ಕಾಶಿ ವಿಶ್ವನಾಥ ದೇವಸ್ಥಾನದ ಅರ್ಜಿಯ ಬಗ್ಗೆ ತಡವಾಗಿ ಪ್ರಶ್ನಿಸಿದ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್‌ಗೆ ೩ ಸಾವಿರ ರೂಪಾಯಿ ದಂಡ

ವಾರಣಾಸಿ (ಉತ್ತರ ಪ್ರದೇಶ) – ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿಯ ನಡುವಿನ ಖಟ್ಲೆಯಲ್ಲಿ ಜಿಲ್ಲಾ ನ್ಯಾಯಾಲಯವು ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್‌ಗೆ ೩ ಸಾವಿರ ರೂಪಾಯಿಗಳ ದಂಡ ವಿಧಿಸಿದೆ. ಅಕ್ಟೋಬರ್ ೬ ರಂದು ನಡೆದ ಆಲಿಕೆಯ ಸಮಯದಲ್ಲಿ ಕಾಶಿ ವಿಶ್ವನಾಥ ದೇವಸ್ಥಾನದ ಅರ್ಜಿಯನ್ನು ಅವರು ತಡವಾಗಿ ಪ್ರಶ್ನಿಸಿದ್ದರಿಂದ ಈ ದಂಡವನ್ನು ವಿಧಿಸಲಾಗಿದೆ. ಪ್ರಕರಣದ ಮುಂದಿನ ಆಲಿಕೆಯು ಅಕ್ಟೋಬರ್ ೧೩ ರಂದು ನಡೆಯಲಿದೆ. ಮುಂದಿನ ಆಲಿಕೆಯಲ್ಲಿ ಈ ಪ್ರಕರಣವನ್ನು ದಿವಾಣಿ ನ್ಯಾಯಾಲಯದಲ್ಲಿ ನಡೆಸುವುದೋ ಅಥವಾ ಲಖನೌದಲ್ಲಿನ ವಕ್ಫ್ ಪಂಚಾಯತಿಯಲ್ಲಿ ನಡೆಸುವುದು ಎಂಬುದರ ನಿರ್ಣಯವಾಗಲಿದೆ. ಅಂಜುಮಾನ ಇಂತಜಾಮಿಯಾ ಮಸೀದಿ ಕಮಿಟಿಯು ಈ ಮೊದಲು ದಿವಾಣಿ ನ್ಯಾಯಾಲಯದಲ್ಲಿ ಆಲಿಕೆ ನಡೆಸಿದ ಬಗ್ಗೆ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಆದರೆ ಸುನ್ನಿ ಬೋರ್ಡ್‌ಗೆ ಇದರ ಆಲಿಕೆಯನ್ನು ಲಖನೌ ವಕ್ಫ ಪಂಚಾಯತಿಯಲ್ಲಿ ನಡೆಸಬೇಕು ಎಂದು ಅನಿಸುತ್ತದೆ.