ಹಿಂದೂ ಯುವಕನನ್ನು ಪ್ರೀತಿಯ ಬಲೆಗೆ ಸೆಳೆದುಕೊಂಡು ಮತಾಂತರ ಮಾಡಿ ಮದುವೆಯಾದಳು
ಹಿಂದೂ ಯುವಕರಾಗಿರಲಿ ಯುವತಿಯರಾಗಿರಲಿ, ಧರ್ಮಾಭಿಮಾನ ಇಲ್ಲದಿರುವುದರ ಪರಿಣಾಮ ಇದಾಗಿದೆ. ಅದಕ್ಕಾಗಿಯೇ ಹಿಂದೂಗಳಿಗೆ ಧರ್ಮಶಿಕ್ಷಣವನ್ನು ನೀಡುವುದು ಅತ್ಯಾವಶ್ಯಕವಾಗಿದೆ. ಹಿಂದೂ ಸಂಘಟನೆಗಳು ಯುದ್ಧಸ್ತರದ ಪ್ರಯತ್ನಗಳನ್ನು ಮಾಡುವುದು ಅಗತ್ಯವಿದೆ !
ಕಾನಪುರ (ಉತ್ತರ ಪ್ರದೇಶ) – ಇಲ್ಲಿಯ ‘ನವಾಬ್ ಸಾಹಿಬ್ ಹಾತಾ’ ಪ್ರದೇಶದಲ್ಲಿ ಓರ್ವ ಮುಸಲ್ಮಾನ ಹುಡುಗಿ ಹಿಂದೂ ಯುವಕನನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಆತನನ್ನು ಮತಾಂತರ ಮಾಡಿ ಮದುವೆಯಾದಳು. ಈಗ ಮುಸಲ್ಮಾನ ಹುಡಡುಗಿಯರಿಂದಲೂ ಕೂಡ ‘ಲವ್ ಜಿಹಾದ್’ ಆಗುತ್ತಿದೆ ಎಂದು ಹೇಳಲಾಗುತ್ತಿದೆ.
೧. ಈ ಹಿಂದೂ ಯುವಕನ ಹೆಸರು ಸುಮಿತ್ ಕನೌಜಿಯಾ ಎಂದಾಗಿದೆ. ಆತ ಮತಾಂತರಗೊಂಡು ಸೈಫ್ ಖಾನ್ ಎಂಬ ಹೆಸರನ್ನು ಇಟ್ಟುಕೊಂಡು ನಂತರ ಆ ಮುಸಲ್ಮಾನ ಹುಡುಗಿಯನ್ನು ಮದುವೆಯಾದನು. ಯುವತಿಯು ಸುಮಿತ್‌ನನ್ನು ಬ್ರೈನ್ ವಾಶ್ ಮಾಡಿ ಮತಾಂತರ ಮಾಡಿದ್ದಾಳೆ ಎಂದು ಸುಮಿತ್ ತಾಯಿ ಆರೋಪಿಸಿದ್ದಾರೆ. ಈಗ ಅವನು ನಮಾಜ ಪಠಣ ಮಾಡುತ್ತಾನೆ ಹಾಗೂ ರೋಜಾ ಕೂಡ ಇಡುತ್ತಾನೆ.
೨. ಸುಮಿತ್ ಮತ್ತು ಈ ಯುವತಿ ೨ ವರ್ಷಗಳಿಂದ ಪ್ರೀತಿಸುತ್ತಿದ್ದಾರೆ; ಆದರೆ ಕುಟುಂಬದ ವಿರೋಧದಿಂದಾಗಿ ಅವರು ಓಡಿಹೋಗಿ ಮದುವೆಯಾದರು. ಈ ಪ್ರಕರಣದಲ್ಲಿ ಇಬ್ಬರ ಕುಟುಂಬಗಳು ಪರಸ್ಪರರ ವಿರುದ್ಧ ಅಪಹರಣ ದೂರು ದಾಖಲಿಸಿದ್ದಾರೆ. ಈ ಕಾರಣದಿಂದ ಪೊಲೀಸರು ಸುಮಿತ್ ತಂದೆಯನ್ನು ಬಂಧಿಸಿದ್ದಾರೆ. (ಎರಡೂ ಕುಟುಂಬಗಳು ದೂರು ನೀಡಿದ್ದರೆ, ಹಿಂದೂ ಹುಡುಗನ ತಂದೆಯನ್ನು ಮಾತ್ರ ಏಕೆ ಬಂಧಿಸಲಾಯಿತು ? ಮುಸಲ್ಮಾನ ಹುಡುಗಿಯ ತಂದೆಯನ್ನು ಏಕೆ ಬಂಧಿಸಲಿಲ್ಲ ? ಇದರಿಂದ ಪೊಲೀಸರ ಹಿಂದೂ ದ್ವೇಷ ಕಾಣುತ್ತದೆ ! – ಸಂಪಾದಕ)