ಮೊದಲ ಬಾರಿಗೆ ಪಶುಪತಿನಾಥ ಮಂದಿರಕ್ಕೆ ಹೋಗಿ ಪೂಜೆ ಸಲ್ಲಿಸಿದ ನೇಪಾಳದ ಕಮ್ಯುನಿಸ್ಟ ಪ್ರಧಾನ ಮಂತ್ರಿ ಕೆ.ಪಿ. ಶರ್ಮಾ ಒಲಿ!

  • ನೇಪಾಳದ ಅಧಿಕಾರವು ಕೈಜಾರಿ ಹೋಗುತ್ತಿರುವುದರಿಂದ ಈಗ ಕಮ್ಯುನಿಸ್ಟರಿಗೆ ದೇವರ ನೆನಪಾಗುತ್ತಿದೆ ಎಂಬುದನ್ನು ಗಮನದಲ್ಲಿಡಿ !
  • ನೇಪಾಳಿ ಹಿಂದೂಗಳು ಒಲಿ ಇವರ ಈ ನಾಟಕಕ್ಕೆ ಬಲಿಯಾಗದೇ ಪುನಃ ಅರಸೊತ್ತಿಗೆ ಮತ್ತು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪ್ರಯತ್ನರತರಾಗಬೇಕು

ಕಠ್ಮಂಡು (ನೇಪಾಳ) – ನೇಪಾಳ ಕಮ್ಯುನಿಸ್ಟ ಪಕ್ಷದಿಂದ ಹೊರದಬ್ಬಲಾಗಿರುವ ನೇಪಾಳದ ಪ್ರಧಾನ ಮಂತ್ರಿ ಕೆ.ಪಿ. ಶರ್ಮಾ ಒಲಿ ಇವರು ಮೊದಲ ಬಾರಿಗೆ ಪಶುಪತಿನಾಥ ಮಂದಿರಕ್ಕೆ ಹೋಗಿ ದರ್ಶನ ಪಡೆದು ಪೂಜೆಯನ್ನು ಸಲ್ಲಿಸಿದರು. ಅಲ್ಲಿ ಅವರು ಒಂದೂಕಾಲು ಲಕ್ಷ ದೀಪಗಳನ್ನು ಸಹ ಹಚ್ಚಿದರು. ಸುಮಾರು ಒಂದೂ ಕಾಲು ಗಂಟೆಗಳ ಕಾಲ ಅವರು ಮಂದಿರದಲ್ಲಿದ್ದರು. ಅನಂತರ ಅವರು ಪಶುಪತಿನಾಥ ಮಂದಿರವು ‘ಸನಾತನ ಧರ್ಮೀಯರ ಪವಿತ್ರ ಸ್ಥಾನ’ ಎಂಬ ರೂಪದಲ್ಲಿ ಇದನ್ನು ವಿಕಸಿತಗೊಳಿಸುವಂತೆ ಆದೇಶ ನೀಡಿದರು. ಒಲಿ ಇವರು ಈ ಮಂದಿರಕ್ಕೆ ಹೋಗಿ ಪೂಜೆ ಸಲ್ಲಿಸಿದ ನೇಪಾಳದ ಮೊದಲ ಕಮ್ಯುನಿಸ್ಟ್ ಪ್ರಧಾನಮಂತ್ರಿಯಾಗಿದ್ದಾರೆ. ಮಾಜಿ ಪ್ರಧಾನಮಂತ್ರಿಗಳಾಗಿದ್ದ ಮತ್ತು ಕಮ್ಯುನಿಸ್ಟ್ ನೇತಾರರಾದ ಪುಷ್ಪ ಕಮಲ ದಹಲ ಪ್ರಚಂಡ, ಮಾಧವ ಕುಮಾರ ನೇಪಾಳ, ಬಾಬೂರಾಮ ಭಟ್ಟಾರಾಯ್ ಮತ್ತು ಝಾಲಾ ನಾಥ ಖನಲ ಇವರು ಎಂದಿಗೂ ಪಶುಪತಿನಾಥ ಮಂದಿರಕ್ಕೆ ಹೋಗಿರಲಿಲ್ಲ. ಹಾಗೂ ಅವರು ಈಶ್ವರನ ಹೆಸರಿನಲ್ಲಿ ಪ್ರಮಾಣವಚನ ಕೂಡ ಮಾಡಿರಲಿಲ್ಲ.

ಈ ವಿಷಯದಲ್ಲಿ ರಾಜಕೀಯ ತಜ್ಞ ಶ್ಯಾಮ ಶ್ರೇಷ್ಠ ಇವರು, ‘ಒಲಿಯವರು ಜಾತ್ಯತೀತತೆಯನ್ನು ಬಿಡುವ ವಿಚಾರದಲ್ಲಿದ್ದಾರೆ. ಅವರು ಅರಸೊತ್ತಿಗೆಯ ಸಮರ್ಥಕರ ಮತ್ತು ಹಿಂದೂ ರಾಷ್ಟ್ರದ ಸಮರ್ಥಕರ ಮತ ಗಳಿಸಲು ಪ್ರಯತ್ನಿಸುತ್ತಿದ್ದಾರೆಂದು ಅನಿಸುತ್ತದೆ’ ಎಂದು ಹೇಳಿದ್ದಾರೆ.