‘ನ್ಯೂಸ್ ಬ್ರಾಡಕಾಸ್ಟಿಂಗ್ ಸ್ಟ್ಯಾಂಡರ್ಡ್ ಆಥೋರಿಟಿ’ಯಿಂದ ‘ಆಜ್ ತಕ್’ ವಾಹಿನಿಗೆ ೧ ಲಕ್ಷ ರೂಪಾಯಿಯ ದಂಡ

ನಟ ಸುಶಾಂತ್ ಸಿಂಹ ರಾಜಪುತರ ಆತ್ಮಹತ್ಯೆ ಪ್ರಕರಣದ ಬಗ್ಗೆ ಅಯೋಗ್ಯ ಪದ್ಧತಿಯಲ್ಲಿ ವಾರ್ತೆ ಪ್ರಸಾರ

ವಾಹಿನಿಯ ಮೂಲಕ ಕ್ಷಮೆಯಾಚಿಸುವಂತೆ ಆದೇಶ

  • ಹೀಗೆ ಪ್ರತಿಯೊಂದು ವಾರ್ತಾವಾಹಿನಿಯ ಮೇಲೆ ಎನ್.ಬಿ.ಎಮ್.ಐ.ಯು ಹೆಚ್ಚು ಕ್ರಮ ಕೈಗೊಳ್ಳುವುದು ಅಗತ್ಯವಿದೆ ! ಇಂತಹ ತಪ್ಪು ಹಾಗೂ ಪ್ರಚೋದನಕಾರಿ ವಾರ್ತೆಯಿಂದ ಬೇಸತ್ತು ಜನರೇ ಇಂತಹ ವಾರ್ತಾವಾಹಿನಿಗಳ ವಿರುದ್ಧ ಬಹಿಷ್ಕಾರದ ಶಸ್ತ್ರವನ್ನು ಕೈಗೆತ್ತಿಕೊಂಡರೆ ಅದಕ್ಕೆ ಆಶ್ಚರ್ಯ ಪಡಬೇಕಿಲ್ಲ !
  • ಹಿಂದೂಗಳ ನಿರಪರಾಧಿ ಸಂತರ ಮೇಲೆ ಸುಳ್ಳು ಆರೋಪವನ್ನು ಹೊರಿಸಿದಾಗ ಅದನ್ನು ಸರಾಗವಾಗಿ ಅವಮಾನಿಸುವ ಪ್ರಸಂಗಗಳನ್ನು ವಾಹಿನಿಗಳು ಸಾರಾಸಗಟಾಗಿ ಮಾಡುತ್ತಿರುತ್ತವೆ, ಇದೆಲ್ಲವುಗಳನ್ನು ನೋಡಿದಾಗ ಇಂತಹ ವಾಹಿನಿಗಳನ್ನು ನಿರ್ಬಂಧಿಸುವಂತೆ ಯಾರಾದರು ಬೇಡಿಕೆ ಸಲ್ಲಿಸಿದರೆ, ಅದರಲ್ಲಿ ಆಶ್ಚರ್ಯ ಪಡಬೇಕಿಲ್ಲ !

ನವ ದೆಹಲಿ – ‘ನ್ಯೂಸ್ ಬ್ರಾಡಕಾಸ್ಟಿಂಗ್ ಸ್ಟ್ಯಾಂಡರ್ಡ್ ಆಥೊರಿಟಿ’ಯಿಂದ(ಎನ್.ಬಿ.ಎಸ್.ಐ.ಯು) ಹಿಂದಿ ವಾರ್ತಾ ವಾಹಿನಿ ‘ಆಜ್ ತಕ್’ಗೆ ೧ ಲಕ್ಷ ರೂಪಾಯಿಯ ದಂಡವನ್ನು ಹೊರಿಸಲಾಗಿದೆ. ನಟ ಸುಶಾಂತ್‌ಸಿಂಹ ರಾಜಪುತರ ವಿಷಯದ ಟ್ವೀಟ್ ಒಂದನ್ನು ಪ್ರಸಾರ ಮಾಡಿದ ಬಗ್ಗೆ ಈ ಕ್ರಮ ಕೈಗೊಳ್ಳಲಾಗಿದೆ. ಅದೇರೀತಿ ಈ ಬಗ್ಗೆ ತಮ್ಮ ವಾಹಿನಿಯ ಮೂಲಕ ಕ್ಷಮೆಯಾಚಿಸಬೇಕು, ಅದೇರೀತಿ ಯು-ಟ್ಯೂಬ್, ಜಾಲತಾಣ ಇತ್ಯಾದಿ ಸ್ಥಳಗಳಲ್ಲಿ ಈ ಕಾರ್ಯಕ್ರಮದ ‘ಲಿಂಕ್’ ಇಟ್ಟಿದ್ದಲ್ಲಿ, ಅದನ್ನು ತೆಗೆದುಹಾಕಬೇಕು ಎಂದು ಆದೇಶ ನೀಡಿದೆ. ಕ್ಷಮೆಯಾಚಿಸುವ ದಿನಾಂಕ, ಸಮಯ ಹಾಗೂ ವಿಷಯವನ್ನು ಎನ್.ಬಿ.ಎಸ್.ಐ. ನಿರ್ಧರಿಸಲಿದೆ. ‘ವಾಹಿನಿಯು ತನ್ನ ಕ್ಷಮಾಯಾಚನೆಯನ್ನು ೭ ದಿನಗಳಲ್ಲಿ ಸಿಡಿಯ ಮೂಲಕ ಸಾದರಪಡಿಸಬೇಕು, ಎಂದು ಸಹ ಆದೇಶದಲ್ಲಿ ತಿಳಿಸಲಾಗಿದೆ.

