ಸಿಕ್ಕಿಂನ ಗಡಿಯಲ್ಲಿ ನುಸುಳಲು ಪ್ರಯತ್ನಿಸಿದ ಚೀನಾ ಸೈನಿಕರನ್ನು ಥಳಿಸಿದ ಭಾರತೀಯ ಸೈನಿಕರು!

ಹೊಡೆದಾಟದಲ್ಲಿ ಚೀನಾದ ೨೦ ಹಾಗೂ ಭಾರತದ ೪ ಸೈನಿಕರಿಗೆ ಗಾಯ!

ಹೆಚ್ಚುತ್ತಿರುವ ಚೀನಾದ ಉಪಟಳಗಳನ್ನು ನೋಡಿದಾಗ ಚೀನಾದ ವಿರುದ್ಧ ಭಾರತವು ನೇರವಾಗಿ ಸೇನಾ ಕಾರ್ಯಾಚರಣೆ ಮಾಡಿ ಆಕ್ಸಾಯಿ ಚೀನಾ ಮತ್ತು ಲಡಾಖ್‌ಗಳನ್ನು ಪುನಃ ಸ್ವತಂತ್ರಗೊಳಿಸಬೇಕು. ಭಾರತೀಯ ಸೈನ್ಯದ ಮನೋಬಲವು ಹೆಚ್ಚಾಗಿರುವುದರಿಂದ ಚೀನಾಕ್ಕೆ ಅದು ಭಾರಿಯಾಗಲಿದೆ ಎಂಬುದರಲ್ಲಿ ಭಾರತೀಯರಿಗೆ ಸಂದೇಹವಿಲ್ಲ!

ಗಂಗಟೊಕ್ (ಸಿಕ್ಕಿಂ) -ಲಡಾಖ್‌ನ ಗಲವಾನ ಕಣಿವೆಯಲ್ಲಾದ ಸಂಘರ್ಷದಂತೆ ಭಾರತ ಮತ್ತು ಚೀನಾ ಇವುಗಳ ನಡುವೆ ಸಿಕ್ಕಿಂ ನ ಗಡಿಯಲ್ಲಾದ ಜಟಾಪಟಿಯಲ್ಲಿ ಚೀನಾದ ೨೦ ಸೈನಿಕರು ಮತ್ತು ಭಾರತದ ೪ ಸೈನಿಕರು ಗಾಯಗೊಂಡಿದ್ದಾರೆ. ಈ ಘಟನೆಗೆ ಭಾರತೀಯ ಸೈನ್ಯವೂ ಪ್ರತ್ಯುತ್ತರ ನೀಡಿದೆ. ನಿತ್ಯದಂತೆ ಚೀನಾದ ಸೈನ್ಯವು ಭಾರತೀಯ ಗಡಿಯಲ್ಲಿ ನುಸುಳಲು ಪ್ರಯತ್ನಿಸಿದಾಗ ಭಾರತೀಯ ಸೈನಿಕರು ಅದನ್ನು ವಿರೋಧಿಸಿದರು. ಹಾಗಾಗಿ ಎರಡೂ ಕಡೆಯ ಸೈನಿಕರ ನಡುವೆ ಜಟಾಪಟಿಯಾಯಿತು. ಭಾರತೀಯ ಸೈನಿಕರು ಚೀನಾದ ಈ ಸಂಚನ್ನು ಧೂಳಿಪಟ ಮಾಡಿದರು. ಉತ್ತರ ಸಿಕ್ಕಿಂನ ನಾಕು ಲಾ ದಲ್ಲಿ ಕಳೆದ ವಾರದಲ್ಲಿ ಈ ಘಟನೆಯಾಗಿದೆ. ಸದ್ಯ ಈ ಪ್ರದೇಶದಲ್ಲಿ ಉದ್ವಿಗ್ನ ಸ್ಥಿತಿಯಿದ್ದು ಭಾರತೀಯ ಸೈನ್ಯವು ನೀಡಿದ ಮಾಹಿತಿಗನುಸಾರ ಚರ್ಚೆ ನಡೆಸಿ ಈ ವಾದವನ್ನು ನಿವಾರಿಸಿದೆ ಎಂದು ಹೇಳಲಾಗಿದೆ. (ಚೀನಾವು ಯಾವತ್ತಾದರೂ ಗಡಿವಿವಾದವನ್ನು ಚರ್ಚೆಯ ಮೂಲಕ ಪರಿಹರಿಸುವುದೇ ? ಅದರ ಮೇಲೆ ವಿಶ್ವಾಸವನ್ನಾದರೂ ಇಡಲು ಆಗುತ್ತದೆಯೇ? – ಸಂಪಾದಕರು) ವಿಶೇಷ ಏನೆಂದರೆ ೨೦೨೦ರಲ್ಲಿ ಮೇ ೯ ರಂದು ಇದೇ ಸ್ಥಳದಲ್ಲಿ ಎರಡೂ ದೇಶಗಳ ಸೈನಿಕರ ನಡುವೆ ಜಟಾಪಟಿಯಾಗಿತ್ತು.

(ಸೌಜನ್ಯ : India Today)