ಚೀನಾದ ಅಪಪ್ರಚಾರವನ್ನು ಖಂಡಿಸಲು ಭಾರತೀಯ ಸೈನ್ಯಾಧಿಕಾರಿಗಳು ಟಿಬೆಟಿಯನ್ ಸಂಸ್ಕೃತಿಯನ್ನು ಅಭ್ಯಾಸ ಮಾಡಲಿದ್ದಾರೆ

ಚೀನಾದಿಂದಾಗುತ್ತಿರುವ ಅಪಪ್ರಚಾರವನ್ನು ತಡೆಗಟ್ಟಲು ಭಾರತೀಯ ಸೈನ್ಯವು ಟಿಬೇಟ್‌ನ ಇತಿಹಾಸ, ಅಲ್ಲಿನ ಸಂಸ್ಕೃತಿ ಮತ್ತು ಭಾಷೆಯನ್ನು ಅರಿತುಕೊಳ್ಳುವ ರಣನೀತಿಯನ್ನು ರೂಪಿಸಿದೆ. ಪ್ರತ್ಯಕ್ಷ ನಿಯಂತ್ರಣ ರೇಖೆಯ ಎರಡೂ ಬದಿಯಲ್ಲಿರುವ ಟಿಬೇಟ್ ಅನ್ನು ಆಳವಾಗಿ ಅಧ್ಯಯನ ಮಾಡುವಂತೆ ಸೈನಾಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗುವುದು.

ತಾಂಡವ ವೆಬ್ ಸಿರೀಸ್‌ನ ನಿರ್ಮಾಪಕ, ನಿರ್ದೇಶಕ, ಲೇಖಕ, ನಟರ ಬಂಧನಕ್ಕೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದಿಂದ ನಿರಾಕರಣೆ

ವೆಬ್ ಸಿರೀಸ್ ತಾಂಡವದ ನಿರ್ಮಾಪಕ, ಹಿಮಾಂಶು ಮೆಹರಾ, ನಿರ್ದೇಶಕ ಅಬ್ಬಾಸ್ ಜಾಫರ್, ಲೇಖಕ ಗೌರವ ಸೊಳಂಕಿ ಮತ್ತು ನಟ ಮೊಹಮದ್ ಝಿಶಾನ್ ಅಯ್ಯುಬ ಇವರ ಬಂಧನದ ಆದೇಶಕ್ಕೆ ತಡೆ ನೀಡಲು ‘ಅಮೆಝಾನ್ ಇಂಡಿಯಾ’ವು ಮಾಡಿದ ಆಗ್ರಹವನ್ನು ಸರ್ವೋಚ್ಚ ನ್ಯಾಯಾಲಯವು ತಳ್ಳಿಹಾಕಿದೆ.

ಪಾಕಿಸ್ತಾನದ ಗುಪ್ತಚರ ಸಂಘಟನೆ ಐ.ಎಸ್.ಐ. ಮಾಜಿ ಮುಖ್ಯಸ್ಥ ಭಾರತದ ಗುಪ್ತಚರ (ನಂತೆ) ! – ಪಾಕಿಸ್ತಾನದ ಆರೋಪ

ಪಾಕಿಸ್ತಾನದ ಗುಪ್ತಚರ ಸಂಘಟನೆ ಐ.ಎಸ್.ಐ.ನ ಮಾಜಿ ಮುಖ್ಯಸ್ಥ (ಇಂಟರ್ ಸರ್ವಿಸ್ ಇಂಟೆಲಿಜೆನ್ಸ್ ನ) ಜನರಲ್ ಅಸದ ದುರ್ರ‍ಾನಿ ಇವರು ಭಾರತೀಯ ಗುಪ್ತಚರ ಸಂಘಟನೆ ‘ರಾ’ದ (ರಿಸರ್ಚ್ ಆಂಡ್ ಎನಾಲಿಸಿಸ್ ವಿಂಗ್’ನ) ಗುಪ್ತಚರರಾಗಿದ್ದರು ಎಂದು ಪಾಕಿಸ್ತಾನ ಸರಕಾರವು ಹೇಳಿದೆ.

ನೇತಾಜಿ ಬೋಸ್ ಇವರ ಕಾರ್ಯಕ್ರಮದಲ್ಲಿ ‘ಜಯ ಶ್ರೀರಾಮ’ನ ಘೋಷಣೆ ಕೂಗುವುದು ಅಯೋಗ್ಯವಾಗಿದೆ ! – ರಾ.ಸ್ವ. ಸಂಘ

೨೩ ಜನವರಿಯಂದು ಕೋಲಕತಾದಲ್ಲಿ ಪ್ರಧಾನಮಂತ್ರಿ ಮೋದಿಯವರ ಉಪಸ್ಥಿತಿಯಲ್ಲಿ ನಡೆದ ನೇತಾಜಿ ಸುಭಾಶ್ಚಂದ್ರ ಬೋಸ ಇವರ ೧೨೫ ನೆಯ ಜಯಂತಿಯ ಕಾರ್ಯಕ್ರಮವನ್ನು ಒಬ್ಬ ಮಹಾನ್ ಸ್ವಾತಂತ್ರ್ಯ ಸೈನಿಕನ ಸ್ಮೃತಿಗಳ ಮೇಲೆ ಬೆಳಕು ಚೆಲ್ಲುವ ದೃಷ್ಟಿಯಿಂದ ಆಯೋಜಿಸಲಾಗಿತ್ತು.

‘ಹಮ್ ದೋ ಹಮಾರೆ ಪಾಚ್’ ಎಂಬ ಸಂಕಲ್ಪತೊಟ್ಟು ಮಕ್ಕಳಿಗೆ ಶಸ್ತ್ರಾಸ್ತ್ರಗಳನ್ನು ಖರೀದಿಸಿ ಅದನ್ನು ಉಪಯೋಗಿಸಲು ಕಲಿಸಿ – ಬಿಜೆಪಿ ನಾಯಕನ ಮನವಿ

ಕುಟುಂಬ ಯೋಜನೆ ನಿಯಮಗಳನ್ನು ರೂಪಿಸದಿರುವ ತನಕ, ನಾವು ’ಹಮ್ ದೋ ಹುಮಾರೆ ಪಾಚ್’ ಸಂಕಲ್ಪವನ್ನು ಮಾಡಬೇಕು. ‘ಕುಟುಂಬ ಯೋಜನೆಯ ದೃಢ ನಿಯಮಗಳು ರೂಪಿಸುವ ತನಕ ’ಹಮ್ ದೋ ಹಮಾರೆ ದೊ’ ತತ್ವವನ್ನು ರದ್ದುಗೊಳಿಸಬೇಕು’, ಎಂದು ಇಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಬಿಜೆಪಿಯ ವಾಣಿಜ್ಯ ವಿಭಾಗದ ಉತ್ತರ ಪ್ರದೇಶದ ಸಂಯೋಜಕರಾದ ವಿನೀತ್ ಅಗರ್ವಾಲ್ ಶಾರದಾ ಹೇಳಿದರು.

ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಯಲ್ಲಿ ೪ ಸೈನಿಕರಿಗೆ ಗಾಯ

ಕುಲಗಾಮ್ ಜಿಲ್ಲೆಯ ಶಮ್ಸಿಪೋರಾದಲ್ಲಿ ಭಾರತೀಯ ಸೈನಿಕರ ‘ರೋಡ್ ಓಪನಿಂಗ್ ಪಾರ್ಟಿ’ (ಅತಿಗಣ್ಯ ವ್ಯಕ್ತಿಗಳು ಸೂಕ್ಷ್ಮ ಪ್ರದೇಶದಿಂದ ಪ್ರಯಾಣ ಮಾಡುತ್ತಿರುವಾಗ ಅವರ ಭದ್ರತೆಗಾಗಿ ನೇಮಿಸಿದ ಸೈನಿಕರ ದಂಡು) ಮೇಲೆ ಉಗ್ರರು ಗ್ರೆನೇಡ್ ದಾಳಿ ಮಾಡಿದರು. ಈ ದಾಳಿಯಲ್ಲಿ ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ.

ರಾಜಸ್ಥಾನದಲ್ಲಿ ಶ್ರೀ ಮಹಾದೇವ ಮಂದಿರದ ೭೫ ವರ್ಷದ ಸೇವಕನ ಬರ್ಬರ ಹತ್ಯೆ

ಮೆಹ್ರಾ ಸಮುದಾಯದ ರಾಕೇಶ್ವರ ಮಹಾದೇವ ದೇವಾಲಯದ ೭೫ ವರ್ಷದ ವೃದ್ಧ ಸೇವಕ ಗಿರಿರಾಜ್ ಮೆಹ್ರಾ ಅವರನ್ನು ಇಲ್ಲಿ ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಬಾಯಿಗೆ ಬಟ್ಟೆ ಸುತ್ತಿ, ಕೈ- ಕಾಲು ಕಟ್ಟಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ದೆಹಲಿ ಹಿಂಸಾಚಾರ ಪ್ರಕರಣದಲ್ಲಿ ೨೬ ಜನರ ವಿರುದ್ಧ ಅಪರಾಧ ದಾಖಲು

ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ರೈತ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅವರಲ್ಲಿ ರಾಕೇಶ ಟಿಕೈಟ್, ಸರ್ವಾನ್‌ಸಿಂಗ್ ಪಂಡೇರ್, ಸತನಾಮಸಿಂಗ್ ಪನ್ನು ಸಹಿತ ಯೋಗೇಂದ್ರ ಯಾದವ್, ಪಂಜಾಬಿ ನಟ ಮತ್ತು ಗಾಯಕ ದೀಪ ಸಿದ್ಧೂ ಮತ್ತು ಲಖ್ಬೀರ್ ಸಿಂಗ್ ಅಲಿಯಾಸ್ ಲಖಾ ಸಿದ್ಧನಾ ಸೇರಿದ್ದಾರೆ.

ಮುಸಲ್ಮಾನ ಆಡಳಿತಗಾರರ ಕಾಲದ ಭೋಪಾಲ್‌ದಲ್ಲಿರುವ ಎಲ್ಲ ಅಪವಿತ್ರ ಹೆಸರುಗಳನ್ನು ನಾವು ಬದಲಾಯಿಸುತ್ತೇವೆ! – ಭೋಪಾಲ್ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್

ಈ ಹೆಸರುಗಳು ಮತ್ತು ಅವುಗಳ ಹಿಂದಿನ ಇತಿಹಾಸವು ಬಹಳ ಅಪವಿತ್ರವಾಗಿದೆ. ಅಂತಹ ಹೆಸರನ್ನು ಉಚ್ಚರಿಸುವುದು ಅಪವಿತ್ರತೆಯನ್ನು ಹರಡುತ್ತದೆ ಮತ್ತು ನಕಾರಾತ್ಮಕ ಪ್ರಚಾರವನ್ನು ಉತ್ತೇಜಿಸುತ್ತದೆ. ಅಂತಹ ಮುಸ್ಲಿಂ ಆಡಳಿತಗಾರರ ಕಾಲದಲ್ಲಿ ರಕ್ತಸಿಕ್ತ ಇತಿಹಾಸ ಹೊಂದಿರುವ ಭೋಪಾಲ್‌ನ ಎಲ್ಲ ಸ್ಥಳಗಳ ಹೆಸರನ್ನು ನಾವು ಅಳಿಸಲಿದ್ದೇವೆ ಎಂದು ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಇವರು ಇಲ್ಲಿ ಒಂದು ಸಮಾರಂಭದಲ್ಲಿ ಮಾತನಾಡುತ್ತಾ ಹೇಳಿದರು.

೫, ೧೦ ಮತ್ತು ೧೦೦ ರೂ.ಗಳ ಹಳೆಯ ನೋಟುಗಳು ಚಲಾವಣೆಯಿಂದ ಹಿಂಪಡೆಯುವ ವಿಚಾರವಿಲ್ಲ ! – ರಿಸರ್ವ್ ಬ್ಯಾಂಕ್‌ನ ಸ್ಪಷ್ಟನೆ

ಕೆಲವು ದಿನಗಳಿಂದ ೫, ೧೦ ಮತ್ತು ೧೦೦ ರೂ.ಗಳ ಹಳೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲಾಗುವುದು ಎಂಬ ವಾರ್ತೆ ಪ್ರಸಾರಮಾಧ್ಯಮಗಳಲ್ಲಿ ಬಿತ್ತರಿಸಲಾಗುತ್ತಿದೆ. ಆದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ೫, ೧೦ ಮತ್ತು ೧೦೦ ಎಲ್ಲ ರೀತಿಯ ಹಳೆಯ ನೋಟುಗಳು ಮಾನ್ಯವಿದ್ದು ಅವು ಶಾಶ್ವತವಾಗಿ ಚಲಾವಣೆಯಲ್ಲಿರಲಿವೆ, ಅವುಗಳನ್ನು ಚಲಾವಣೆಯಿಂದ ತೆಗೆಯುವಂತಹ ಯಾವುದೇ ವಿಚಾರ ಸದ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ.