ಹೊಸ ದೆಹಲಿ – ೮ ವರ್ಷಗಳಿಗಿಂತ ಹಳೆಯದಾಗಿರುವ ವಾಹನಗಳಿಗೆ ಶೀಘ್ರದಲ್ಲಿಯೇ ಈಗ ಹಸಿರು ತೆರಿಗೆಯನ್ನು (ಗ್ರೀನ್ ಟ್ಯಾಕ್ಸ್) ಹೇರಲಾಗುವ ಸಾಧ್ಯತೆಯಿದೆ. ಕೇಂದ್ರಿಯ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು ಗ್ರೀನ್ ಟ್ಯಾಕ್ಸ್ ಹೇರುವ ಪ್ರಸ್ತಾಪಕ್ಕೆ ಒಪ್ಪಿಗೆಯನ್ನುನೀಡಿದೆ. ಈ ಪ್ರಸ್ತಾಪವನ್ನು ಈಗ ಸಲಹೆಸೂಚನೆಗಳಿಗಾಗಿ ರಾಜ್ಯಗಳಿಗೆ ಕಳಿಸಿಕೊಡಲಾಗುವುದು. ಪರಿಸರದ ಸಂರಕ್ಷಣೆಗಾಗಿ ಮತ್ತು ವಾಯು ಮಾಲಿನ್ಯವನ್ನು ತಡೆಗಟ್ಟಲು ಈ ತೆರಿಗೆಯನ್ನು ಜಾರಿಗೆ ತರಲಾಗುತ್ತಿದೆ. ವಾಹನದ ಯೋಗ್ಯತಾ ಪ್ರಮಾಣಪತ್ರದ (ಫಿಟ್ನೆಸ್ ಸರ್ಟಿಫಿಕೇಟ್) ನವೀಕರಿಸುವಾಗ ಈ ತೆರಿಗೆಯನ್ನು ಸೇರಿಸಲಾಗುವುದು.
Here's all you need to know about ‘Green Tax’https://t.co/vQf5bN6dqz
— IndiaToday (@IndiaToday) January 26, 2021
ವಾಹನದ ಯೋಗ್ಯತಾ ಪ್ರಮಾಣಪತ್ರದ ನವೀಕರಿಸುವಾಗ ರಸ್ತೆ ತೆರಿಗೆಯ ೧೦ ರಿಂದ ೧೫% ದರದಂತೆ ಹಸಿರು ತೆರಿಗೆಯನ್ನು ವಿಧಿಸುವ ಸಾಧ್ಯತೆಯಿದೆ. ಖಾಸಗಿ ವಾಹನಗಳ ನೋಂದಣಿ ಪ್ರಮಾಣಪತ್ರದ ನವೀಕರಣ ಮಾಡುವಾಗ ೧೫ ವರ್ಷಗಳ ನಂತರ ಹಸಿರು ತೆರಿಗೆಯನ್ನು ಹೇರಲಾಗುವುದು. ಸಾರ್ವಜನಿಕ ಸಾರಿಗೆ ಸೇವೆಯಲ್ಲಿರುವ ವಾಹನಗಳಿಂದ ಅತ್ಯಂತ ಅಲ್ಪ ಹಸಿರುತೆರಿಗೆಯನ್ನು ವಸೂಲಿ ಮಾಡಲಾಗುವುದು. ಹೈಬ್ರಿಡ್, ಇಲೆಕ್ಟ್ರಿಕಲ್, ಸಿಎನ್‌ಜಿ, ಇಥೆನಾಲ್ ಮತ್ತು ಎಲ್‌ಪಿಜಿ ಇವುಗಳಿಂದ ನಡೆಸಲಾಗುವ ವಾಹನಗಳಿಗಳನ್ನು ಈ ತೆರಿಗೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಹಸಿರು ತೆರಿಗೆಯ ಮೂಲಕ ಜಮೆಯಾದ ಆದಾಯವನ್ನು ಮಾಲಿನ್ಯದ ಸಮಸ್ಯೆ ನಿವಾರಿಸಲು ಉಪಯೋಗಿಸಲಾಗುವುದು.