ಪಿ.ಎಂ. ಕೇರ್ ಫಂಡ್’ ಬಗ್ಗೆ ಟ್ವೀಟ್ ಮಾಡಿದ ಪ್ರಕರಣದಲ್ಲಿ ಸೋನಿಯಾ ಗಾಂಧಿ ವಿರುದ್ಧ ಎಫ್‌ಐಆರ್
ಕೊರೋನಾ ಸೃಷ್ಟಿಸಿದ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಸರ್ಕಾರವು ‘ಪಿ.ಎಂ. ಕೇರ್ ಫಂಡ್’ವನ್ನು ರಚಿಸಿದೆ. ಮೇ ೧೧ ರಂದು ಕಾಂಗ್ರೆಸ್ ಟ್ವಿಟ್ಟರ್ ಖಾತೆಯಿಂದ ಮಾಡಿದ ಟ್ವೀಟ್‌ನಲ್ಲಿ ಈ ನಿಧಿಯ ಬಗ್ಗೆ ಟೀಕಿಸಲಾಗಿದೆ. ಈ ಖಾತೆಯನ್ನು ಸೋನಿಯಾ ಗಾಂಧಿ ನಡೆಸುತ್ತಿರುವುದರಿಂದ, ವಕೀಲ ಪ್ರವೀಣ್ ಕೆ.ವಿ. ಇವರು ಸೋನಿಯಾ ಗಾಂಧಿ ವಿರುದ್ಧ ದೂರು ದಾಖಲಿಸಿದ ನಂತರ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.