ಖಡ್ಗದಿಂದ ಕೇಕ್ ಕತ್ತಿರಿಸಿದ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ ಪ್ರಕರಣದಲ್ಲಿ ಮೂವರ ಬಂಧನ

ಜಯಸಿಂಗಪುರ (ಮಹಾರಾಷ್ಟ್ರ) – ಡಿಸೆಂಬರ ೨೧ ರಂದು ರಾಹುಲ ಕಾಂಬಳೆ, ರಾಹುಲ ಪವಾರ, ಫಕೀರಚಂದ ಪಾಥರವಟ ಹಾಗೂ ಅವರ ೧೫ ಸಹಚರರು ಕೊಳಗೇರಿ ಪ್ರದೇಶದಲ್ಲಿ ಹುಟ್ಟುಹಬ್ಬವನ್ನು ಆಚರಿಸಿದರು. ಈ ಸಮಯದಲ್ಲಿ ಅವರು ಖಡ್ಗದಿಂದ ಕೇಕ್ ಕತ್ತರಿಸಿದರು ಹಾಗೂ ಅದರ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿ ಜನರಲ್ಲಿ ಅವರ ಬಗೆಗಿನ ದಿಗಿಲು ನಿರ್ಮಾಣ ಮಾಡಲು ಪ್ರಯತ್ನಿಸಿದರು. ಈ ಅಂಶ ಗಮನದಲ್ಲಿಟ್ಟುಕೊಂಡು ಪೊಲೀಸರು ಈ ಮೂವರ ವಿರುದ್ಧ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವ, ಸಮಾಜದಲ್ಲಿ ಭಯ ನಿರ್ಮಾಣ ಮಾಡುವ, ಖಡ್ಗದಿಂದ ಕೇಕನ್ನು ಕತ್ತರಿಸಿ ಹುಟ್ಟುಹಬ್ಬವಬ್ಬು ಆಚರಿಸಿ ಸಾಮಾನ್ಯ ಜನರ ಮೇಲೆ ಗೂಂಡಾಗಿರಿಯನ್ನು ಮಾಡಿ ಅವರಿಂದ ಹಣ ಲಪಟಾಯಿಸಿ ಕೊಳ್ಳುವ ಮುಂತಾದ ಅಪರಾಧದಗಳನ್ನು ನೊಂದಾಯಿಸಿ ಅವರನ್ನು ಬಂಧಿಸಿದ್ದಾರೆ. ಪೊಲೀಸ್ ಉಪನಿರೀಕ್ಷಕ ಪ್ರಮೋದ ವಾಘ ಇವರು ಇದರ ಬಗ್ಗೆ ಇನ್ನು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ. (ಇತ್ತೀಚಿನ ಕಾಲದಲ್ಲಿ ಖಡ್ಗದಿಂದ ಕೇಕನ್ನು ಕತ್ತರಿಸುವಂತಹ ಬೀಭತ್ಸ ಮಾನಸಿಕತೆ ಯುವಕರಲ್ಲಿ ಹರಡುತ್ತಿವೆ. ಧರ್ಮಶಿಕ್ಷಣ ಇಲ್ಲದಿರುವುದರಿಂದ ಹುಟ್ಟುಹಬ್ಬಕ್ಕೆ ಕೇಕ್ ತಯಾರಿಸುವುದು, ಕಾನೂನಿನ ಭಯವಿಲ್ಲದಿರುವುದರಿಂದ ಖಡ್ಗದಿಂದ ಕೇಕ್ ಕತ್ತರಿಸುವ ಹಾಗೂ ಅದರ ಚಿತ್ರದ ಪ್ರಸಾರ ಮಾಡುವಂತಹ ಕೃತಿ ಮಾಡುವಲ್ಲಿ ಯುವಕರು ಹಿಂಜರಿಯುತ್ತಿಲ್ಲ ! – ಸಂಪಾದಕರು)