ಕೊರೋನಾ ರೋಗಾಣುವಿನ ಸೋಂಕನ್ನು ತಡೆಗಟ್ಟಲು ಹಾಗೂ ಸಮಾಜದ ಸರ್ವತೋಮುಖ ಹಿತಕ್ಕಾಗಿ ಮದ್ಯದ ಅಂಗಡಿಗಳನ್ನು ತೆರೆಯುವ ನಿರ್ಣಯವನ್ನು ಸರಕಾರವು ಕೂಡಲೇ ಹಿಂಪಡೆಯಬೇಕು ! – ಹಿಂದೂ ಜನಜಾಗೃತಿ ಸಮಿತಿ
ಒಂದೆಡೆ ಕೊರೋನಾದ ರೋಗಾಣುವಿನ ಸೊಂಕಿನಿಂದಾಗಿ ಜನರ ಜೀವಕ್ಕೆ ಅಪಾಯವಾಗದಿರಲೆಂದು ಸರಕಾರಗಳು ಆರ್ಥಿಕ ಹಾನಿಯನ್ನು ಸಹಿಸಿಕೊಳ್ಳುತ್ತಾ ‘ಲಾಕ್‌ಡೌನ್’ನ ಧೈರ್ಯದ ಹಾಗೂ ಸ್ವಾಗತರ್ಹ ನಿರ್ಣಯವನ್ನು ತೆಗೆದುಕೊಂಡಿದೆ. ಆದರೆ ಇನ್ನೊಂದೆಡೆ ಕೇವಲ ಆದಾಯ ಹೆಚ್ಚಾಗಿಸಲು ಮದ್ಯದ ಅಂಗಡಿಯನ್ನು ತೆರೆಯುವ ನಿರ್ಣಯವನ್ನು ತೆಗೆದುಕೊಂಡಿದೆ.