾಡಲು ಬಿಡುವುದಿಲ್ಲ. ತಮಿಳುನಾಡಿನ ಭವಿಷ್ಯವನ್ನು ಕೇವಲ ತಮಿಳು ಜನರೇ ನಿರ್ಧರಿಸಬಲ್ಲರು. ನಾಗಪುರದ ‘ಹಾಫ್ ಚೆಡ್ಡಿಗಳು’ ಯಾವತ್ತೂ ತಮಿಳುನಾಡಿನ ಭವಿಷ್ಯವನ್ನು ಸುಧಾರಿಸಲಾರರು ಎಂದು ಮೋದಿಯವರಿಗೆ ತಿಳಿಯುತ್ತಿಲ್ಲ ಎಂದು ಅಸಭ್ಯವಾದ ಭಾಷೆಯಲ್ಲಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರಾದ ರಾಹುಲ ಗಾಂಧಿಯವರು ಟೀಕಿಸಿದರು.

ಸಿಕ್ಕಿಂನ ಗಡಿಯಲ್ಲಿ ನುಸುಳಲು ಪ್ರಯತ್ನಿಸಿದ ಚೀನಾ ಸೈನಿಕರನ್ನು ಥಳಿಸಿದ ಭಾರತೀಯ ಸೈನಿಕರು!

ಲಡಾಖ್‌ನ ಗಲವಾನ ಕಣಿವೆಯಲ್ಲಾದ ಸಂಘರ್ಷದಂತೆ ಭಾರತ ಮತ್ತು ಚೀನಾ ಇವುಗಳ ನಡುವೆ ಸಿಕ್ಕಿಂ ನ ಗಡಿಯಲ್ಲಾದ ಜಟಾಪಟಿಯಲ್ಲಿ ಚೀನಾದ ೨೦ ಸೈನಿಕರು ಮತ್ತು ಭಾರತದ ೪ ಸೈನಿಕರು ಗಾಯಗೊಂಡಿದ್ದಾರೆ. ಈ ಘಟನೆಗೆ ಭಾರತೀಯ ಸೈನ್ಯವೂ ಪ್ರತ್ಯುತ್ತರ ನೀಡಿದೆ.

ಧರ್ಮದ ಬಗ್ಗೆ ದೆಹಲಿಯಲ್ಲಿ ಇಂದು ನಡೆದ ಟ್ರಾಕ್ಟರ್ ಮೊರ್ಚಾದಲ್ಲಿ ಗೊಂದಲವನ್ನುಂಟು ಮಾಡಲು ೩೦೮ ಪಾಕಿಸ್ತಾನಿ ಟ್ವಿಟರ್ ಖಾತೆಗಳು ಸಕ್ರಿಯ – ದೆಹಲಿ ಪೊಲೀಸರ ಹೇಳಿಕೆ

ಈ ಮೋರ್ಚಾದ ನಿಯಂತ್ರಣವನ್ನಿರಿಸಿಕೊಂಡು ಗೊಂದಲವನ್ನು ಹುಟ್ಟುಹಾಕಲು ಪಾಕಿಸ್ತಾನದ ೩೦೮ ಟ್ವಿಟರ್ ಖಾತೆಗಳು ಸಕ್ರಿಯವಾಗಿವೆ ಎಂಬ ಮಾಹಿತಿಯು ಸಿಕ್ಕಿದೆ ಎಂದು ಪೊಲೀಸರು ಹೇಳಿದ್ದಾರೆ ಗಣರಾಜ್ಯೋತ್ಸವ ದಿನದ ಪಥ ಸಂಚಲನ ಮುಗಿದ ನಂತರ ಬಿಗಿ ಭದ್ರತೆಯಲ್ಲಿ ಮೋರ್ಚಾ ನಡೆಸಲಾಗುವುದು ಎಂಬ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.

