ಹೊಸ ದೆಹಲಿ – ಕೊರೊನಾದ ಹಿನ್ನೆಲೆಯಲ್ಲಿಯೂ ದೇಶದಲ್ಲಿ ೭೨ನೆಯ ಗಣರಾಜ್ಯೋತ್ಸವವನ್ನು ಉತ್ಸಾಹದಿಂದ ಆಚರಿಸಲಾಯಿತು. ರಾಜಧಾನಿ ದೆಹಲಿಯ ರಾಜಪಥದಲ್ಲಿ ಸೈನಿಕರ ಪಥಸಂಚಲನ ಸಹಿತ ವಿವಿಧ ರಾಜ್ಯಗಳು ಮತ್ತು ವಿಭಾಗಗಳ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಸಲಾಯಿತು. ಈ ಸಂಚಲನದಲ್ಲಿ ಮೊದಲ ಬಾರಿಗೆ ಬಂಗ್ಲಾದೇಶದ ಸೈನಿಕರ ಒಂದು ತುಕಡಿಯು ಪಾಲ್ಗೊಂಡಿತ್ತು. ಇದರೊಂದಿಗೆ ಭಾರತದ ವಾಯುಪಡೆಯಲ್ಲಿ ಹೊಸದಾಗಿ ಸೇರಿಸಲಾಗಿರುವ ‘ರಾಫೆಲ್’ ಯುದ್ಧ ವಿಮಾನವನ್ನು ಸಹ ಪಥಸಂಚಲನದಲ್ಲಿ ಸೇರಿಸಲಾಗಿತ್ತು. ಕೊರೊನಾದಿಂದಾಗಿ ಕಳೆದ ೫೫ ವರ್ಷಗಳ ಇತಿಹಾಸದಲ್ಲಿ ಮೊದಲಬಾರಿಗೆ ಮುಖ್ಯ ಅತಿಥಿ ಎಂದು ಯಾವುದೇ ವಿದೇಶೀ ಗಣ್ಯರ ಉಪಸ್ಥಿತಿ ಇರಲಿಲ್ಲ. ರಾಷ್ಟ್ರಪತಿ ರಾಮನಾಥ ಕೋವಿಂದರವರನ್ನು ಸೈನಿಕರು ಅಭಿವಂದಿಸಿದರು. ಈ ಸಮಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಮಂತ್ರಿಮಂಡಲದ ಇತರ ಮಂತ್ರಿಗಳು ಹಾಗೂ ಗಣ್ಯರು, ಬಹುಸಂಖ್ಯೆಯಲ್ಲಿ ನಾಗರಿಕರೂ ಉಪಸ್ಥಿತರಿದ್ದರು.
(ಸೌಜನ್ಯ : DD national)