ಹಿಂದೂ ರಾಷ್ಟ್ರದ ಸ್ಥಾಪನೆ ಶೀಘ್ರವಾಗಿ ಆಗಲಿದೆ ಎಂಬ ಕುರುಹುಗಳು ಕಾಣಿಸುತ್ತಿವೆ !

‘ಭಾರತವು ನಮ್ಮ ಸಂಸ್ಕೃತಿಯ ಮೂಲಕ ತಾಯಿಯಂತೆ, ಭೌಗೋಲಿಕ ದೃಷ್ಟಿಯಲ್ಲಿ ತಂದೆಯಂತೆ ಹಾಗೂ ಗುರುರೂಪದಿಂದ ಆಧ್ಯಾತ್ಮಿಕ ಸ್ವರೂಪದಲ್ಲಿ ಪಾಲನೆ-ಪೋಷಣೆ ಮಾಡುತ್ತಿದೆ. ಸುತ್ತಮುತ್ತಲಿನ ಎಲ್ಲ ರಾಷ್ಟ್ರಗಳು ಭಾರತಕ್ಕೆ ಪ್ರತಿಕೂಲವಾಗಿರುವಾಗಲೂ ಕೇವಲ ಆಧ್ಯಾತ್ಮಿಕ ಸಾಮರ್ಥ್ಯದಿಂದಾಗಿ ಭಾರತದ ಅಸ್ತಿತ್ವವು ಇದುವರೆಗೆ ಜೋಪಾನವಾಗಿದೆ. ಇಂದು ಸಂತರು ಮತ್ತು ಸಾಧಕರು ಇವರ ಪ್ರಯತ್ನಗಳಿಂದಾಗಿ ಭಾರತದಲ್ಲಿ ಪರಿವರ್ತನೆಯಾಗುತ್ತಿದೆ. ಹಿಂದೂ ರಾಷ್ಟ್ರದ ಸ್ಥಾಪನೆ ನನ್ನ ಮೊಮ್ಮಕ್ಕಳ ಕಾಲಕ್ಕೆ ಬರುವುದು, ಎಂದು ಅನಿಸುತ್ತಿತ್ತು, ಆದರೆ ಈಗ ಅದು ಶೀಘ್ರಗತಿಯಲ್ಲಿ ಆಗಲಿದೆ ಎನ್ನುವ ಮುನ್ಸೂಚನೆಗಳು ಕಾಣತೊಡಗಿವೆ. – ಶ್ರೀ. ಚಕ್ರವರ್ತಿ ಸೂಲಿಬೆಲೆ, ಜಾಗೋ ಭಾರತ, ಬೆಂಗಳೂರು.