ರಾಷ್ಟ್ರೀಯ ತನಿಖಾ ದಳದ ತನಿಖೆಯಿಂದ ಬೆಳಕಿಗೆ ಬಂದ ಮಾಹಿತಿ
ಬಂಗಾಲವನ್ನು ಮತ್ತೊಂದು ಬಾಂಗ್ಲಾದೇಶವನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ; ರಾಜ್ಯದ ತೃಣಮೂಲ ಕಾಂಗ್ರೆಸ್ ಸರಕಾರ ಇದನ್ನು ನಿರ್ಲಕ್ಷಿಸುತ್ತಿರುವುದು, ಅಪಾಯಕಾರಿಯಾಗಿದೆ. ಕೇಂದ್ರ ಸರಕಾರ ಕೂಡಲೇ ಮಧ್ಯಪ್ರವೇಶಿಸಿ ಈ ಸಂಚನ್ನು ಮೊಟಕುಗೊಳಿಸಬೇಕು !
ಕೋಲಕಾತಾ (ಬಂಗಾಲ) – ಕಳೆದ ತಿಂಗಳು ರಾಜ್ಯದ ಮುರ್ಶಿದಾಬಾದ್‌ನಿಂದ ಏಳು ಅಲ್ ಕಾಯಿದಾ ಭಯೋತ್ಪಾದಕರನ್ನು ಬಂಧಿಸಲಾಗಿತ್ತು. ನಂತರ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.ಯು) ರಾಜ್ಯದಲ್ಲಿ ಹೆಚ್ಚಿನ ತನಿಖೆ ನಡೆಸಿದೆ. ಅದಕ್ಕನುಸಾರ ಬಂಗಾಲದ ಗಡಿ ಜಿಲ್ಲೆಗಳಲ್ಲಿ ಮುಸಲ್ಮಾನ ಯುವಕರನ್ನು ಜಿಹಾದಿ ಸಿದ್ಧಾಂತದತ್ತ ಸೆಳೆಯಲಾಗುತ್ತಿದೆ ಎಂಬುದು ಬೆಳಕಿಗೆ ಬಂದಿದೆ. ಈ ಮೂಲಕ ಅವರನ್ನು ಜಿಹಾದ್‌ಗಾಗಿ ಸಿದ್ಧ ಪಡಿಸಲು ಸಂಚು ರೂಪಿಸಲಾಗುತ್ತಿದೆ.
೧. ಕಳೆದ ಕೆಲವು ವರ್ಷಗಳಲ್ಲಿ ರಾಜ್ಯದಲ್ಲಿ ಸಣ್ಣ ಸಣ್ಣ ಜಿಹಾದಿ ಸಂಘಟನೆಗಳು ಹುಟ್ಟಿಕೊಂಡಿವೆ. ಅವರು ಮುಸಲ್ಮಾನ ಯುವಕರನ್ನು ತಮ್ಮ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಹಾಗೂ ಅವರಿಗೆ ಕಟ್ಟರ ವಹಾಬಿ ಸಿದ್ಧಾಂತವನ್ನು ಕಲಿಸುತ್ತಿದ್ದಾರೆ. ಈ ಮೂಲಕ ಅವರನ್ನು ಜಿಹಾದ್‌ಗಾಗಿ ಸಿದ್ಧಪಡಿಸಲಾಗುತ್ತಿದೆ.
೨. ಈಗ ಎನ್.ಐ.ಎ.ಯಿಂದ ‘ಈ ಸಂಘಟನೆಗಳು ಯುವಕರನ್ನು ನೇಮಿಸಿಕೊಳ್ಳಲು ಹೇಗೆ ಪ್ರಯತ್ನಿಸುತ್ತಿವೆ ? ಅವರ ತರಬೇತಿ ಕೇಂದ್ರಗಳಿವೆಯೇ ? ಅವರ ನಾಯಕರು ಯಾರು ? ಅವರ ಸಂಘಟನೆಗಳಲ್ಲಿ ಎಷ್ಟು ಜನರು ತೊಡಗಿಸಿಕೊಂಡಿದ್ದಾರೆ?’ ಎಂಬುವುದರ ತನಿಖೆ ನಡೆಯುತ್ತಿದೆ.
೩. ಕಳೆದ ಕೆಲವು ವರ್ಷಗಳಲ್ಲಿ ಬಂಗಾಲದ ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಜನಸಂಖ್ಯೆಯ ಮೂಲಕ ಭೌಗೋಳಿಕತೆಯನ್ನು ಬದಲಾಯಿಸುವ ಪ್ರಯತ್ನ ನಡೆಯುತ್ತಿದೆ. ಜಿಹಾದಿಗಳು ಮತ್ತು ಮೌಲ್ವಿಗಳು ಈ ಗಡಿಯಲ್ಲಿ ಸಕ್ರಿಯರಾಗಿದ್ದು ಅವರು ಬಾಂಗ್ಲಾದೇಶ ಮತ್ತು ಭಾರತದ ಗಡಿಯನ್ನು ದಾಟುತ್ತಾರೆ. ಅವರು ಇಲ್ಲಿ ಜನರನ್ನು ಧಾರ್ಮಿಕ ಯುದ್ಧಕ್ಕಾಗಿ ಸಿದ್ಧಪಡಿಸುತ್ತಿದ್ದಾರೆ.
೪. ಬಾಂಗ್ಲಾದೇಶದಲ್ಲಿ ಪ್ರಧಾನಿ ಶೇಖ್ ಹಸೀನಾ ಅವರ ಸರಕಾರವು ಜಿಹಾದಿ ವಿಚಾರಸರಣಿಯ ಜನರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದರಿಂದ ಅವರು ಅಲ್ಲಿಂದ ಪಲಾಯನಗೈದು ಗಡಿ ದಾಟಿ ಬಾಂಗಾಲದಲ್ಲಿ ಬರುತ್ತಿದ್ದಾರೆ ಹಾಗೂ ಅಲ್ಲಿನ ಮುಸಲ್ಮಾನರಲ್ಲಿ ಜಿಹಾದಿ ಸಿದ್ಧಾಂತವನ್ನು ಹಬ್ಬಿಸುತ್ತಿದ್ದಾರೆ.
೫. ಇಲ್ಲಿ ನಿರುದ್ಯೋಗ ಹೆಚ್ಚಾಗಿದ್ದರಿಂದ ಮುಸಲ್ಮಾನ ಯುವಕರಿಗೆ ವಹಾಬಿ ಸಿದ್ಧಾಂತವನ್ನು ಕಲಿಸುವುದು ಸುಲಭವಾಗುತ್ತದೆ. ಅವರು ಕರಪತ್ರಗಳು, ವಾಟ್ಸಾಪ್, ಫಲಕಗಳು ಇತ್ಯಾದಿಗಳ ಮೂಲಕ ಪ್ರಸಾರ ಮಾಡುತ್ತಿದ್ದಾರೆ. ಅವರು ಭಾರತದಲ್ಲಿ ಇಸ್ಲಾಮಿಕ್ ಆಡಳಿತವನ್ನು ತರಲು ಯುವಕರಿಗೆ ಪ್ರಚೋಧಿಸುತ್ತಿದ್ದಾರೆ.