ಕಾಂಗ್ರೆಸ್‌ನ ಜನರೇ ನೇತಾಜಿ ಸುಭಾಷಚಂದ್ರ ಬೋಸ್ ಇವರ ಹತ್ಯೆಯ ಷಡ್ಯಂತ್ರವನ್ನು ರೂಪಿಸಿದರು ! – ಸಂಸದ ಸಾಕ್ಷಿ ಮಹಾರಾಜರ ಆರೋಪ

ಕೇಂದ್ರದಲ್ಲಿ ಸಾಕ್ಷಿ ಮಹಾರಾಜರ ಪಕ್ಷದ್ದೇ ಸರಕಾರವಿದೆ. ಅವರು ಸರಕಾರಕ್ಕೆ ಹೇಳಿ ನೇತಾಜಿ ಬೋಸ್ ಇವರ ಮೃತ್ಯುವಿನ ವಿಚಾರಣೆಯನ್ನು ಮಾಡಿ ಸತ್ಯವನ್ನು ದೇಶದೆದುರು ಬಹಿರಂಗಪಡಿಸಬೇಕು !

ಉನ್ನಾವ (ಉತ್ತರಪ್ರದೇಶ) – ನೇತಾಜಿ ಸುಭಾಷಚಂದ್ರ ಬೋಸ್ ಇವರನ್ನು ಸಮಯಕ್ಕೆ ಮುಂಚೆಯೇ ಮೃತ್ಯುವಿನ ದವಡೆಯಲ್ಲಿ ನೂಕಲಾಗಿತ್ತು. ಕಾಂಗ್ರೆಸ್‌ನ ಜನರೇ ನೇತಾಜಿ ಸುಭಾಷಚಂದ್ರ ಬೋಸ್ ಇವರ ಹತ್ಯೆಯ ಷಡ್ಯಂತ್ರವನ್ನು ರೂಪಸಿದ್ದರೆಂದು ನಾನು ಆರೋಪಿಸುತ್ತೇನೆ. ಅವರ ಜನಪ್ರಿಯತೆಯೆದುರು ಪಂಡಿತ ನೆಹರುರವರಿಗೆ ಎಲ್ಲಿಯೂ ಅವಕಾಶವಿರಲಿಲ್ಲ. ಮಹಾತ್ಮಾ ಗಾಂಧಿಯವರಿಗೂ ಯಾವುದೇ ಬೆಲೆ ಇರಲಿಲ್ಲ, ಎಂದು ಸ್ಥಳೀಯ ಭಾಜಪದ ಸಂಸದ ಸಾಕ್ಷಿ ಮಹಾರಾಜ ಇವರು ಹೇಳಿಕೆ ನೀಡಿದ್ದಾರೆ. ನೇತಾಜಿ ಸುಭಾಷಚಂದ್ರ ಬೋಸ್ ಇವರ ೧೨೫ ನೇ ಜಯಂತಿಯ ನಿಮಿತ್ತ ಆಯೋಜಿಸಲಾದ ಒಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಸಾಕ್ಷಿ ಮಹಾರಾಜರು ಮುಂದುವರೆಸುತ್ತ, ಸ್ವಾತಂತ್ರ್ಯವನ್ನು ಬೇಡಿದಾಗ ಅದನ್ನು ತಕ್ಷಣ ನೀಡುವಷ್ಟು ಆಂಗ್ಲರು ಅಷ್ಟು ಸರಳಮಾರ್ಗದವರಾಗಿರಲಿಲ್ಲ. ನೇತಾಜಿ ಸುಭಾಷಚಂದ್ರ ಬೋಸ್‌ರು, ‘ತುಮ್ ಮುಝೆ ಖೂನ್ ದೊ ಮೈ ತುಮ್ಹೆ ಆಝಾದಿ ದುಂಗಾ |’ ಎಂದು ಹೇಳಿದ್ದರು. ‘ರಕ್ತದಲ್ಲಿ ಕಪ್ಪವನ್ನು ಕಟ್ಟಿ ನಾವು ಸ್ವಾತಂತ್ರ್ಯವನ್ನು ಪಡೆದಿದ್ದೆವು’, ಎಂದು ಹೇಳಿದರು.

(ಸೌಜನ್ಯ : ANI News official)