ವಕ್ಫ್ ಬೋರ್ಡ್ ಒಡೆತನದ ಭೂಮಿಯನ್ನು ಏಕೆ ಸ್ಮಶಾನವನ್ನಾಗಿಸುವುದಿಲ್ಲ ?
ನವ ದೆಹಲಿ: ದೆಹಲಿಯಲ್ಲಿ ಕೊರೋನಾದಿಂದ ಸಾವನ್ನಪ್ಪುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯವರು ಮುಸಲ್ಮಾನರಾಗಿರುವುದರಿಂದ ದೆಹಲಿಯ ಸ್ಮಶಾನದ ಸ್ಥಳವು ಈಗ ಕಡಿಮೆ ಬೀಳುತ್ತಿದ್ದರಿಂದ ಪರ್ಯಾಯ ಸ್ಥಳಗಳನ್ನು ಉಪಯೋಗಿಸುವ ಪ್ರಯತ್ನದಲ್ಲಿದೆ. ಹೀಗಿರುವಾಗ ಇಂದ್ರಪ್ರಸ್ಥ ಪ್ರದೇಶದ ಮಿಲೇನಿಯಮ್ ಪಾರ್ಕ್‌ಅನ್ನು ಸ್ಮಶಾನವನ್ನು ಮಾಡುವ ಪ್ರಯತ್ನಕ್ಕೆ ವಿಶ್ವ ಹಿಂದೂ ಪರಿಷತ್ತು ವಿರೋಧಿಸಿದೆ. ಈ ನಿಟ್ಟಿನಲ್ಲಿ ವಿ.ಹಿಂ.ಪ. ವತಿಯಿಂದ ರಾಜ್ಯದ ರಾಜ್ಯಪಾಲರಾದ ಅನಿಲ್ ಬೈಜಲ್ ಅವರಿಗೆ ಪತ್ರ ಬರೆದು, ಇಲ್ಲಿ ಸ್ಮಶಾನ ಮಾಡಲು ವಿರೋಧಿಸಿದೆ.
‘ಈ ಪಿತುರಿಯ ಹಿಂದೆ ದೆಹಲಿ ವಕ್ಫ್ ಬೋರ್ಡ್‌ನ ಕೈವಾಡವಿದ್ದು ದೆಹಲಿ ಸರ್ಕಾರದ ಕೆಲವರ ಬೆಂಬಲವಿದೆ ಎಂದು ವಿ.ಹಿಂ.ಪ. ಆರೋಪಿಸಿದೆ. ವಿ.ಹಿಂ.ಪ, ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ, ಅಕ್ರಮವಾಗಿ ಭೂಮಿಯ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು. ಇಲ್ಲಿ ಹಾಕಿರುವ ‘ಜದಿದ ಕಬ್ರಿಸ್ತಾನ್ ಅಹಾಲೆ ಇಸ್ಲಾಮ್’ ಫಲಕವನ್ನು ಕೂಡಲೇ ತೆಗೆದುಹಾಕಬೇಕು, ಎಂದು ಹೇಳಲಾಗಿದೆ