ಪ್ರಯಾಗರಾಜ ಮಹಾಕುಂಭ ಉತ್ಸವ ೨೦೨೫

  • ಕುಂಭ ಕ್ಷೇತ್ರಕ್ಕೆ ಪ್ರವೇಶಿಸುತ್ತಿರುವ ಸಾಧುಗಳು

  • ಎಲ್ಲಕ್ಕಿಂತ ಹಳೆಯದಾಗಿರುವ ಶ್ರೀ ಪಂಚ ದಶನಮ ಆವಾಹನ ಅಖಾಡಾದಿಂದ ಕುಂಭ ಕ್ಷೇತ್ರದಲ್ಲಿ ಪ್ರವೇಶ

ಪ್ರಯಾಗರಾಜ – ಇಲ್ಲಿಯ ತ್ರಿವೇಣಿ ಸಂಗಮದ ದಡದಲ್ಲಿ ನಡೆಯಲಿರುವ ಮಹಾಕುಂಭ ಮೇಳಕ್ಕಾಗಿ ವಿವಿಧ ಅಖಾಡಾದವರು ಕುಂಭನಗರಿಯಲ್ಲಿ ಪ್ರವೇಶ ಆಗುತ್ತಿದೆ. ಸನಾತನ ಧರ್ಮದ ೧೩ ಅಖಾಡಾಗಳಲ್ಲಿ ಎಲ್ಲಕ್ಕಿಂತ ಹಳೆಯದಾಗಿರುವ ಶ್ರೀ ಪಂಚ ದಶನಮ ಆವಾಹನ ಅಖಾಡಾದ ಶ್ರೀ ಮಹಾಮಂಡಲೇಶ್ವರ ಸ್ವಾಮಿ ಅರುಣಗಿರಿ ಇವರ ನೇತೃತ್ವದಲ್ಲಿ ಡಿಸೆಂಬರ್ ೨೨ ರಂದು ಮೆರವಣಿಗೆಯ ಮೂಲಕ ಕುಂಭ ಕ್ಷೇತ್ರದಲ್ಲಿ ಪ್ರವೇಶ ಮಾಡಿದರು. ಮಡುಕ ಇಲ್ಲಿಯ ಆವಾಹನ ಅಖಾಡದ ಸ್ಥಳೀಯ ಆಶ್ರಮದಿಂದ ಈ ಮೆರವಣಿಗೆ ಆರಂಭವಾಯಿತು. ಮಾರ್ಗದಲ್ಲಿ ವಿವಿಧ ಸ್ಥಳಗಳಲ್ಲಿ ಸಾಧು ಸಂತರನ್ನು ಸ್ವಾಗತಿಸಲಾಯಿತು. ಶ್ರೀ ಪಂಚ ದಶನಮ ಆವಾಹನ ಅಖಾಡ ಇದು ಎಲ್ಲಾ ಕಿಂತ ಹಳೆಯ ಅಖಾಡ ಆಗಿದ್ದು ಈ ಅಖಾಡಾದ ಉಪಸ್ಥಿತಿಯಲ್ಲಿ ಪ್ರಯಾಗರಾಜದಲ್ಲಿ ಇಲ್ಲಿಯವರೆಗೆ ೧೨೨ ಮಹಾಕುಂಭ ಮತ್ತು ೧೨೩ ಕುಂಭಮೇಳಗಳು ನೆರವೇರಿವೆ.