ಪಾಲ್ಘರ್, ಬುಲಂದಶಹರ, ಲುಧಿಯಾನಾ ಮತ್ತು ಈಗ ಮಹಾರಾಷ್ಟ್ರದ ನಾಂದೇಡ; ದೇಶದಾದ್ಯಂತ ಮುಂದುವರಿದ ಸಾಧುಗಳ ಹತ್ಯಾಸರಣಿ

ಹಿಂದುತ್ವವಾದಿಗಳ ಹತ್ಯಾಸರಣಿಯ ನಂತರ ಈಗ ಸಾಧುಗಳ ಹತ್ಯಾಸರಣಿ; ಇದು ಹಿಂದೂಗಳನ್ನು ಮುಗಿಸುವ ವ್ಯವಸ್ಥಿತ ಸಂಚು ! – ಹಿಂದೂ ಜನಜಾಗೃತಿ ಸಮಿತಿ

ಶ್ರೀ. ರಮೇಶ ಶಿಂದೆ

ಸಾಧು-ಸಂತರ ಭೂಮಿ ಎಂದು ಹೆಸರುವಾಸಿಯಾಗಿರುವ ಮಹಾರಾಷ್ಟ್ರದಲ್ಲಿ ಈಗ ಸಾಧುಗಳ ರಕ್ತದ ಕೋಡಿ ಹರಿಯುತ್ತಿದೆ. ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಇಬ್ಬರು ಸಾಧುಗಳ ಹತ್ಯೆಗಳ ಸೂತಕ ಮುಗಿಯುವ ಮೊದಲೇ ಉತ್ತರ ಪ್ರದೇಶದ ಬುಲಂದಶಹರ್‌ನಲ್ಲಿ ಸಾಧುವೊಬ್ಬರ ಹತ್ಯೆಯಾಯಿತು. ಇದಾದ ನಂತರ, ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಸಾಧುಗಳ ಮೇಲೆ ಮಾರಣಾಂತಿಕ ಹಲ್ಲೆಯಾಯಿತು. ಈಗ ಮಹಾರಾಷ್ಟ್ರ ನಾಂದೇಡ್ ಜಿಲ್ಲೆಯಲ್ಲಿ ಶ್ರೀ. ಷ. ಬ್ರ. ೧೦೮ ಸದ್ಗುರು ನಿರ್ವಾಣರುದ್ರ ಪಶುಪತಿ ಶಿವಾಚಾರ್ಯ ಮಹಾರಾಜ ಮತ್ತು ಅವರ ಒಬ್ಬ ಸೇವಕರನ್ನು ನಡುರಾತ್ರಿ ಬರ್ಬರವಾಗಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ತಮ್ಮ ನಿಸ್ವಾರ್ಥ ಸೇವೆಯಿಂದ ಸಮಾಜಕ್ಕೆ ಮಾರ್ಗದರ್ಶನ ಮಾಡುವ ತ್ಯಾಗಮೂರ್ತಿ ಸಾಧುಗಳ ಹತ್ಯೆಯಾಗುವುದು ಬಹಳ ದುಃಖಕರ ಮತ್ತು ಸಂತಾಪಜನಕವಾಗಿದ್ದು ಹಿಂದೂ ಜನಜಾಗೃತಿ ಸಮಿತಿಯು ಈ ಹತ್ಯೆಯನ್ನು ಬಲವಾಗಿ ಖಂಡಿಸುತ್ತದೆ. ಮಹಾರಾಷ್ಟ್ರದಲ್ಲಿ ಮಾತ್ರವಲ್ಲದೇ, ಇಂದು ದೇಶದ ವಿವಿಧ ರಾಜ್ಯಗಳಲ್ಲಿ ಹಿಂದೂ ಸಾಧುಗಳನ್ನು ಹೆಕ್ಕಿ ಹೆಕ್ಕಿ ಕೊಲ್ಲಲಾಗುತ್ತಿದೆ. ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗುತ್ತಿದೆ. ಈ ಹಿಂದೆ ಹಿಂದೂಪರ ಕಾರ್ಯಕರ್ತರನ್ನು ಅನೇಕ ರಾಜ್ಯಗಳಲ್ಲಿ ಹತ್ಯೆ ಮಾಡಲಾಗುತ್ತಿತ್ತು; ಹಿಂದೂ ಸಾಧುಗಳನ್ನು ವ್ಯವಸ್ಥಿತವಾಗಿ ಮುಗಿಸುವ ಸಂಚು ಅದೇ ರೀತಿಯಲ್ಲಿ ಪ್ರಾರಂಭವಾಗಿದೆ ಎಂದು ಈಗ ಕಂಡುಬರುತ್ತದೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆಹಚ್ಚಿ ಈ ಪಿತೂರಿಯನ್ನು ಬಯಲಿಗೆಳೆಯಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಒತ್ತಾಯಿಸಿದೆ.

