ಜಾರ್ಖಂಡ್‌ನಲ್ಲಿ ಪಾದ್ರಿ ಸ್ಟ್ಯಾನ್ ಸ್ವಾಮಿಯ ಬಂಧನ

ಕೋರೆಗಾವ್ ಭೀಮಾ ಪ್ರಕರಣ

  • ಭಾರತದಲ್ಲಿ ಕೋಮು ಹಿಂಸಾಚಾರದಲ್ಲಿ ಇಂತಹ ಕ್ರೈಸ್ತ ಪಾದ್ರಿಗಳು ಭಾಗಿಯಾಗಿದ್ದಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
  • ಸುಳ್ಳು ಕಾರಣಗಳಿಂದ ಹಿಂದೂ ಸಂತರನ್ನು ಅವಮಾನಿಸುವ ಮಾಧ್ಯಮಗಳು ಪಾದ್ರಿಗಳ ಸಮಾಜವಿರೋಧಿ ಸ್ವರೂಪವನ್ನು ಬಯಲಿಗೆಳೆಯುವುದಿಲ್ಲ !
ಸಾಮಾಜಿಕ ಕಾರ್ಯಕರ್ತ ಪಾದ್ರಿ ಸ್ಟ್ಯಾನ್ ಸ್ವಾಮಿ

ರಾಂಚಿ (ಜಾರ್ಖಂಡ್) – ೨೦೧೮ ರಲ್ಲಿ ಭೀಮಾ ಕೋರೆಗಾವ್‌ನಲ್ಲಾದ ಹಿಂಸಾಚಾರದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.ಯು) ೮೩ ವರ್ಷದ ತಥಾಕಥಿತ ಸಾಮಾಜಿಕ ಕಾರ್ಯಕರ್ತ ಪಾದ್ರಿ ಸ್ಟ್ಯಾನ್ ಸ್ವಾಮಿಯನ್ನು ರಾಂಚಿಯಲ್ಲಿರುವ ಅವರ ನಿವಾಸದಿಂದ ಬಂಧಿಸಿದೆ.

ಆರಂಭದಲ್ಲಿ ೨೦ ನಿಮಿಷಗಳ ಕಾಲ ವಿಚಾರಣೆ ನಡೆಸಿ ನಂತರ ಅವರನ್ನು ಬಂಧಿಸಲಾಗಿದೆ. ನಂತರ ಕಾನೂನುಬಾಹಿರ ಕಾರ್ಯಾಚರಣೆ ತಡೆ ಕಾಯ್ದೆಯಡಿ ಅವರ ಮೇಲೆ ಅಪರಾಧ ದಾಖಲಿಸಲಾಗಿದೆ.