ಹಿಂದೂಬಹುಸಂಖ್ಯಾತ ಭಾರತದಲ್ಲಿ ಹಿಂದೂಗಳಿಗೆ ದೇವಸ್ಥಾನಗಳ ರಕ್ಷಣೆಗಾಗಿ ಇಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಾಗುತ್ತಿರುವುದು ನಾಚಿಕೆಗೇಡಿನ ಸಂಗತಿ !

ಕೊಚ್ಚಿ (ಕೇರಳ) – ಶಬರಿಮಲೆ ದೇವಸ್ಥಾನದಲ್ಲಿಯ ಧಾರ್ಮಿಕ ವಿಧಿಗಳ ರಕ್ಷಣೆಗಾಗಿ ಮಾಡಿದಂತಹ ಪ್ರತಿಭಟನೆಯ ಸಮಯದಲ್ಲಿ ಅಂತರರಾಷ್ಟ್ರೀಯ ಹಿಂದೂ ಪರಿಷತ್ತಿನ (ಎ.ಎಚ್.ಪಿ.ಯ) ಸ್ಥಾಪಕ ಅಧ್ಯಕ್ಷ ಡಾ. ಪ್ರವೀಣ ತೊಗಡಿಯಾ ಇವರು ‘ದೇವಸ್ಥಾನಗಳನ್ನು ದೇವಸ್ವಂ ಮಂಡಳಿಯ ನಿಯಮಗಳ ಅಪಾಯದಿಂದ ಮುಕ್ತಗೊಳಿಸಲು ಕೇಂದ್ರ ಸರಕಾರವು ಕಾನೂನನ್ನು ರೂಪಿಸಬೇಕು ಹಾಗೂ ೧೯೮೪ ರ ಶಂಕರ ನಾಯರ ಇವರ ವರದಿಯನ್ನು ಜಾರಿಗೆ ತರಬೇಕು’, ಎಂದು ಒತ್ತಾಯಿಸಿದರು. ಕೇರಳದಲ್ಲಿ ಅಂತರರಾಷ್ಟ್ರೀಯ ಹಿಂದೂ ಪರಿಷತ್ತು ಮತ್ತು ಹಿಂದೂ ಹೆಲ್ಪಲೈನ್ ಸಂಘಟನೆಯ ವತಿಯಿಂದ ‘ದೇವಸ್ಥಾನ ಮುಕ್ತಿ ಅಭಿಯಾನ’ವನ್ನು ಪ್ರಾರಂಭಿಸಲಾಗುತ್ತಿದೆ’, ಎಂದು ಅಂತರರಾಷ್ಟ್ರೀಯ ಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ಹರಿ ಪಾಳೋದೇ ಮತ್ತು ಹಿಂದೂ ಹೆಲ್ಪಲೈನ್ ಇದರ ರಾಜ್ಯ ಸಮನ್ವಯಕರಾದ ಬಿನಿಲ್ ಸೊಮಸುಂದರ ಇವರು ಒಂದು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಈ ಅಭಿಯಾನದಲ್ಲಿ, ಇವೆರಡೂ ಸಂಘಟನೆಗಳು ಈ ಮುಂದಿನ ವಿಷಯಗಳ ಬಗ್ಗೆ ಗಮನ ಹರಿಸಲಿವೆ

೧. ದೇವಸ್ವಂ ಮಂಡಳಿಯಿಂದ ಗುರುವಾಯೂರಿನಲ್ಲಿರುವ ಶ್ರೀ ಪಾರ್ಥಸಾರಥಿ ದೇವಾಲಯದಿಂದ ಬಲವಂತವಾಗಿ ನಿಯಂತ್ರಣ.

೨. ಸರಕಾರವು ಶಬರಿಮಲೆ ದೇವಾಲಯದ ಪರಂಪರೆಯನ್ನು ಉಲ್ಲಂಘಿಸಲು ಬೆಂಬಲ ನೀಡುವ ಮೂಲಕ ಅಯ್ಯಪ್ಪ ಭಕ್ತರನ್ನು ಹತ್ತಿಕ್ಕಲು ಸಶಸ್ತ್ರ ಪೊಲೀಸ್ ಪಡೆಗಳನ್ನು ನೇಮಿಸಿತು.

೩. ಹಳೆಯ ಪರಂಪರೆಗಳನ್ನು ಮುರಿದು ಹರಿಪಾದದಿಂದ ದೇವರ ಆಭರಣಗಳನ್ನು ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಲಾಕರ್‌ಗೆ ಹಸ್ತಾಂತರ ಮಾಡುವ ಪ್ರಯತ್ನ.

