ಧರ್ಮದ ಬಗ್ಗೆ ದೆಹಲಿಯಲ್ಲಿ ಇಂದು ನಡೆದ ಟ್ರಾಕ್ಟರ್ ಮೊರ್ಚಾದಲ್ಲಿ ಗೊಂದಲವನ್ನುಂಟು ಮಾಡಲು ೩೦೮ ಪಾಕಿಸ್ತಾನಿ ಟ್ವಿಟರ್ ಖಾತೆಗಳು ಸಕ್ರಿಯ – ದೆಹಲಿ ಪೊಲೀಸರ ಹೇಳಿಕೆ

ನವ ದೆಹಲಿ – ನಾಳೆ ೨೬ ಜನವರಿ ಅಂದರೆ ಗಣರಾಜ್ಯೋತ್ಸವ ದಿನದಂದು ದೆಹಲಿಯ ಗಡಿಯಲ್ಲಿ ಆಂದೋಲನ ಮಾಡುತ್ತಿರುವ ರೈತರು ಟ್ರಾಕ್ಟರ್ ಮೋರ್ಚಾ ನಡೆಸಲಿದ್ದಾರೆ. ಈ ಮೋರ್ಚಾದ ನಿಯಂತ್ರಣವನ್ನಿರಿಸಿಕೊಂಡು ಗೊಂದಲವನ್ನು ಹುಟ್ಟುಹಾಕಲು ಪಾಕಿಸ್ತಾನದ ೩೦೮ ಟ್ವಿಟರ್ ಖಾತೆಗಳು ಸಕ್ರಿಯವಾಗಿವೆ ಎಂಬ ಮಾಹಿತಿಯು ಸಿಕ್ಕಿದೆ ಎಂದು ಪೊಲೀಸರು ಹೇಳಿದ್ದಾರೆ ಗಣರಾಜ್ಯೋತ್ಸವ ದಿನದ ಪಥ ಸಂಚಲನ ಮುಗಿದ ನಂತರ ಬಿಗಿ ಭದ್ರತೆಯಲ್ಲಿ ಮೋರ್ಚಾ ನಡೆಸಲಾಗುವುದು ಎಂಬ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.

ದೆಹಲಿಯ ವಿಶೇಷ ಪೊಲೀಸ್ ಆಯುಕ್ತ (ಗುಪ್ತಚರ ವಿಭಾಗ) ದೀಪೇಂದ್ರ ಪಾಠಕ ಇವರು ಇದರ ಮಾಹಿತಿಯನ್ನು ನೀಡುವಾಗ ಜನತೆಯನ್ನು ದಾರಿತಪ್ಪಿಸಲು ರೈತರು ಮಾಡುತ್ತಿರುವ ಟ್ರಾಕ್ಟರ್ ಮೋರ್ಚಾದಲ್ಲಿ ಗೊಂದಲವನ್ನುಂಟು ಮಾಡಲು ೨೬ ಜನವರಿಯಂದು ಪಾಕಿಸ್ತಾನದಲ್ಲಿ ಅಂದಾಜು ೩೦೦ ಟ್ವೀಟರ್ ಖಾತೆಗಳನ್ನು ತಯಾರಿಸಲಾಗಿದೆ. ಇದರಿಂದ ರೈತರ ಆಂದೋಲನದ ವಿಷಯದಲ್ಲಿ ಸತತ ಹಾಶ್ ಟ್ಯಾಗ ಅನ್ನು ಉಪಯೋಗಿಸಲಾಗುತ್ತದೆ. ಪಾಕ್ ಪುರಸ್ಕೃತ ಉಗ್ರರು ಏನಾದರೊಂದು ದೊಡ್ಡ ಸಮಸ್ಯೆಯನ್ನು ಉಂಟು ಮಾಡುವ ಸಾಧ್ಯತೆಗಳಿವೆ. ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ ಎಂದೂ ತಿಳಿಸಿದ್ದಾರೆ.