‘ಆಜ್ ತಕ್’ ವಾರ್ತಾವಾಹಿನಿಯು ಜೂನ್ ೧೬ ರಂದು ಸುಶಾಂತ್‌ಸಿಂಹ ರಾಜಪುತರ ಸಾವಿನ ಬಗ್ಗೆ ಅವರು ಮಾಡಿದ ತಮ್ಮ ಕೊನೆಯ ಟ್ವೀಟ್‌ನ ಮೇಲೆ ಈ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿತ್ತು. ಈ ಟ್ವೀಟ್ ರಾಜಪೂತರು ತನ್ನ ಆತ್ಮಹತ್ಯೆಯ ಮೊದಲು ಸ್ವತಃ ಅಳಿಸಿ ಬಿಟ್ಟಿದ್ದರು. ಕಾರ್ಯಕ್ರಮವನ್ನು ಪ್ರಸ್ತುತಪಡಿಸುತ್ತಿರುವಾಗ ವಾಹಿನಿಯು, ‘ಹೀಗೆ ಹೇಗೆ ಹಿಟ್ ವಿಕೆಟ್(ಕ್ರಿಕೆಟ್‌ನಲ್ಲಿ ಔಟ್ ಆಗುವ ಒಂದು ಪ್ರಕಾರ) ಆದರು ಸುಶಾಂತ ?, ‘ಸುಶಾಂತ್ ಜೀವನದ ಆಟದಲ್ಲಿ ಹೇಗೆ ‘ಹಿಟ್ ವಿಕೆಟ್’ ಆದರು ?’ ‘ಸುಶಾಂತ ಇಷ್ಟು ಅಶಾಂತ ಹೇಗೆ ?’ ಹೀಗೆ ಹೇಳಿತ್ತು.

ಯಾವುದೇ ದುಃಖಕರ ಘಟನೆಯನ್ನು ಪ್ರಚೋದನಕಾರಿಯನ್ನಾಗಿಸದಿರಿ ! – ಎನ್.ಬಿ.ಎಸ್.ಐ.ಯು ‘ಆಜ್ ತಕ್’ ಗೆ ಛೀಮಾರಿ

ಇಲೆಟ್ರಾನಿಕ್ ಪ್ರಸಾರ ಮಾಧ್ಯಮಗಳ ಮೇಲೆ ನಿಯಂತ್ರಣವಿಡಲು ಎನ್.ಬಿ.ಎಸ್.ಐ.ಯು, ಮುಂದಿನಂತೆ ಹೇಳಿದೆ, ‘ಆಜ್ ತಕ್’ ವಾಹಿನಿಯು ಟ್ವೀಟ್‌ನ್ನು ಪ್ರಸಾರವನ್ನು ಮಾಡುವಾಗ ಯೋಗ್ಯ ಪ್ರಕ್ರಿಯೆಯನ್ನು ಪಾಲಿಸಲಿಲ್ಲ. ‘ಹಿಟ್ ವಿಕೆಟ್’ನ ಶೀರ್ಷಿಕೆಯನ್ನು ಉಪಯೋಗಿಸಿ ಸುಶಾಂತಸಿಂಹ ರಾಜಪುತರಿಗೆ ಪ್ರಶ್ನೆಯನ್ನು ವಿಚಾರಿಸಲಾಯಿತು. ವಾಸ್ತವದಲ್ಲಿ ಅವರು ಜೀವಂತರಿಲ್ಲ. ಆದ್ದರಿಂದ ಈ ಶೀರ್ಷಿಕೆಯು ಆಕ್ರಮಣಕಾರಿಯಾಗಿದ್ದು ಹಾಗೂ ಗೌಪ್ಯತೆಯ ಉಲ್ಲಂಘನೆಯಾಗಿದೆ, ಮೃತಪಟ್ಟ ವ್ಯಕ್ತಿಯ ಚಾರಿತ್ರ್ಯದ ಮೇಲೆ ಆಕ್ರಮಣ ಮಾಡಿದಂತಾಗುತ್ತದೆ. ಸುದ್ದಿಯನ್ನು ಬಿತ್ತರಿಸುವುದಷ್ಟೇ ವಾರ್ತಾವಾಹಿನಿಯ ಕರ್ತವ್ಯವಾಗಿದೆ. ಅದು ಮೃತಪಟ್ಟ ವ್ಯಕ್ತಿಯ ವೈಯಕ್ತಿಕ ಜೀವನದ ಮಿತಿಯನ್ನು ಉಲ್ಲಂಘಿಸಬಾರದು ಹಾಗೂ ಯಾವುದೇ ದುಃಖದ ಘಟನೆಯನ್ನು ಪ್ರಚೋದನಕಾರಿಯನ್ನಾಗಿಸಬಾರದು. (ಓರ್ವ ವ್ಯಕ್ತಿಯ ಮೃತ್ಯುವಿನ ಬಗ್ಗೆ ಪ್ರಚೋದನಕಾರಿ ವಾರ್ತೆಯನ್ನು ಬಿತ್ತಿರಿಸುವ ವಾರ್ತಾವಾಹಿನಿಯ ಈ ವೃತ್ತಿ ಅಂದರೆ ಸತ್ತವರ ನೆತ್ತಿಯ ಮೇಲಿಟ್ಟಿರುವ ಬೆಣ್ಣೆ ತಿನ್ನುವಂತಹ ಮಾನಸಿಕತೆಯಾಗಿದೆ. ಇಂತಹವರ ಮೇಲೆ ಅಪರಾಧವನ್ನು ದಾಖಲಿಸಿ ಜೀವಾವಧಿ ಶಿಕ್ಷೆ ನೀಡಬೇಕು ! – ಸಂಪಾದಕರು)