೪. ಮಲಬಾರ್ ದೇವಸ್ವಂ ಮಂಡಳಿಯು ಲೋಕನಾರ್ ಕಾವೂ, ವಡ್ಕರ ದೇವಸ್ಥಾನದ ಕೊಳದಲ್ಲಿ ಮೀನುಗಳ ಮಾರಾಟಕ್ಕಾಗಿ ಟೆಂಡರ್ ಕರೆದಿದೆ.

೫. ಕೊರೋನಾ ಬಿಕ್ಕಟ್ಟಿನ ಹೆಸರಿನಲ್ಲಿ ಸರ್ಕಾರವು ಗುರುವಾಯೂರ್ ದೇವಸ್ವಂದಿಂದ ೫ ಕೋಟಿ ರೂಪಾಯಿ ತೆಗೆದುಕೊಂಡಿತು

೬. ಸರಕಾರವು ಪೊಲೀಸ ಪಡೆಯ ಬಲವನ್ನು ಉಪಯೋಗಿಸಿ ತಿರುವನಂತಪುರಂ ತೀರ್ಥಪಾಡಾ ಮಂಟಪವನ್ನು ಬಲವಂತವಾಗಿ ವಶಕ್ಕೆ ತೆಗೆದುಕೊಂಡಿತು.

೭. ಕೊರೋನಾದಿಂದ ಉಂಟಾದ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು, ಈಗ ತಿರುವಾಂಕೂರು ದೇವಸ್ವಂ ಬೋರ್ಡ್ ದೇವಾಲಯಗಳಲ್ಲಿ ದೀಪಗಳು ಮತ್ತು ಪಾತ್ರೆಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ.

ದೇವಾಲಯಗಳನ್ನು ಸರ್ಕಾರದಿಂದ ಮುಕ್ತಗೊಳಿಸಲು ಕೂಡಲೇ ಕಾನೂನನ್ನು ರೂಪಿಸಿ !

ಕೇರಳ ಸರಕಾರದ ಪ್ರಾಯೋಜಿತ ದೇವಸ್ವಂ ಬೋರ್ಡ್‌ನ ಹಿಂದೂದ್ವೇಷಿ ನೀತಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ದೇವಸ್ವಂ ಬೋರ್ಡ್‌ಅನ್ನು ವಿಸರ್ಜಿಸಬೇಕು ಮತ್ತು ಕೇಂದ್ರವು ನಿಯಮಗಳನ್ನು ರೂಪಿಸಬೇಕು ಮತ್ತು ದೇವಾಲಯಗಳನ್ನು ಭಕ್ತರಿಗೆ ಹಸ್ತಾಂತರಿಸಬೇಕು. ೧೯೮೪ ರ ನ್ಯಾಯಮೂರ್ತಿ ಶಂಕರ್ ನಾಯರ್ ಆಯೋಗದ ಶಿಫಾರಸ್ಸಿನ ಅನುಸಾರ, ದೇವಸ್ಥಾನವನ್ನು ಭಕ್ತರು ಆಯ್ಕೆ ಮಾಡಿದ ಸಮಿತಿಗಳಿಗೆ ಹಸ್ತಾಂತರಿಸುವಂತಹ ಮಸೂದೆಯು ಕೇರಳ ಸರ್ಕಾರದ ಬಳಿ ಬಾಕಿ ಇದೆ; ಆದರೆ ಯಾವುದೇ ರಾಜಕೀಯ ಪಕ್ಷವು ಕ್ರಮ ಕೈಗೊಳ್ಳಲು ಬಯಸುವುದಿಲ್ಲ. ಆದ್ದರಿಂದ ಕೇರಳದ ದೇವಾಲಯಗಳನ್ನು ದೇವಸ್ವಂ ಬೋರ್ಡ್‌ನಿಂದ ಮುಕ್ತಗೊಳಿಸಲು ಸರ್ಕಾರ ಕೂಡಲೇ ಕಾನೂನು ರೂಪಿಸಬೇಕು. ದೇವಾಲಯಗಳ ಆದಾಯವನ್ನು, ಪ್ರತಿದಿನ ಬದುಕುಳಿಯಲು ಹೆಣಗಾಡುತ್ತಿರುವ ಅನೇಕ ಹಿಂದೂ ಕುಟುಂಬಗಳ ಉನ್ನತಿಗಾಗಿ ಬಳಸಬೇಕು ಎಂದು ಈ ಸಂಘಟನೆಯು ಹೇಳುತ್ತದೆ. (ದೇವಾಲಯಗಳಲ್ಲಿನ ಸಂಪತ್ತಿನ ವಿನಿಯೋಗವು ಕೇವಲ ಹಿಂದೂ ಧರ್ಮ ಮತ್ತು ಅದರ ಶಿಕ್ಷಣಕ್ಕಾಗಿ ಮಾತ್ರ ಬಳಸಬೇಕು ! – ಸಂಪಾದಕರು)