ಹೊಸ ದೆಹಲಿ – ಕೆಲವು ದಿನಗಳಿಂದ ೫, ೧೦ ಮತ್ತು ೧೦೦ ರೂ.ಗಳ ಹಳೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲಾಗುವುದು ಎಂಬ ವಾರ್ತೆ ಪ್ರಸಾರಮಾಧ್ಯಮಗಳಲ್ಲಿ ಬಿತ್ತರಿಸಲಾಗುತ್ತಿದೆ. ಆದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ೫, ೧೦ ಮತ್ತು ೧೦೦ ಎಲ್ಲ ರೀತಿಯ ಹಳೆಯ ನೋಟುಗಳು ಮಾನ್ಯವಿದ್ದು ಅವು ಶಾಶ್ವತವಾಗಿ ಚಲಾವಣೆಯಲ್ಲಿರಲಿವೆ, ಅವುಗಳನ್ನು ಚಲಾವಣೆಯಿಂದ ತೆಗೆಯುವಂತಹ ಯಾವುದೇ ವಿಚಾರ ಸದ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ.