ಭೂ ಮಾಫಿಯಾದವರಿಂದ ಕರೌಲಿ (ರಾಜಸ್ಥಾನ)ಯಲ್ಲಿ ದೇವಸ್ಥಾನದ ಅರ್ಚಕನನ್ನು ಜೀವಂತವಾಗಿ ಸುಟ್ಟರು

ಇಲ್ಲಿಯ ಸಪೋಟರಾ ತಾಲ್ಲೂಕಿನ ರಾಧಾ ಗೋವಿಂದ ದೇವಸ್ಥಾನದ ೫೦ ವರ್ಷದ ಅರ್ಚಕ ಬಾಬುಲಾಲ ವೈಷ್ಣವ ಇವರನ್ನು ಅಕ್ಟೋಬರ್ ೮ ರಂದು ಭೂ ಮಾಫಿಯಾ ಹಾಗೂ ಅದರ ೫ ಸಹಚರರು ಸೇರಿ ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟಿರುವ ಘಟನೆಯಾಗಿದೆ. ಆಸ್ಪತ್ರೆಗೆ ದಾಖಲಿಸಿದ ನಂತರ ಅಕ್ಟೋಬರ್ ೯ ರಂದು ಅವರು ಮೃತಪಟ್ಟರು.

ದೀಪಾವಳಿಯ ಸಮಯದಲ್ಲಿ ಪಟಾಕಿ ಸಿಡಿಸುವುದರಿಂದಾಗುವ ಮಾಲಿನ್ಯದಿಂದ ಕೊರೋನಾ ಪೀಡಿತರಿಗೆ ಅಪಾಯವಿದೆ ! – ತಜ್ಞರ ಎಚ್ಚರಿಕೆ

ದೀಪಾವಳಿಯಲ್ಲಿ ಪಟಾಕಿಯನ್ನು ದೊಡ್ಡ ಪ್ರಮಾಣದಲ್ಲಿ ಸಿಡಿಸಲಾಗುತ್ತದೆ. ಈ ವರ್ಷ ಕೊರೋನಾ ವಿಪತ್ತಿನ ಸಮಯದಲ್ಲಿ ಪಟಾಕಿಗಳಿಂದಾಗುವ ಮಾಲಿನ್ಯವು ರೋಗಿಗಳಿಗೆ ಅಪಾಯಕಾರಿಯಾಗಬಹುದು. ಇದರಿಂದ ಕೊರೋನಾ ಪೀಡಿತರಿಗೆ, ಅದೇರೀತಿ ವಿವಿಧ ಕಾಯಿಲೆಗಳನ್ನು ಎದುರಿಸುತ್ತಿರುವ ರೋಗಿಗಳಿಗೆ ತೊಂದರೆಗಳಾಗುವ ಸಾಧ್ಯತೆಯಿದೆ.

ನದಿಮಾರ್ಗವಾಗಿ ನುಸುಳುತ್ತಿದ್ದ ಭಯೋತ್ಪಾದಕರಿಂದ ಬೃಹತ್ ಪ್ರಮಾಣಗಳಲ್ಲಿ ಶಸ್ತ್ರಾಸ್ತ್ರಗಳ ವಶ(ಜಫ್ತಿ)

ಕೇರನ್ ಸೆಕ್ಟರ್‌ನಲ್ಲಿಯ ಪಾಕ್ ಪುರಸೃತ ಭಯೋತ್ಪಾದಕರು ಕಿಶನಗಂಗಾ ನದಿ ಮಾರ್ಗವಾಗಿ ಶಸ್ತ್ರಾಸ್ತ್ರ ಕಳ್ಳಸಾಗಣೆಗೆ ಪ್ರಯತ್ನಿಸಿದಾಗ ಭಾರತೀಯ ಸೈನ್ಯವು ಅದನ್ನು ವಿಫಲಗೊಳಿಸಿದೆ. ಭಯೋತ್ಪಾದಕರಿಂದ ೪ ಎಕೆ-೪೭, ೮ ಮ್ಯಾಗಝಿನ್ ಹಾಗೂ ೨೪೦ ಎಕೆ ರೈಫಲ್ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥರ ಶಿರಚ್ಛೇದಿಸುವಂತಹ ದರ್ಪದ ಮಾತನಾಡಿದ ಸಲಮಾನನ ಬಂಧನ

ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ವಿರುದ್ಧ ಆಕ್ಷೇಪಾರ್ಹ ಭಾಷಣ ಮಾಡಿದ ಪ್ರಕರಣದಲ್ಲಿ ಸಲಮಾನ್ ಎಂಬ ಯುವಕನನ್ನು ಬಾಗಪತ್ ಪೊಲೀಸರು ಬಂಧಿಸಿದ್ದಾರೆ. ಇಲ್ಲಿಯ ರಾಷ್ಟ್ರೀಯ ಲೋಕದಳದ ಮಹಾಪಂಚಾಯತ್‌ನಲ್ಲಿ ಭಾಷಣ ಮಾಡುತ್ತಿರುವಾಗ ಆತ ‘ಮೋದಿ ಮತ್ತು ಯೋಗಿ ಆದಿತ್ಯನಾಥರ ಶಿರಚ್ಛೇದಗೊಳಿಸದಿದ್ದರೆ ನನ್ನ ಹೆಸರನ್ನು ಬದಲಾಯಿಸಿ’ ಎಂದು ಘೋಷಣೆಯನ್ನು ನೀಡಿದ್ದನು.

ಕರ್ನಾಟಕ ಮತ್ತು ತಮಿಳುನಾಡಿನಿಂದ ಇಸ್ಲಾಮಿಕ್ ಸ್ಟೇಟ್‌ನ ಇಬ್ಬರ ಬಂಧನ

ತಮಿಳುನಾಡು ಮತ್ತು ಕರ್ನಾಟಕದಿಂದ ಇಸ್ಲಾಮಿಕ್ ಸ್ಟೇಟ್‌ನಲ್ಲಿ ಭಯೋತ್ಪಾದಕರಾಗಿ ಭರ್ತಿಯಾಗಲು ಹಾಗೂ ಅವರಿಗೆ ಸಿರಿಯಾ ತನಕ ತಲುಪಲು ಹಣ ವ್ಯವಸ್ಥೆ ಮಾಡಿದ್ದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.ಯು) ಅಹಮದ್ ಅಬ್ದುಲ್ ಕಾದಿರ್ (ವಯಸ್ಸು ೪೦) ಮತ್ತು ಇರಫಾನ್ ನಾಸೀರ್ (ವಯಸ್ಸು ೩೩) ಈ ಇಬ್ಬರನ್ನು ಬಂಧಿಸಿದೆ.

ಜಾರ್ಖಂಡ್‌ನಲ್ಲಿ ಪಾದ್ರಿ ಸ್ಟ್ಯಾನ್ ಸ್ವಾಮಿಯ ಬಂಧನ

೨೦೧೮ ರಲ್ಲಿ ಭೀಮಾ ಕೋರೆಗಾವ್‌ನಲ್ಲಾದ ಹಿಂಸಾಚಾರದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.ಯು) ೮೩ ವರ್ಷದ ತಥಾಕಥಿತ ಸಾಮಾಜಿಕ ಕಾರ್ಯಕರ್ತ ಪಾದ್ರಿ ಸ್ಟ್ಯಾನ್ ಸ್ವಾಮಿಯನ್ನು ರಾಂಚಿಯಲ್ಲಿರುವ ಅವರ ನಿವಾಸದಿಂದ ಬಂಧಿಸಿದೆ.

‘ನ್ಯೂಸ್ ಬ್ರಾಡಕಾಸ್ಟಿಂಗ್ ಸ್ಟ್ಯಾಂಡರ್ಡ್ ಆಥೋರಿಟಿ’ಯಿಂದ ‘ಆಜ್ ತಕ್’ ವಾಹಿನಿಗೆ ೧ ಲಕ್ಷ ರೂಪಾಯಿಯ ದಂಡ

‘ನ್ಯೂಸ್ ಬ್ರಾಡಕಾಸ್ಟಿಂಗ್ ಸ್ಟ್ಯಾಂಡರ್ಡ್ ಆಥೊರಿಟಿ’ಯಿಂದ(ಎನ್.ಬಿ.ಎಸ್.ಐ.ಯು) ಹಿಂದಿ ವಾರ್ತಾ ವಾಹಿನಿ ‘ಆಜ್ ತಕ್’ಗೆ ೧ ಲಕ್ಷ ರೂಪಾಯಿಯ ದಂಡವನ್ನು ಹೊರಿಸಲಾಗಿದೆ. ನಟ ಸುಶಾಂತ್‌ಸಿಂಹ ರಾಜಪುತರ ವಿಷಯದ ಟ್ವೀಟ್ ಒಂದನ್ನು ಪ್ರಸಾರ ಮಾಡಿದ ಬಗ್ಗೆ ಈ ಕ್ರಮ ಕೈಗೊಳ್ಳಲಾಗಿದೆ.

ಕಾನಪುರ(ಉತ್ತರಪ್ರದೇಶ)ದಲ್ಲಿ ಮುಸಲ್ಮಾನ ಹುಡುಗಿಯ ‘ಲವ್ ಜಿಹಾದ್’

ಇಲ್ಲಿಯ ‘ನವಾಬ್ ಸಾಹಿಬ್ ಹಾತಾ’ ಪ್ರದೇಶದಲ್ಲಿ ಓರ್ವ ಮುಸಲ್ಮಾನ ಹುಡುಗಿ ಹಿಂದೂ ಯುವಕನನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಆತನನ್ನು ಮತಾಂತರ ಮಾಡಿ ಮದುವೆಯಾದಳು. ಈಗ ಮುಸಲ್ಮಾನ ಹುಡಡುಗಿಯರಿಂದಲೂ ಕೂಡ ‘ಲವ್ ಜಿಹಾದ್’ ಆಗುತ್ತಿದೆ ಎಂದು ಹೇಳಲಾಗುತ್ತಿದೆ.

ಕಾಶಿ ವಿಶ್ವನಾಥ ದೇವಸ್ಥಾನದ ಅರ್ಜಿಯ ಬಗ್ಗೆ ತಡವಾಗಿ ಪ್ರಶ್ನಿಸಿದ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್‌ಗೆ ೩ ಸಾವಿರ ರೂಪಾಯಿ ದಂಡ

ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿಯ ನಡುವಿನ ಖಟ್ಲೆಯಲ್ಲಿ ಜಿಲ್ಲಾ ನ್ಯಾಯಾಲಯವು ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್‌ಗೆ ೩ ಸಾವಿರ ರೂಪಾಯಿಗಳ ದಂಡ ವಿಧಿಸಿದೆ. ಅಕ್ಟೋಬರ್ ೬ ರಂದು ನಡೆದ ಆಲಿಕೆಯ ಸಮಯದಲ್ಲಿ ಕಾಶಿ ವಿಶ್ವನಾಥ ದೇವಸ್ಥಾನದ ಅರ್ಜಿಯನ್ನು ಅವರು ತಡವಾಗಿ ಪ್ರಶ್ನಿಸಿದ್ದರಿಂದ ಈ ದಂಡವನ್ನು ವಿಧಿಸಲಾಗಿದೆ.

ಬಂಗಾಲದಲ್ಲಿ ಕಟ್ಟರ ವಹಾಬಿ ಸಿದ್ಧಾಂತವನ್ನು ಹಬ್ಬಿಸಿ ಮುಸಲ್ಮಾನ ಯುವಕರನ್ನು ಜಿಹಾದ್‌ಗಾಗಿ ಸಿದ್ಧಪಡಿಸುವ ಸಂಚು

ಕಳೆದ ತಿಂಗಳು ರಾಜ್ಯದ ಮುರ್ಶಿದಾಬಾದ್‌ನಿಂದ ಏಳು ಅಲ್ ಕಾಯಿದಾ ಭಯೋತ್ಪಾದಕರನ್ನು ಬಂಧಿಸಲಾಗಿತ್ತು. ನಂತರ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.ಯು) ರಾಜ್ಯದಲ್ಲಿ ಹೆಚ್ಚಿನ ತನಿಖೆ ನಡೆಸಿದೆ. ಅದಕ್ಕನುಸಾರ ಬಂಗಾಲದ ಗಡಿ ಜಿಲ್ಲೆಗಳಲ್ಲಿ ಮುಸಲ್ಮಾನ ಯುವಕರನ್ನು ಜಿಹಾದಿ ಸಿದ್ಧಾಂತದತ್ತ ಸೆಳೆಯಲಾಗುತ್ತಿದೆ ಎಂಬುದು ಬೆಳಕಿಗೆ ಬಂದಿದೆ. ಈ ಮೂಲಕ ಅವರನ್ನು ಜಿಹಾದ್‌ಗಾಗಿ ಸಿದ್ಧ ಪಡಿಸಲು ಸಂಚು ರೂಪಿಸಲಾಗುತ್ತಿದೆ.