ಭಾರತೀಯ ಸಂವಿಧಾನದಿಂದ ‘ಜಾತ್ಯತೀತ’ ಪದವನ್ನು ತೆಗೆದುಹಾಕಲು ಟ್ವಿಟರ್‌ನಲ್ಲಿ ’ಟ್ರೆಂಡ್’ !

‘#SayNoToPseudoSecularism’ ಎಂಬ ಹ್ಯಾಶ್‌ಟ್ಯಾಗ್‌ನಿಂದ ವಿರೋಧ

ರಾಷ್ಟ್ರೀಯ ‘ಟ್ರೆಂಡ್’ನಲ್ಲಿ ೨ ನೇ ಸ್ಥಾನ

ಮುಂಬೈ: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ೧೯೫೦ ರಲ್ಲಿ ಸಂವಿಧಾನವನ್ನು ರಚಿಸಲಾಯಿತು. ಅದರಲ್ಲಿ ಎಲ್ಲಿಯೂ ‘ಜಾತ್ಯತೀತ’ ಪದ ಬರೆದಿರಲಿಲ್ಲ; ಆದರೆ ೧೯೭೬ ರಲ್ಲಿ ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿಯಲ್ಲಿ ಪಾಶವಿ ಬಹುಮತದ ಆಧಾರದಲ್ಲಿ ಸಂವಿಧಾನದಲ್ಲಿ ‘ಜಾತ್ಯತೀತ’ ಪದವನ್ನು ಸೇರಿಸಿದರು. ಹೀಗೆ ಸೇರಿಸುವಾಗ ಈ ಪದದ ಅರ್ಥವಿವರಣೆಯನ್ನು ಎಲ್ಲಿಯೂ ನೀಡಲಿಲ್ಲ. ಆದ್ದರಿಂದ ಇದರ ದುರುಪಯೋಗ ಪಡಿಸಿಕೊಳ್ಳುವ ಅಭ್ಯಾಸವಾಯಿತು. ಇದರಿಂದಾಗಿಯೇ, ದೇಶದಲ್ಲಿ ತಥಾಕಥಿತ ಅಲ್ಪಸಂಖ್ಯಾತರ ಓಲೈಕೆ ಹಾಗೂ ಹಿಂದೂಗಳನ್ನು ದಮನಿಸಲಾಗುತ್ತಿದೆ ಇದರ ವಿರುದ್ಧ ಮೇ ೨೪ ರಂದು ರಾಷ್ಟ್ರಪ್ರೇಮಿಗಳು ಹಾಗೂ ದೇಶಪ್ರೇಮಿಗಳು ‘#SayNoToPseudoSecularism’ ಎಂಬ ಹ್ಯಾಶ್‌ಟ್ಯಾಗ್ ಅನ್ನು ಆರಂಭಿಸಿದರು. ಅಲ್ಪಾವಧಿಯಲ್ಲಿಯೇ ಅದು ರಾಷ್ಟ್ರೀಯ ‘ಟ್ರೆಂಡ್’ನಲ್ಲಿ ೫ ನೇ ಸ್ಥಾನ ಮತ್ತು ನಂತರ ೨ ನೇ ಸ್ಥಾನದಲ್ಲಿತ್ತು. ಈ ಟ್ವಿಟರ್‌ನಲ್ಲಿ ೧ ಲಕ್ಷಕ್ಕೂ ಹೆಚ್ಚು ಟ್ವೀಟ್‌ಗಳನ್ನು ಮಾಡಲಾಯಿತು.

೧. ಧರ್ಮಾಭಿಮಾನಿ ಹಿಂದೂಗಳು ಮಾಡಿದ ಟ್ವೀಟ್‌ನಲ್ಲಿ, ಪ್ರಾಚೀನ ಕಾಲದಿಂದಲೂ ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಕರೆಯಲಾಗುತ್ತಿತ್ತು ;ಆದರೆ ಓಲೈಕೆಯಿಂದಾಗಿ ಕಾಂಗ್ರೆಸ್ ಅದಕ್ಕೆ ಜಾತ್ಯತೀತಗೊಳಿಸಿತು.

೨. ಇತರರು ಮಾಡಿದ ಟ್ವೀಟ್‌ನಲ್ಲಿ, ‘ಹಿಂದೂಗಳು ಮಾತ್ರ ಜಾತ್ಯತೀತತೆಯ ಪಾಲನೆ ಮಾಡುತ್ತಿದ್ದಾರೆ. ಜಾತ್ಯತೀತತೆಯ ಹೆಸರಿನಲ್ಲಿ ಸರ್ಕಾರ ಹಿಂದೂ ದೇವಸ್ಥಾನಗಳನ್ನು ವಶಪಡಿಸಿಕೊಳ್ಳುತ್ತಿದೆ; ಆದರೆ ಚರ್ಚಗಳು ಮತ್ತು ಮಸೀದಿಗಳನ್ನು ಸರ್ಕಾರ ವಶಪಡಿಸಿಕೊಳ್ಳುತ್ತಿಲ್ಲ. ಇದು ಅರ್ಥವಿಲ್ಲದ ಜಾತ್ಯತೀತತೆ ಆಗಿದೆ’. ’‘ಹಿಂದೂ ಹಣ್ಣು ಮಾರಾಟಗಾರನು ‘ಹಿಂದೂ’ ಪದವನ್ನು ಬರೆದಾಗ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ; ಆದರೆ ಇತರ ಧರ್ಮದವರು ತಮ್ಮ ಧರ್ಮದ ಹೆಸರನ್ನು ಬರೆದಾಗ ಏಕೆ ಕ್ರಮ ತೆಗೆದುಕೊಳ್ಳುವುದಿಲ್ಲ?’, ಎಂಬ ಪ್ರಶ್ನೆಯನ್ನೂ ಕೇಳ್ತಲಾಯಿತು.