ಭಾರತೀಯ ಸಂವಿಧಾನದಿಂದ ‘ಜಾತ್ಯತೀತ’ ಪದವನ್ನು ತೆಗೆದುಹಾಕಲು ಟ್ವಿಟರ್‌ನಲ್ಲಿ ’ಟ್ರೆಂಡ್’ !
ದೇಶದಲ್ಲಿ ತಥಾಕಥಿತ ಅಲ್ಪಸಂಖ್ಯಾತರ ಓಲೈಕೆ ಹಾಗೂ ಹಿಂದೂಗಳನ್ನು ದಮನಿಸಲಾಗುತ್ತಿದೆ ಇದರ ವಿರುದ್ಧ ಮೇ ೨೪ ರಂದು ರಾಷ್ಟ್ರಪ್ರೇಮಿಗಳು ಹಾಗೂ ದೇಶಪ್ರೇಮಿಗಳು ‘#SayNoToPseudoSecularism’ ಎಂಬ ಹ್ಯಾಶ್‌ಟ್ಯಾಗ್ ಅನ್ನು ಆರಂಭಿಸಿದರು. ಅಲ್ಪಾವಧಿಯಲ್ಲಿಯೇ ಅದು ರಾಷ್ಟ್ರೀಯ ‘ಟ್ರೆಂಡ್’ನಲ್ಲಿ ೫ ನೇ ಸ್ಥಾನ ಮತ್ತು ನಂತರ ೨ ನೇ ಸ್ಥಾನದಲ್ಲಿತ್ತು. ಈ ಟ್ವಿಟರ್‌ನಲ್ಲಿ ೧ ಲಕ್ಷಕ್ಕೂ ಹೆಚ್ಚು ಟ್ವೀಟ್‌ಗಳನ್ನು ಮಾಡಲಾಯಿತು.