     ಸಾಧುಗಳ ಹಂತಕರಿಗೆ ಸರ್ಕಾರ ಅಥವಾ ಕಾನೂನಿನ ಬಗ್ಗೆ ಯಾವುದೇ ರೀತಿಯಲ್ಲಿ ಭಯವಿಲ್ಲ ಎಂದು ತೋರುತ್ತದೆ. ಆಗಾಗ ಆಗುತ್ತಿರುವ ಸಾಧುಗಳ ಹತ್ಯೆಗಳು ಸಮಾಜದ ಮನಸ್ಸನ್ನು ಕೆರಳಿಸುತ್ತಿವೆ. ಈ ಹತ್ಯೆಗಳನ್ನು ತಡೆಯಲು ಸರ್ಕಾರ ಕಠಿಣ ಕಾನೂನುಗಳನ್ನು ಜಾರಿಗೊಳಿಸಬೇಕು. ಕೂಡಲೇ ತನಿಖೆ ನಡೆಸಿ ಸಂಚು ನಡೆಸಿರುವ ಎಲ್ಲರನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ.

     ಕುಗ್ರಾಮದಲ್ಲಿಯೇ ಇರಲಿ, ಯಾವುದೇ ಕಾರಣಕ್ಕಾಗಿ ಮುಸಲ್ಮಾನನ ಹತ್ಯೆಯಾದರೆ, ಕಮ್ಯುನಿಸ್ಟರು ಮತ್ತು ಮುಸಲ್ಮಾನರ ಒಕ್ಕೂಟವು ‘ಮಾಬ್ ಲಿಂಚಿಂಗ್’ ಎಂದು ಬಾಂಗ್ ಕೂಗುತ್ತದೆ. ಸಮಾಜದಲ್ಲಿ ಬುದ್ಧಿಜೀವಿ, ಪ್ರಗತಿಪರ ವರ್ಗಗಳು ಎಂದು ಕರೆಯಲ್ಪಡುವವರು ‘ಅವಾರ್ಡ್ ವಾಪಸಿ’ಯ ಮೂಲಕ ಈ ಘಟನೆಗಳ ವಿರುದ್ಧ ಕಿರುಚಾಡುತ್ತಾರೆ; ಆದರೆ ಹಿಂದೂ ಸಾಧುಗಳ ಹತ್ಯೆಗಳ ಬಗ್ಗೆ ಅವರು ಮೌನವಾಗಿರುತ್ತಾರೆ. ‘ಅವಾರ್ಡ್ ವಾಪಸಿ’ ಎಂದು ಯಾರೂ ಹೇಳುತ್ತಿಲ್ಲ, ಯಾರೂ ’ಮಾಬ್ ಲಿಂಚಿಂಗ್’ ಎಂದು ಹೇಳುತ್ತಿಲ್ಲ, ಯಾರಿಗೂ ‘ಭಾರತದಲ್ಲಿ ಉಳಿಯಲು ಭಯವಾಗುತ್ತಿದೆ’ ಎಂದು ಅನ್ನಿಸುತ್ತಿಲ್ಲ. ಈ ಚಿತ್ರಣ ದುರದೃಷ್ಟಕರವಾಗಿದೆ. ಹಿಂದೂ ಸಾಧುಗಳ ಹತ್ಯೆಯ ಬಗ್ಗೆ ಮೌನವಾಗಿರುವವರನ್ನೂ ನಾವು ಖಂಡಿಸುತ್ತಿದ್ದೇವೆ. ಅದೇ ರೀತಿ ಹಿಂದೂ ಸಾಧುಗಳನ್ನು ಹತ್ಯೆ ಮಾಡುವುದರ ವಿರುದ್ಧ ಕಾನೂನುಬದ್ಧವಾಗಿ ಧ್ವನಿ ಎತ್ತಬೇಕೆಂದು ನಾವು ಹಿಂದೂ ಸಮುದಾಯಕ್ಕೆ ಮನವಿ ಮಾಡುತ್ತಿದ್ದೇವೆ.