ಡೊನಾಲ್ಡ್ ಟ್ರಂಪ್ ಸರಕಾರಲ್ಲಿ ಕೃತಕ ಬುದ್ಧಿಮತ್ತೆ(AI) ತಂತ್ರಜ್ಞಾನದ ಹಿರಿಯ ನೀತಿ ಸಲಹೆಗಾರರಾಗಿ ಭಾರತೀಯ ಮೂಲದ ಉದ್ಯಮಿ ಶ್ರೀರಾಮ ಕೃಷ್ಣನ್ ನೇಮಕ

ವಾಷಿಂಗ್ಟನ (ಅಮೇರಿಕಾ) – ಅಮೇರಿಕೆಯ ಹೊಸದಾಗಿ ಚುನಾಯಿತ ರಾಷ್ಟ್ರಪತಿ ಡೊನಾಲ್ಡ್ ಟ್ರಂಪ್ ತಮ್ಮ ಆಡಳಿತದಲ್ಲಿ ಮತ್ತೊರ್ವ ಭಾರತೀಯರಿಗೆ ಸ್ಥಾನವನ್ನು ನೀಡಿದ್ದಾರೆ. ಅವರು ಭಾರತೀಯ ಅಮೇರಿಕನ್ ವಾಣಿಜ್ಯೋದ್ಯಮಿ, ಬಂಡವಾಳಶಾಹಿ ಮತ್ತು ಲೇಖಕ ಶ್ರೀರಾಮ ಕೃಷ್ಣನ್ ಅವರನ್ನು ‘ವೈಟ್ ಹೌಸ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ’ ಕಚೇರಿಯಲ್ಲಿ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ) ತಂತ್ರಜ್ಞಾನದ ಹಿರಿಯ ನೀತಿ ಸಲಹೆಗಾರರಾಗಿ ನೇಮಕ ಮಾಡಿದ್ದಾರೆ. ಶ್ರೀರಾಮ ಕೃಷ್ಣನ್ ಅವರು ಈ ಹಿಂದೆ ಮೈಕ್ರೋಸಾಫ್ಟ್, ಟ್ವಿಟರ್, ಯಾಹೂ, ಫೇಸ್‌ಬುಕ್ ಮತ್ತು ಸ್ನ್ಯಾಪ್‌ ಈ ಸಂ‌ಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ನೇಮಕಾತಿಯನ್ನು ಘೋಷಿಸಿದ ನಂತರ, ಕೃಷ್ಣನ್ ಇವರು, “ನಾನು ದೇಶ ಸೇವೆಯನ್ನು ಸಂಪೂರ್ಣ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುತ್ತೇನೆ’, ಎಂದು ಹೇಳಿದರು.