ಬುಲಂದ್‌ಶಹರ್ (ಉತ್ತರ ಪ್ರದೇಶ) ದಲ್ಲಿನ ದುಷ್ಕರ್ಮಿಗಳಿಂದ ನವಗ್ರಹ ದೇವಸ್ಥಾನದ ಮೇಲೆ ದಾಳಿ ಮಾಡಿ ಮೂರ್ತಿ ಧ್ವಂಸ

ಉತ್ತರ ಪ್ರದೇಶದಲ್ಲಿ ಇಂತಹ ಘಟನೆಗಳು ಕಾನೂನು ಸುವ್ಯವಸ್ಥೆ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂಬುದನ್ನು ತೋರಿಸುತ್ತಿದೆ !

ಬುಲಂದ್‌ಶಹರ್ (ಉತ್ತರಪ್ರದೇಶ) – ದುಷ್ಕರ್ಮಿಗಳು ಮೇ ೨೧ ರ ರಾತ್ರಿ ಸಿಕಂದರಾಬಾದನಲ್ಲಿರುವ ನವಗ್ರಹ ದೇವಸ್ಥಾನದ ಮೇಲೆ ದಾಳಿ ನಡೆಸಿ ದೇವಸ್ಥಾನದ ವಿಗ್ರಹವನ್ನು ಧ್ವಂಸ ಮಾಡಿದ್ದಾರೆ. ಅದೇರೀತಿಯ ಅರ್ಚಕರ ಕೋಣೆಯ ಬೀಗವನ್ನು ಮುರಿಯಲು ಪ್ರಯತ್ನಿಸಿದರು; ಆದರೆ ಅವರಿಗೆ ವಿಫಲರಾದರು. ಬೆಳಿಗ್ಗೆ ಅರ್ಚಕರು ದೇವಸ್ಥಾನಕ್ಕೆ ಬಂದ ನಂತರ ಈ ದಾಳಿಯ ಮಾಹಿತಿ ತಿಳಿಯಿತು. ಈ ಘಟನೆಯ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಜನರು ಒಟ್ಟಾದರು. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.