‘ನಾಗಪುರದ ಹಾಫ್ ಚೆಡ್ಡಿಗಳು’ ತಮಿಳುನಾಡಿನ ಭವಿಷ್ಯವನ್ನು ಯಾವತ್ತೂ ಸುಧಾರಿಸಲಾರರು! (ಅಂತೆ)

ರಾಹುಲ ಗಾಂಧಿಯಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಬಗ್ಗೆ ಅಸಭ್ಯ ಟೀಕೆ

ಕೇವಲ ಪಂಚೆಯನ್ನುಟ್ಟು ತಲೆಯ ಮೇಲೆ ಬಿಳಿ ಟೊಪ್ಪಿಯನ್ನಿಟ್ಟು ಕೋಟಿಗೆ ಗುಲಾಬಿಯನ್ನು ಇಟ್ಟು ದೇಶವನ್ನು ವಿಭಜಿಸುವ ಮತ್ತು ಬಹುಸಂಖ್ಯಾತ ಹಿಂದೂಗಳ ಭವಿಷ್ಯವನ್ನು ನಾಶಗೊಳಿಸುವ ಕಾಂಗ್ರೆಸ್ ನವರು ದೇಶಹಿತವನ್ನು ಎಷ್ಟು ಸಾಧಿಸಿದ್ದಾರೆ ? ಇದಕ್ಕೆ ರಾಹುಲ ಗಾಂಧಿಯವರು ಉತ್ತರಿಸಬೇಕು


ಚೆನೈ (ತಮಿಳುನಾಡು) – ನಾವು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಭಾರತದ ಅಡಿಪಾಯವನ್ನು ನಾಶ ಮಾಡಲು ಬಿಡುವುದಿಲ್ಲ. ತಮಿಳುನಾಡಿನ ಭವಿಷ್ಯವನ್ನು ಕೇವಲ ತಮಿಳು ಜನರೇ ನಿರ್ಧರಿಸಬಲ್ಲರು. ನಾಗಪುರದ ‘ಹಾಫ್ ಚೆಡ್ಡಿಗಳು’ ಯಾವತ್ತೂ ತಮಿಳುನಾಡಿನ ಭವಿಷ್ಯವನ್ನು ಸುಧಾರಿಸಲಾರರು ಎಂದು ಮೋದಿಯವರಿಗೆ ತಿಳಿಯುತ್ತಿಲ್ಲ ಎಂದು ಅಸಭ್ಯವಾದ ಭಾಷೆಯಲ್ಲಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರಾದ ರಾಹುಲ ಗಾಂಧಿಯವರು ಟೀಕಿಸಿದರು. ತಮಿಳುನಾಡಿನಲ್ಲಿ ಮೇ ತಿಂಗಳಿನಲ್ಲಿ ವಿಧಾನಸಭೆಯ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಿಂದ ರಾಹುಲ ಗಾಂಧಿಯವರ ಉಪಸ್ಥಿತಿಯಲ್ಲಿ ಕಾಂಗ್ರೆಸ್ ನ ಪ್ರಚಾರಕ್ಕೆ ಶುಭಾರಂಭ ಮಾಡಲಾಯಿತು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು.