ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರನ್ನು ಬಾಂಬ್‌ನಿಂದ ಕೊಲ್ಲುವ ಬೆದರಿಕೆ

  • ಉತ್ತರ ಪ್ರದೇಶ ಸರ್ಕಾರದ ‘ವಾಟ್ಸಾಪ್’ ಸಂಖ್ಯೆಗೆ ಬೆದರಿಕೆ ಸಂದೇಶ

  • ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರು ಹಿಂದೂ ಧರ್ಮ ಮತ್ತು ಹಿಂದೂಗಳ ಬಗ್ಗೆ ಉತ್ತಮ ಕೆಲಸ ಮಾಡುತ್ತಿರುವುದರಿಂದ ಅವರಿಗೆ ಅನೇಕ ಶತ್ರುಗಳಾಗಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ. ಆದ್ದರಿಂದ, ಉತ್ತರಪ್ರದೇಶ ಪೊಲೀಸರು ಅವರ ಭದ್ರತೆಯನ್ನು ಹೆಚ್ಚಿಸುವ ಮೂಲಕ ಜಾಗರೂಕತೆಯಿಂದ ಇರಬೇಕು !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಬಾಂಬ್‌ನಿಂದ ಕೊಲ್ಲುವ ಬೆದರಿಕೆಯುಳ್ಳ ಸಂದೇಶವೊಂದು ಉತ್ತರ ಪ್ರದೇಶ ಸರ್ಕಾರದ ‘ವಾಟ್ಸಾಪ್’ ಸಂಖ್ಯೆಗೆ ಕಳುಹಿಸಲಾಗಿದೆ. ಪೊಲೀಸರ ಹೇಳಿರುವ ಪ್ರಕಾರ ‘ಈ ಬೆದರಿಕೆಯಲ್ಲಿ, ‘ನಾನು ಯೋಗಿ ಆದಿತ್ಯನಾಥರನ್ನು ಬಾಂಬ್‌ನಿಂದ ಹತ್ಯೆ ಮಾಡುತ್ತೇನೆ.’ ಎಂದಿದೆ. ಅದೇರೀತಿ ಯೋಗಿ ಆದಿತ್ಯನಾಥರು ಕೆಲವು ಜನರ ಶತ್ರುಗಳಾಗಿದ್ದಾರೆ ಎಂದು ಹೇಳಿದ್ದಾನೆ. ಬೆದರಿಕೆ ಬಂದ ಕೂಡಲೇ, ಪೊಲೀಸ್ ಅಧಿಕಾರಿಗಳು ಬೆದಿಕೆ ಸಂದೇಶ ಬಂದ ಸಂಚಾರವಾಣಿಯನ್ನು ಪತ್ತೆ ಹಚ್ಚಲಾರಂಭಿಸಿದ್ದಾರೆ ಅದೇ ರೀತಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.