ಜಗತ್ತಿನಲ್ಲಿರುವ ೫೮ ಸಾವಿರ ೭೦೦ ದೊಡ್ಡ ಅಣೆಕಟ್ಟುಗಳಲ್ಲಿ ಹೆಚ್ಚಿನ ಅಣೆಕಟ್ಟುಗಳ ಆಯುಷ್ಯ ಮುಗಿಯುತ್ತಾ ಬಂದಿರುವುದರಿಂದ ಜಗತ್ತಿಗೆ ಅಪಾಯ ಕಾದಿದೆ! – ಸಂಯುಕ್ತ ರಾಷ್ಟ್ರಗಳು

ಜಗತ್ತಿನಲ್ಲಿರುವ ೫೮ ಸಾವಿರ ೭೦೦ ದೊಡ್ಡ ಅಣೆಕಟ್ಟುಗಳಲ್ಲಿ ಹೆಚ್ಚಿನ ಅಣೆಕಟ್ಟುಗಳನ್ನು ೧೯೩೦ ರಿಂದ ೧೯೭೦ ರ ಕಾಲಾವಧಿಯಲ್ಲಿ ಕಟ್ಟಲಾಗಿದೆ. ಕಟ್ಟುವಾಗ ಅವುಗಳ ಕಾರ್ಯಕ್ಷಮತೆಯ ಸಮಯಮಿತಿಯನ್ನು ೫೦ ರಿಂದ ೧೦೦ ವರ್ಷಗಳೆಂದು ನಿರ್ಧರಿಸಲಾಗಿತ್ತು. ಪ್ರತಿಯೊಂದು ಅಣೆಕಟ್ಟು ಕಟ್ಟಿಯಾದ ೫೦ ವರ್ಷಗಳ ನಂತರ ಅದರಿಂದಾಗುವ ಅಪಾಯದಲ್ಲಿ ಹೆಚ್ಚಳವಾಗುತ್ತದೆ.

ವರ್ಷಕ್ಕೆ ೧೫ ಲಕ್ಷ ರೂ. ಗಳಿಸುವ ಚಾರ್ಟಟೆಡ್ ಅಕೌಂಟೆಟ್ ಪಾಯಲ್ ಷಾ ಇವರು ಸಂನ್ಯಾಸ ಪಡೆದು ಜೈನ ಸಾಧ್ವಿ ಆಗಲಿದ್ದಾರೆ!

ಮುಂಬೈಯ ದೊಡ್ಡ ಸಂಸ್ಥೆಯಲ್ಲಿ ಚಾರ್ಟಟೆಡ್ ಅಕೌಂಟೆಟ್ ಆಗಿ ವಾರ್ಷಿಕ ೧೫ ಲಕ್ಷ ರೂ. ಸಂಬಳ ಪಡೆಯುವ ೩೧ ವರ್ಷದ ಜೈನ ಯುವತಿ ಪಾಯಲ್ ಷಾ ಇವರು ಸಂನ್ಯಾಸ ದೀಕ್ಷೆ ಪಡೆದು ಸಾಧ್ವಿಯಾಗಲು ನಿರ್ಧರಿಸಿದ್ದಾರೆ. ಫೆಬ್ರವರಿ ೨೪ ರಂದು ಸೂರತ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಈ ದೀಕ್ಷೆಯನ್ನು ಪಡೆಯುವ ಮೂಲಕ ಅವರು ತನ್ನ ಲೌಕಿಕ ಜೀವನವನ್ನು ತ್ಯಜಿಸಲಿದ್ದಾರೆ.

ಕಾಂಗ್ರೆಸ್‌ನ ಜನರೇ ನೇತಾಜಿ ಸುಭಾಷಚಂದ್ರ ಬೋಸ್ ಇವರ ಹತ್ಯೆಯ ಷಡ್ಯಂತ್ರವನ್ನು ರೂಪಿಸಿದರು ! – ಸಂಸದ ಸಾಕ್ಷಿ ಮಹಾರಾಜರ ಆರೋಪ

ಮಹಾತ್ಮಾ ಗಾಂಧಿಯವರಿಗೂ ಯಾವುದೇ ಬೆಲೆ ಇರಲಿಲ್ಲ, ಎಂದು ಸ್ಥಳೀಯ ಭಾಜಪದ ಸಂಸದ ಸಾಕ್ಷಿ ಮಹಾರಾಜ ಇವರು ಹೇಳಿಕೆ ನೀಡಿದ್ದಾರೆ. ನೇತಾಜಿ ಸುಭಾಷಚಂದ್ರ ಬೋಸ್ ಇವರ ೧೨೫ ನೇ ಜಯಂತಿಯ ನಿಮಿತ್ತ ಆಯೋಜಿಸಲಾದ ಒಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.