|
ಕರ್ಣಾವತಿ (ಗುಜರಾತ್) – ಮುಂಬೈಯ ದೊಡ್ಡ ಸಂಸ್ಥೆಯಲ್ಲಿ ಚಾರ್ಟಟೆಡ್ ಅಕೌಂಟೆಟ್ ಆಗಿ ವಾರ್ಷಿಕ ೧೫ ಲಕ್ಷ ರೂ. ಸಂಬಳ ಪಡೆಯುವ ೩೧ ವರ್ಷದ ಜೈನ ಯುವತಿ ಪಾಯಲ್ ಷಾ ಇವರು ಸಂನ್ಯಾಸ ದೀಕ್ಷೆ ಪಡೆದು ಸಾಧ್ವಿಯಾಗಲು ನಿರ್ಧರಿಸಿದ್ದಾರೆ. ಫೆಬ್ರವರಿ ೨೪ ರಂದು ಸೂರತ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಈ ದೀಕ್ಷೆಯನ್ನು ಪಡೆಯುವ ಮೂಲಕ ಅವರು ತನ್ನ ಲೌಕಿಕ ಜೀವನವನ್ನು ತ್ಯಜಿಸಲಿದ್ದಾರೆ. ಪಾಯಲ್ ಷಾ ಅವರು ಅಖಿಲ ಭಾರತ ಮಟ್ಟದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಮುಂಚೂಣಿಯಲ್ಲಿ ಉತ್ತೀರ್ಣರಾಗಿದ್ದರು. ಪೂಜ್ಯ ಸಾಧ್ವಿಜೀ ಪ್ರಾಶಮಲೋಚನಾಶ್ರೀಜಿಯಿಂದ ಪ್ರೇರಿತರಾದ ಅವರು ಸಾಧ್ವಿ ಆಗಲು ನಿರ್ಧರಿಸಿದರು.
ಪಾಯಲ್ ಷಾ ಇವರು ಇದರ ಬಗ್ಗೆ ಮಾತನಾಡುತ್ತಾ, ‘ಏಳು ವರ್ಷಗಳ ಹಿಂದೆ, ನನ್ನ ಮನೆಯ ಸಮೀಪ ವಾಸಿಸುವ ಸಾಧ್ವಿಯ ಮನೆಗೆ ಹೋಗಲು ಪ್ರಾರಂಭಿಸಿದಾಗ, ನನ್ನ ಪ್ರಯಾಣವು ನಿಜವಾದ ಅರ್ಥದಲ್ಲಿ ಪ್ರಾರಂಭವಾಯಿತು. ಈ ಸನ್ಯಾಸಿಗಳು ಒಂದು ದಿನ ರಜೆ ತೆಗೆದುಕೊಳ್ಳದೆ ಅಥವಾ ಮೊಬೈಲ್ ಫೋನ್ ಬಳಸದೆ ಎಷ್ಟು ಆನಂದದಿಂದಿದ್ದಾರೆಂದು ನೋಡಿ ನಾನು ಆಶ್ಚರ್ಯಚಕಿತಳಾದೆ. ಅನಂತರ ನಾನು ಆ ಸಾಧ್ವಿಯೊಂದಿಗೆ ವಾಸಿಸಲು ಪ್ರಾರಂಭಿಸಿದೆ. ನಾನು ಕನಿಷ್ಠ ಒಂದು ವರ್ಷ ಅವರೊಂದಿಗೆ ಇರಬೇಕು, ಆಗ ನನ್ನ ಆಂತರಿಕ ಪ್ರಯಾಣ ಪ್ರಾರಂಭವಾಗುತ್ತದೆ’, ಎಂದರು.