-
ಬಹುಸಂಖ್ಯಾತ ಹಿಂದೂಗಳಿರುವ ದೇಶದಲ್ಲಿ ಈ ರೀತಿ ಆಗ್ರಹಿಸಬೇಕಾಗುತ್ತದೆ, ಇದು ಕಳೆದ ೭೨ ವರ್ಷಗಳ ಕಾಲದ ಎಲ್ಲಾ ಸರ್ಕಾರಗಳಿಗೆ ನಾಚಿಕೆಯ ಸಂಗತಿ !
-
ಜಿಹಾದಿ ಭಯೋತ್ಪಾದಕರು ಕಾಶ್ಮೀರದಲ್ಲಿ ನಾಲ್ಕೂವರೆ ಲಕ್ಷ ಹಿಂದೂಗಳನ್ನು ಸ್ಥಳಾಂತರಿಸಿ ನೂರಾರು ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿದ್ದರೂ, ಇಲ್ಲಿಯವರೆಗೆ, ಅಂದರೆ ಕಳೆದ ೩೦ ವರ್ಷಗಳಲ್ಲಿ ಈ ಬಗ್ಗೆ ಯಾವುದೇ ಸಾಮಾನ್ಯ ತನಿಖೆಯೂ ನಡೆದಿಲ್ಲ, ಎಂಬುದನ್ನು ಗಮನದಲ್ಲಿಡಿ ! ಆದ್ದರಿಂದ ಸರ್ಕಾರವು ಈ ಸಂಪೂರ್ಣ ಪ್ರಕರಣದ ಬಗ್ಗೆ ತನಿಖೆ ನಡೆಸಿ ಅದಕ್ಕೆ ಕಾರಣರಾದವರನ್ನು ಗಲ್ಲಿಗೇರಿಸಬೇಕು, ಇದು ದೇಶಭಕ್ತರ ಅಪೇಕ್ಷೆ ಯಾಗಿದೆ !
ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಕಲಂ ೩೭೦ ಅನ್ನು ರದ್ದುಪಡಿಸಿದ ನಂತರ, ಸರಕಾರವು ಇನ್ನು ಕಾಶ್ಮೀರದಲ್ಲಿಯ ಹಿಂದೂಗಳ ಧಾರ್ಮಿಕ ಸ್ಥಳಗಳ ರಕ್ಷಣೆಗಾಗಿ ಕಾನೂನು ರೂಪಿಸಬೇಕು ಎಂದು ಕಾಶ್ಮೀರಿ ಹಿಂದೂಗಳು ಸರಕಾರಕ್ಕೆ ಒತ್ತಾಯಿಸಿದ್ದಾರೆ. ಕಾಶ್ಮೀರಿ ಹಿಂದೂಗಳ ವಿವಿಧ ಸಂಘಟನೆಗಳ ಪ್ರತಿನಿಧಿಯ ಇಬ್ಬರು ಸ್ವತಂತ್ರ ನಿಯೋಗಗಳು ಮೇ ೨೧ ರಂದು ರಾಜ್ ಭವನಕ್ಕೆ ಹೋಗಿ ಉಪರಾಜ್ಯಪಾಲರಾದ ಜಿಸಿ ಮುರ್ಮು ಅವರನ್ನು ಭೇಟಿಯಾದರು. ಆ ಸಮಯದಲ್ಲಿ ಈ ಬೇಡಿಕೆಯನ್ನು ಮಾಡಲಾಯಿತು. ಈ ಸಮಯದಲ್ಲಿ ಕಾಶ್ಮೀರಿ ಹಿಂದೂಗಳಿಗೆ ಉದ್ಯೋಗವನ್ನು ಒದಗಿಸಬೇಕು ಮತ್ತು ಕಾಶ್ಮೀರ ಕಣಿವೆಯಲ್ಲಿ ಅವರನ್ನು ಗೌರವದಿಂದ ಪುನರ್ವಸತಿ ಕಲ್ಪಿಸಲು ವಿಶೇಷ ವಲಯವನ್ನು ರಚಿಸಬೇಕೆಂಬ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದರು. ನಿಯೋಗಗಳ ಬೇಡಿಕೆಗಳ ಕುರಿತು ಪ್ರತಿಕ್ರಿಯಿಸಿದ ಉಪರಾಜ್ಯಪಾಲ ಮುರ್ಮು ಇವರು, “ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದುಳಿದಿರುವಿಕೆ ಮತ್ತು ಪ್ರತ್ಯೇಕತಾವಾದದ ಮುಖ್ಯವಾದ ಮೂಲ ಕಾರಣಗಳನ್ನು ತೆಗೆದುಹಾಕಲಾಗಿದೆ. ಕಾಶ್ಮೀರ ಕಣಿವೆಯಲ್ಲಿರುವ ಹಿಂದೂಗಳ ಎಲ್ಲಾ ಧಾರ್ಮಿಕ ಸ್ಥಳಗಳು, ತೀರ್ಥಕ್ಷೇತ್ರಗಳು ಮತ್ತು ಆಸ್ತಿಪಾಸ್ತಿಗಳನ್ನು ರಕ್ಷಿಸಲು ಹಾಗೂ ಅಭಿವೃದ್ಧಿಪಡಿಸಲು ನಾವು ಜಮ್ಮು – ಕಾಶ್ಮೀರ ಸರ್ಕಾರಕ್ಕೆ ಒಂದು ಮಸೂದೆಯನ್ನು ಕಳುಹಿಸಿದ್ದೇವೆ. ಅದನ್ನು ಪರಿಗಣಿಸಬೇಕು. ಕಾಶ್ಮೀರದ ಕಾಶ್ಮೀರಿ ಹಿಂದೂಗಳ ಪುನರ್ವಸತಿಗಾಗಿ ಕಾಶ್ಮೀರ ಕಣಿವೆಯಲ್ಲಿ ವಿಶಿಷ್ಟವಾದ ಕ್ಷೇತ್ರವನ್ನಾಗಿಸಲು ಭೂಮಿಯನ್ನು ಮೀಸಲಿಡಲಾಗಿದೆ.” ಎಂದು ಹೇಳಿದರು. ಈ ಸಂದರ್ಭದಲ್ಲಿ, ಕಾಶ್ಮೀರಿ ಹಿಂದೂಗಳ ಪರವಾಗಿ, ಕೊರೋನಾದ ಹಿನ್ನಲೆಯಲ್ಲಿ ‘ಪ್ರಧಾನಮಂತ್ರಿ ಕೇರ್ ಫಂಡ್’ಗಾಗಿ ೧ ಲಕ್ಷದ ೭೫ ಸಾವಿರದ ಚೆಕ್ ಅನ್ನು ರಾಜ್ಯಪಾಲರವರಿಗೆ ಹಸ್ತಾಂತರಿಸಲಾಯಿತು.
ಸ್ಥಳಾಂತರಗೊಂಡ ಕಾಶ್ಮೀರಿ ಹಿಂದೂಗಳಿಗೆ ’ನಿವಾಸ ನಿಯಮ’ ಪ್ರಯೋಜನಕಾರಿ !
ಜಮ್ಮು – ಕಾಶ್ಮೀರದಲ್ಲಿ ಕಲಂ ೩೭೦ ರದ್ದುಪಡಿಸಿದ ನಂತರ, ಅದೇರೀತಿ ಹೊಸ ‘ನಿವಾಸ ನಿಯಮಗಳ’ ಅನುಷ್ಠಾನಗೊಳಿಸಿದ ನಂತರ, ರಾಜ್ಯದ ಪರಿಸ್ಥಿತಿ ಸಕಾರಾತ್ಮಕವಾಗಿ ಪರಿವರ್ತನೆಯಾಗುತ್ತಿದೆ. ಇದರಿಂದ ಕಾಶ್ಮೀರಿ ಹಿಂದೂಗಳಲ್ಲಿ ಉತ್ಸಾಹವನ್ನು ನಿರ್ಮಾಣವಾಗಿದೆ. ‘ಹೊಸ ‘ನಿವಾಸ ನಿಯಮಗಳ’ ಮೂಲಕ ಜಮ್ಮು – ಕಾಶ್ಮೀರವನ್ನು ಸಂಪೂರ್ಣವಾಗಿ ಮುಖ್ಯವಾಹಿನಿಗೆ ತರಲಾಗಿದೆ. ಯಾರು ೪೦-೫೦ ವರ್ಷಗಳ ಹಿಂದೆ ಜಮ್ಮು – ಕಾಶ್ಮೀರವನ್ನು ತೊರೆದು ಹೋಗಿದ್ದರೋ ಹಾಗೂ ಹಾಗೆಯೇ ನೋಂದಾಯಿಸದ ಸ್ಥಳಾಂತರಗೊಂಡ ಕಾಶ್ಮೀರಿ ಹಿಂದೂಗಳು ಸಹ ಈ ಹೊಸ ‘ನಿವಾಸ ನಿಯಮ’ದಿಂದ ಲಾಭವಾಗಲಿದೆ. ಈ ನಿಯಮದಿಂದಾಗಿ, ರಾಜ್ಯದಲ್ಲಿ ಕಳೆದ ೭೦ ವರ್ಷಗಳಲ್ಲಿ ಒಂದು ನಿರ್ದಿಷ್ಟ ವರ್ಗದ ರಾಜಕೀಯವು ಈಗ ಕೊನೆಗೊಂಡಿದೆ. ಇದು ರಾಷ್ಟ್ರೀಯವಾದಿ ಜನರ ಗೆಲುವು, ಹಾಗೂ ಪ್ರತ್ಯೇಕತಾವಾದಿಗಳ ಮತ್ತು ಅವರ ಬೆಂಬಲಿಗರಿಗೆ ಸೋಲಾಗಿದೆ, ಎಂದು ಕಾಶ್ಮೀರಿ ಹಿಂದೂಗಳು ಹೇಳುತ್ತಿದ್ದಾರೆ.